
ಜಿಲ್ಲೆಯ ಯೋಧ ಪಂಜಾಬ್ನ ಜಲಂಧರ್ನಲ್ಲಿ ಹುತಾತ್ಮ!
ಗದಗ:ಸತ್ಯಮಿಥ್ಯ(ಸೆ-09)
ಭಾರತೀಯ ಸೇನೆಯಲ್ಲಿ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಜಿಲ್ಲೆಯ ಗದಗ ತಾಲ್ಲೂಕಿನ, ನರಗುಂದ ಮತಕ್ಷೇತ್ರ ವ್ಯಾಪ್ತಿಯ ಹಿರೇಕೊಪ್ಪ ಗ್ರಾಮದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಕರ್ತವ್ಯದಲ್ಲಿದ್ದಾಗಲೇ ಮಂಗಳವಾರ ವೀರಮರಣವನ್ನಪ್ಪಿದ್ದಾನೆ.
ಪ್ರಸ್ತುತ ಪಂಜಾಬ ರಾಜ್ಯದ ಜಲಂಧರ್ನಲ್ಲಿ ಇರುವ ‘ಎಎಸ್ಸಿ’ ಸೆಂಟರ್ನಲ್ಲಿ ಯೋಧನಾಗಿ 13 ಷರ್ವಗಳಿಂದ ಕರ್ತವ್ಯದ ಮೇಲಿದ್ದ. ಸೇನೆಯ ವಸತಿ ಗೃಹದಲ್ಲಿ ಕುಟುಂಬ ಸಹಿತ ವಾಸವಾಗಿದ್ದ ಯೋಧನ ಮಂಜುನಾಥ ಮಂಗಳವಾರ ಬೆಳಿಗ್ಗೆ ಹುತಾತ್ಮರಾಗಿದ್ದಾರೆ ಎನ್ನಲಾಗಿದೆ. ಮೃತ ಯೋಧನಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ-ತಾಯಿ, ಸಹೋದರ ಸೇರಿ ಅಪಾರ ಬಂಧು-ಬಳಗವಿದೆ. ಮೃತ ಯೋಧನ ಪಾರ್ಥೀವ ಶರೀರವು ಸೇನೆಯ ಹೆಲಿಕಾಪ್ಟರ್ ಅಥವಾ ವಿಶೇಷ ವಿಮಾನದಲ್ಲಿ ಹುಬ್ಬಳ್ಳಿವರೆಗೆ ಬಂದು, ಅಲ್ಲಿಂದ ಸ್ವಗ್ರಾಮ ಗದಗ ತಾಲ್ಲೂಕಿನ ಹಿರೇಕೊಪ್ಪ ಗ್ರಾಮಕ್ಕೆ ಬರಬಹುದ ಎಂದು ಹೇಳಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಗ್ರಾಮದಲ್ಲಿ ನೀರವ ಮೌನ: ಗ್ರಾಮದ ಯೋಧ ಹುತಾತ್ಮರಾಗಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಮೃತ ಯೋಧನ ಮನೆ ಬಳಿ ಜಮಾಯಿಸಿದ್ದಾರೆ. ಗ್ರಾಮದಲ್ಲಿ ಇದೀಗ ನೀರವ ಮೌನ ಆವರಿಸಿದೆ.
ವರದಿ:ಮುತ್ತು ಗೋಸಲ