ಸ್ಥಳೀಯ ಸುದ್ದಿಗಳು

ಯಶಸ್ವಿ ಜೀವನ ಸಾಧನೆಗೆ ಆತ್ಮವಿಶ್ವಾಸ ಮುಖ್ಯ.

ನರೇಗಲ್‌ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ.

Share News

ಯಶಸ್ವಿ ಜೀವನ ಸಾಧನೆಗೆ ಆತ್ಮವಿಶ್ವಾಸ ಮುಖ್ಯ.

ನರೇಗಲ್‌ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ‌ ಉಪನ್ಯಾಸ ನೀಡಿದ ಪಿಯು ಪ್ರಾಚಾರ್ಯ ಎಸ್.‌ ಸಿ. ಗುಳಗಣ್ಣವರ ಅವರನ್ನು ಸನ್ಮಾನಿಸಲಾಯಿತು

ನರೇಗಲ್:ಸತ್ಯಮಿಥ್ಯ (ಜೂ-15)

ನೀವೂ ಕಲಿತ ವಿದ್ಯೆ ಸಮಾಜದ ಏಳಿಗೆಗೆ ಉಪಯೋಗಿಸಿ. ಯಶಸ್ವಿ ಜೀವನ ಸಾಧನೆಗೆ ವಿದ್ಯೆಯೊಂದಿಗೆ ಆತ್ಮವಿಶ್ವಾಸ ಅತಿ ಮುಖ್ಯವಾದದ್ದು.ಕಲಿಸುವ ಗುರುಗಳನ್ನು ಗೌರವದಿಂದ ಕಾಣಬೇಕು ಎಂದು ಪಿಯು ಪ್ರಾಚಾರ್ಯ ಎಸ್.‌ ಸಿ. ಗುಳಗಣ್ಣವರ ಸಲಹೆ ನೀಡಿದರು.

ನರೇಗಲ್‌ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶುಕ್ರವಾರ ನಡೆದ 2024-25ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್‌ಎಸ್‌ಎಸ್‌, ರೆಡ್‌ ಕ್ರಾಸ್‌ ,ರೋವರ್ಸ್‌, ರೇಂಜರ್ಸ್‌ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ‌ ಉಪನ್ಯಾಸ ನೀಡಿದರು.

ವಿದ್ಯಾರ್ಥಿಗಳು ಹೆತ್ತ ತಂದೆ ತಾಯಿ, ಕಲಿತ ಶಾಲೆ, ಕಲಿಸಿದ ಗುರು ಮತ್ತು ಹೊತ್ತು ಭೂಮಿಯ ಋಣ ತೀರಿಸಬೇಕಾದರೆ ಸಮಾಜ ಮೆಚ್ಚುವ ರೀತಿಯಲ್ಲಿ ಉತ್ತಮ ಪ್ರಜೆಗಳಾಗಬೇಕು. ಹಾಗೆ ಸಾಧಕರಾಗಬೇಕಾದರೆ ಅಧ್ಯಯನಶೀಲ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿ ಜೀವನ ಅತ್ಯಂತ ಅಮೂಲ್ಯವಾದದ್ದು. ವೈಯಕ್ತಿಕ ಬೆಳವಣಿಗೆ ಮಾತ್ರವಲ್ಲದೆ ಸಮಾಜ ಮತ್ತು ದೇಶದ ಪ್ರಗತಿ ಬಗ್ಗೆಯೂ ವಿದ್ಯಾರ್ಥಿ, ಯುವಜನರಿಗೆ ಜವಾಬ್ದಾರಿ ಇರಬೇಕು. ಓದುವ ಸಮಯದಲ್ಲಿ ಕಾಲಹರಣ ಮಾಡಿದರೆ ಕಷ್ಟ, ನೋವು ಕಟ್ಟಿಟ್ಟ ಬುತ್ತಿ ಎಂಬುದು ಮರೆಯಬಾರದು. ನೈತಿಕ ಮಾರ್ಗದಲ್ಲಿ ನಡೆದು ಗುರಿ ಸಾಧನೆ ಮಾಡಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಎಂ. ಎಸ್.‌ ಧಡೆಸೂರಮಠ ಮಾತನಾಡಿ, ತರಗತಿಯಲ್ಲಿ ಎಲ್ಲರಿಗೂ ಒಂದೇ ರೀತಿ ಶಿಕ್ಷಣ ಸಿಕ್ಕರೂ ಎಲ್ಲರೂ ಸಾಧನೆ ಮಾಡುವುದಿಲ್ಲ. ಸಾಧಿಸಬೇಕೆಂಬ ಹಠ ಮತ್ತು ಛಲ ಇದ್ದವರು ಮಾತ್ರ ಸಾಧಕರಾಗುತ್ತಾರೆ ಎಂದು ಅಭಿಪ್ರಾಯಪಟ್ಟರು. ಸಮಯ ಹೋದದ್ದೇ ಗೊತ್ತಾಗಲಿಲ್ಲ. ದಿನಗಳು ಬಹಳ ವೇಗವಾಗಿ ಕಳೆದು ಹೋಗುತ್ತಿವೆ. ಏನನ್ನೂ ಸಾಧಿಸಲಾಗಲಿಲ್ಲ ಎಂಬ ಅಳಲು ತೋಡಿಕೊಳ್ಳುವ ಬದಲಿಗೆ ಅದನ್ನು ಉಪಯೋಗಿಸಿಕೊಂಡು, ಪ್ರಾಧ್ಯಾಪಕರ ಮಾರ್ಗದರ್ಶನದಲ್ಲಿ ಉತ್ತಮವಾದ ಜೀವನವನ್ನು ಕಂಡುಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಕರವೇ ಜಿಲ್ಲಾಧ್ಯಕ್ಷ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಮಾತನಾಡಿ ಹನಮಂತಪ್ಪ ಎಚ್.‌ ಅಬ್ಬಿಗೇರಿ, ಜೀವನದಲ್ಲಿ ಅಸಾಧ್ಯವಾದುದನ್ನು ಸಾಧಿಸುವ ಛಲ ಮತ್ತು ಆತ್ಮವಿಶ್ವಾಸವಿದ್ದರೆ ಸಾಧನೆ ಹಾದಿ ಸುಲಭವಾಗಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿ ಗಳು ಪ್ರಯತ್ನಪಟ್ಟರೆ ಖಂಡಿತಾ ಯಶಸ್ಸು ಲಭಿಸಲಿದೆ ಎಂದು ತಿಳಿಸಿದರು.

ಪದವಿ ಪ್ರಾಂಶುಪಾಲ ಎಸ್.‌ ಎಲ್.‌ ಗುಳೇದಗುಡ್ಡ ಮಾತನಾಡಿ, ಜೀವನದಲ್ಲಿ ಗುರಿ ಇಲ್ಲದಿದ್ದರೆ ಸಾಧನೆ ಅಸಾಧ್ಯ. ಆಯ್ಕೆ ಮಾಡಿಕೊಂಡ ಗುರಿಯನ್ನು ಸಾಧಿಸುತ್ತೇನೆಂಬ ಹಠ ಮತ್ತು ಛಲ ಇದ್ದರೆ ಏನೇ ತೊಡಕುಗಳು ಬಂದರೂ ಸಾಧನೆ ಮಾಡಬಹುದು. ಸಾಧಿಸಿದ ಮೇಲೆ ಕೇವಲ ಕುಟುಂಬಕ್ಕೆ ಸೀಮಿತವಾಗದೆ ಸಮಾಜಕ್ಕೆ, ದೇಶಕ್ಕೆ ನಮ್ಮಿಂದ ಏನಾದರೂ ಕೊಡುಗೆ ನೀಡಬೇಕು ಎಂದರು.

ವಿವಿಧ ವಿಭಾಗಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶರಣಪ್ಪ ಕುರಿ, ದಾವುದ್‌ ಅಲಿ ಕುದರಿ, ವೀರಪ್ಪ ಜೀರ್ಲ, ಆನಂದ ನಡುವಲಕೇರಿ, ಬಸೀರಾಬಾನು ಅಲ್ಲಾಬಕ್ಷಿ ನದಾಫ್‌, ರೇಣುಕಾ ಧರ್ಮಾಯತ, ಈ. ಆರ್.‌ ಲಗಳೂರ, ಸಜಿಲಾ, ಸಾಂಸ್ಕೃತಿಕ ಸಂಚಾಲಕ ಎಸ್.‌ ಎಸ್.‌ ಸೂಡಿ, ಐಕ್ಯೂಎಸಿ ಸಂಚಾಲಕಿ ಜಯಶ್ರೀ ಮುತಗಾರ, ಕ್ರೀಡಾ ವಿಭಾಗದ ಸಂಚಾಲಕಿ ಕಾಂಚನಮಾಲಾ ಪಾಟೀಲ, ಎನ್‌ಎಸ್‌ಎಸ್‌ ಸಂಚಾಲಕರಾದ ಎಸ್.‌ ಪಿ. ಕುರೇರ, ಎಸ್.‌ ಎಸ್.‌ ಮುಂಜಿ ಇದ್ದರು.

ವರದಿ:ಸುರೇಶ ಬಂಡಾರಿ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!