ರಾಜ್ಯ ಸುದ್ದಿ

ಬಿಜೆಪಿ ಸದಸ್ಯತ್ವ ನೊಂದಣಿಯಲ್ಲಿ ಪ್ರಥಮ ಬಹುಮಾನ ೧೦ ಗ್ರಾಂ ಚಿನ್ನ ವಜ್ಜಲ್ ಘೋಷಣೆ!

Share News

ಬಿಜೆಪಿ ಸದಸ್ಯತ್ವ ನೊಂದಣಿಯಲ್ಲಿ ಪ್ರಥಮ ಬಹುಮಾನ ೧೦ ಗ್ರಾಂ ಚಿನ್ನ ವಜ್ಜಲ್ ಘೋಷಣೆ!

ರಾಜ್ಯದಲ್ಲಿ ಸರಕಾರ ದಿವಾಳಿಯಾಗಿದೆ, ಮುದಗಲ್ ತಾಲೂಕಾ ಮಾಡಲು ಹಿಂದೇಟು,೪೦ ಗ್ರಾಮಗಳಿಗೆ ನೀರಾವರಿ ದೊರೆಯದಿದ್ದರೆ ಹೋರಾಟ ಅನಿವಾರ್ಯ-ವಜ್ಜಲ್

ಲಿಂಗಸುಗೂರ:ಸತ್ಯಮಿಥ್ಯ (ಸ -03)

ಭಾರತೀಯ ಜನತಾ ಪಾರ್ಟಿ ನೂತನ ಸದಸ್ಯತ್ವ ಅಭಿಯಾನ ಪ್ರತಿ ಬೂತನಲ್ಲಿ ೪೦೦ಕ್ಕೂ ಹೆಚ್ಚು ಸದಸ್ಯತ್ವ ಮಾಡಿಸಲು ಬೂತಿನ ಅಧ್ಯಕ್ಷರುಗಳಿಗೆ ಹಾಗೂ ಕಾರ್ಯಕರ್ತರಿಗೆ ಶಾಸಕ ಮಾನಪ್ಪ ವಜ್ಜಲ್ ಕರೆ ನೀಡಿದರು

ಅವರು ಪಟ್ಟಣದಲ್ಲಿ ಮಾರವಾಡಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ ಬಿಜೆಪಿ ಸದಸ್ಯತ್ವ ಅಭಿಯಾನ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ ಸದಸ್ಯತ್ವ ನೊಂದಣ ಬೂತ ಮಟ್ಟದಲ್ಲಿ ಹೆಚ್ಚು ನೋಂದಾಯಿಸಿ ಪ್ರಥಮ ಬಂದವರಿಗೆ ೧೦ಗ್ರಾಂ ಚಿನ್ನ ಹಾಗೂ ದ್ವೀತಿಯ ಬೆಳ್ಳಿ ಕಡಗ ವೈಯಕ್ತಿಕ ಕಾಣಿಕೆ ನೀಡಿ ಸನ್ಮಾನಿಸುವದಾಗಿ ಶಾಸಕ ವಜ್ಜಲ್ ಘೋಷಿಸಿದರು.

ಲಿಂಗಸುಗೂರ ರಾಯಚೂರ ಜಿಲ್ಲೆಗೆ ಸದಸ್ಯತ್ವ ನೊಂದಣಿಯಲ್ಲಿ ಪ್ರಥಮ ಸ್ಥಾನಕ್ಕೆ ಬರಬೇಕು ಎಂದು ಶಾಸಕ ವಜ್ಜಲ್ ಹೇಳೀದರು.ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವು ದಿವಾಳಿಯಾಗಿದ್ದು ಯಾವ ಶಾಸಕರಿಗೂ ಅನುದಾನವನ್ನು ನೀಡುತ್ತಿಲ್ಲ ಲಿಂಗಸಗೂರು ಕ್ಷೇತ್ರದ ೪೦ ಗ್ರಾಮಗಳು ನೀರಾವರಿಯಿಂದ ವಂಚಿತವಾಗಿದ್ದು ಅವುಗಳಿಗೆ ನೀರು ದೊರೆಯದಿದ್ದರೆ ಹೋರಾಟಕ್ಕೂ ಸಿದ್ದವಿರುವುದಾಗಿ ಹೇಳಿದರು

ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ಮುದಗಲ್ ತಾಲೂಕಾ ಮಾಡುವುದಾಗಿ ಹೇಳಿದ್ದರು ಈಗ ತಾಲೂಕಾ ಮಾಡಿ ಎಂದು ಕೇಳಿದರೆ ಹಣ ಎಲ್ಲಿದೆ ಎನ್ನುತ್ತಾರೆ ತಾಲೂಕಾ ಮಾಡಲು ಹಣವಿಲ್ಲ ಕೈಗಾರಿಕೆ ಮಾಡಿ ನಮ್ಮಲ್ಲಿ ಮಹಿಳೆಯರಿಗೆ ಉದ್ಯೋಗಕೊಡಬೇಕಾಗಿದೆ ಎಂದರೆ ಹಣವಿಲ್ಲ ಎನ್ನುತ್ತಾರೆ ತಮ್ಮ ಪಕ್ಷದ ಶಾಸಕರಿಗೆ ಅನುದಾನ ನೀಡುತ್ತೇವೆ ಎಂದು ಮಾತುಕೊಟ್ಟಿದ್ದಾರೆ ಹೊರತು ಅನುದಾನ ನೀಡಿಲ್ಲ ಅದಕ್ಕಾಗಿ ಇದು ದಿವಾಳಿ ಸರ್ಕಾರವಾಗಿದೆ ಎಂದರು

ಮೋದಿ ಬಿಜೆಪಿ ಪಕ್ಷವನ್ನು ಪ್ರಪಂಚದಲ್ಲಿಯೆ ದೊಡ್ಡಪಕ್ಷವಾಗಿ ಮಾಡಿದ್ದಾರೆ ಜಗತ್ತು ಭಾರತದತ್ತ ಹೊರಳಿನೋಡುವಂತೆ ಮಾಡಿದ್ದಾರೆ ಅಂತಹ ಪಕ್ಷದಲ್ಲಿ ನಾವು ಸೇವೆ ಸಲ್ಲಿಸುತ್ತಿರುವುದು ಸಂತಸದ ವಿಷಯ ಎಂದರು,

ನೂತನ ಪಧಾದಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಜರುಗಿತು, ಭಾರತೀಯ ಜನತಾ ಪಾರ್ಟಿಯ ಮುದುಗಲ್ ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿ ಶಿವಶಂಕರ್ ಆನೆಹೊಸೂರ ಅವರನ್ನು ಆಯ್ಕೆ ಮಾಡಿ ಆದೇಶ ಪತ್ರವನ್ನು ಜನಪ್ರೀಯ ಶಾಸಕರಾದ ಮಾನಪ್ಪ.ಡಿ.ವಜ್ಜಲ್ ರವರು ನೀಡಿದರು, ಮುದುಗಲ್ ಮಂಡಲ್ ಅದ್ಯಕ್ಷರು ಆದ ಹುಲ್ಲೇಶಪ್ಪ ಸಾಹುಕಾರ, ಮುಖಂಡರಾದ ಜಗನ್ನಾಥ ಕುಲಕರ್ಣಿ , ಬಸ್ಸಣ್ಣ ಮೇಟಿ, ನಾರಾಯಣಪ್ಪ ನಾಯಕ ಬಸ್ಸಮ್ಮ ಯಾದವ, ಚಂದಾವಲಿ ತಿಮ್ಮಣ್ಣ, ಮಹಾಂತಗೌಡ ಪಾಟೀಲ್, ಎನ್ ಸ್ವಾಮಿ, ಬಸಣ್ಣ ನೀರಲಕೇರಿ, ಸಿದ್ದರಾಮಯ್ಯ, ಲಿಂಗಣ್ಣ ದೇವಿಕೆರಿ, ಇತರರು ಭಾಗವಹಿಸಿದ್ದರು.

ಮಂಡಲ ಅಧ್ಯಕ್ಷ ಅಯ್ಯಪ್ಪ ಮಾಳೂರ ಸದಸ್ಯತ್ವ ನೊಂದಣೀ ಪ್ರಕ್ರೀಯೆ ಕುರಿತು ಮಾತನಾಡಿದರು ಸ್ವಾಗತಿಸಿ ವಂದಿಸಿದವರು ಅನಂತದಾಸ ನಿರೂಪಿಸಿದರು.

ವರದಿ : ಶಿವು ರಾಠೋಡ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!