ಜಗದ್ಗುರು ತೋಂಟದಾರ್ಯ ಮಹಾವಿದ್ಯಾಲಯ ಪ್ರಾಂಗಣ : ಯೋಗ ದಿನಾಚರಣೆ
ಗಜೇಂದ್ರಗಡ: ಸತ್ಯ ಮಿಥ್ಯ (ಜೂ -21).
ಪತಂಜಲಿ ಯೋಗ ಸಮಿತಿ ಮತ್ತು ಜಗದ್ಗುರು ತೋಂಟದಾರ್ಯ ಸಿಬಿಎಸ್ಇ ಹಾಗೂ ಪಿ.ಯು ಕಾಲೇಜು ಗಜೇಂದ್ರಗಡ ಸಂಸ್ಥೆಗಳ ಸಹಯೋಗದಲ್ಲಿ ದಿನಾಂಕ 21-06-2024 ಶುಕ್ರವಾರ ಬೆಳಿಗ್ಗೆ ಮಹಾವಿದ್ಯಾಲಯದ ಪ್ರಾಂಗಣದಲ್ಲಿ 10ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಪ್ರತಿ ದಿನ ಯೋಗಾಸನ ಮಾಡುವ ಮೂಲಕ ನಾವು ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಪಡೆಯಬಹುದು, ಪ್ರತಿದಿನ ಯೋಗ ಮತ್ತು ಪ್ರಾಣಾಯಾಮ ಮಾಡುವ ಮೂಲಕ ಸಕಾರಾತ್ಮಕ ಪರಿಣಾಮಗಳನ್ನು ಬೆಳಿಸಿಕೊಳ್ಳಿ.ಯೋಗದಲ್ಲಿ ಆರೋಗ್ಯದ ಭಾಗ್ಯವಿದೆ ಎಂದು ಸಂಚಾಲಕ ಪ್ರಕಾಶ ಬಾಕಳೆ ಯೋಗದ ಭಂಗಿಗಳ ಬಗ್ಗೆ ವಿವರಣೆ ನೀಡಿದರು.
ಈ ಸಂದರ್ಭದಲ್ಲಿ ಪಿ.ಯು ಕಾಲೇಜಿನ ಪ್ರಚಾರ್ಯರಾದ ಸಂಗಮೇಶ ಬಾಗೂರ, ಸಿಬಿಎಸ್ಇ ಮುಖ್ಯೋಪಾಧ್ಯಾಯರಾದ ಕವಿತಾ ಪಾಟೀಲ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಅಶೋಕ ಅಂಗಡಿ, ವಿರೇಶ ಕುದರಿ, ಆನಂದ ಜೂಚನಿ, ಮಲ್ಲನಗೌಡ ಗೌಡರ, ಶಿವಕುಮಾರ ಕೊಸಗಿ, ಸಿದ್ರಾಮೇಶ ಕರಬಾಶೆಟ್ಟರ, ನಾಗರತ್ನಾ ಕಡ್ಡಿ, ಈರಣ್ಣ ಮಲಕಣ್ಣವರ, ಹನಮಪ್ಪ ನಡಕಟ್ಟಿನ, ದೊಡ್ಡೇಶ ವಿವೇಕಿ, ಶೃತಿ ನಡಕಟ್ಟಿನ, ವಿರೇಶ ಅಂಗಡಿ, ಫಾತಿಮಾ ಖುದ್ದಣ್ಣವರ, ಮಾಧುರಿ ನಾಡಗೇರ, ಪ್ರವೀಣ ಚಿತ್ರಗಾರ, ದೈಹಿಕ ಶಿಕ್ಷಕರಾದ ಗುರುರಾಜ, ಪ್ರಶಾಂತ ಹಾರೊಗೇರಿ, ಶಾರಧ ಅಂಬೊರೆ ಮುಂತಾದವರು ಹಾಜರಿದ್ದರು.
ವರದಿ : ವಿರೂಪಾಕ್ಷ.