ತಾಲೂಕು
ಶಿಕ್ಷಕರ ವಾರ್ಷಿಕ ಹಿಂಬಡ್ತಿ ಆದೇಶ ವಾಪಸ್ ಪಡೆದ ಸಿಇಒ
ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದಿಂದ ಆದೇಶ ಹಿಂದೆ ಪಡಿಯಲು ಮನವಿ ಸಲ್ಲಿಸಲಾಗಿತ್ತು.

. *ಶಿಕ್ಷಕರ ವಾರ್ಷಿಕ ಬಡತೆಗೆ ಆದೇಶ ವಾಪಸ್ ಪಡೆದ ಸಿಇಒ*
ಯಾದಗಿರಿ : ಸತ್ಯಮಿಥ್ಯ ( ಜೂ -28)
ಇಂದು ಯಾದಗಿರಿಯಲ್ಲಿ ಮಾನ್ಯ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಪ್ರಯೋಗ ದರ್ಪಣ 2 ಸಭೆಯಲ್ಲಿ ಇತ್ತೀಚಿಗೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಿಮೆ ಫಲಿತಾಂಶ ಬಂದ ಕಾರಣ ಶಿಕ್ಷಕರ ಒಂದು ಇನ್ ಕ್ರಿಮೆಂಟ್ ತಡೆಹಿಡಿಯುವ ಆದೇಶವನ್ನು ಹಿಂದೆ ಪಡೆಯುವಂತೆ ಯಾದಗಿರಿ ಜಿಲ್ಲಾ ಪ್ರೌಢ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ H.B. ಬಂಡಿ ಸರ್ ಅವರು ಮಾನ್ಯರಲ್ಲಿ ವಿನಂತಿಸಿಕೊಂಡಿದ್ದರು.
ನಂತರ ಮಾನ್ಯ ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿ ಇದೊಂದು ಸಲ ಅವಕಾಶ ನೀಡುತ್ತೇನೆ ಹಾಗೂ ಮುಂದಿನ ದಿನಗಳಲ್ಲಿ ಫಲಿತಾಂಶ ಚೆನ್ನಾಗಿ ಮಾಡಿ ಎಂದು ಹೇಳಿದ ನಂತರ ಆದೇಶವನ್ನು ಮರು ಪರಿಶೀಲಿಸುತ್ತೆನೆಂದು ಒಪ್ಪಿಗೆ ಸೂಚಿಸಿದರು.ಅದಕ್ಕಾಗಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳಿಗೆ ಜಿಲ್ಲೆಯ ಎಲ್ಲ ಪ್ರೌಢ ಶಾಲಾ ಶಿಕ್ಷಕರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಶಿವು ರಾಠೋಡ