
ಮಠಮಾನ್ಯಗಳು ಧರ್ಮೋಪದೇಶದ ಜೊತೆಗೆ ದೇಶಾಭಿಮಾನ ಹೊಂದಿವೆ- ಕಂಪ್ಲಿ. ಶ್ರೀ ಅಭಿಮತ.
ಕೊಪ್ಪಳ – ಸತ್ಯಮಿಥ್ಯ (ಆಗಸ್ಟ್ -15).
ಯಾರಿಗೆ ಬಂತು, ಎಲ್ಲಿಗೆ ಬಂತು, 1947 ರ ಸ್ವಾತಂತ್ರ್ಯ? ಎಂದು ಕೇಳುವಂತಹ ಪರಿಸ್ಥಿತಿ ಇಂದಿನ ಕೆಲವು ವಿದ್ಯಮಾನಗಳನ್ನು ನೋಡಿದ್ರೆ, ಗಮನಿಸಿದ್ರೆ ಹೇಳಬೇಕು ಅನಿಸುವುದು ಖಂಡಿತ. ಆದರೂ ಸಹ ನಾವು ಪ್ರತಿವರ್ಷ ಸ್ವಾತಂತ್ರ್ಯ ಸಿಕ್ಕ ದಿನವನ್ನು ಭಾರತೀಯರಾದ ನಾವು ಹೆಮ್ಮೆಯಿಂದ ನೆನೆಯಬೇಕಿದೆ. ಅದರ ಮಹತ್ವ ತಿಳಿಯಬೇಕಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಪ್ರಾಣತೆತ್ತ, ಬಲಿದಾನವಾದ ಎಲ್ಲ ವೀರರನ್ನು ನೆನೆದು, ಅವರಿಗೆ ನಮನ ಸಲ್ಲಿಸಬೇಕಿದೆ.ಎಲ್ಲರೂ ದೇಶ ಅಭಿಮಾನವನ್ನು ಹೊಂದಬೇಕು ಮತ್ತು ಅನನ್ಯತೆಯಿಂದ ಬದುಕಬೇಕಾಗಿದೆ. ಕೇವಲ ಮಠಮಾನ್ಯಗಳು, ಧರ್ಮೋಪದೇಶ ಮಾಡುವುದಲ್ಲದೆ ದೇಶದ ಬಗ್ಗೆ ಗೌರವ ಅಭಿಮಾನ ಹೊಂದಿವೆ ಎಂದು ಕಂಪ್ಲಿ ಶ್ರೀಗಳು ಅಭಿಮತ.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ಶ್ರೀ ಅನ್ನದಾನೇಶ್ವರ ಶಾಖಾಮಠದ ವತಿಯಿಂದ 78ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ನೆರವೇರಿಸಿ ಕಂಪ್ಲಿ ಶ್ರೀಗಳು ಮಾತನಾಡಿದರು.
ಈ ಸಂದರ್ಭದಲ್ಲಿ ಡಾ.ಮಹಾದೇವಯ್ಯ ಮಹಾಸ್ವಾಮಿಗಳು,ಶಿವಯೋಗಿಸ್ವರ ಮಹಾಸ್ವಾಮಿಗಳು ಸೊರಟೂರು,ವೀರಯ್ಯ ತೋಂಟದಾರ್ಯ ಮಠ, ವಿ.ಜಿ .ಬಳಗೇರಿ, ಕಾಸಿಂ ಸಾಬ್ ಸಂಗಟಿ, ತಿಪ್ಪಣ್ಣ ಗ್ರಂಥಾಲಯ, ಪ್ರಭು ಶಿವಸಿಂಪರ್, ಆನಂದ ಜೆ.ಕೆ ಮುಂತಾದವರು ಇದ್ದರು.
ವರದಿ : ಚೆನ್ನಯ್ಯ ಹಿರೇಮಠ.