
ವೈದ್ಯರ ನಿರ್ಲಕ್ಷ ಬಾಣಂತಿ ಸಾವು: ಪತಿ ಸಂತೋಷ ಆರೋಪ.
ಅಥಣಿಯ ತಾಲೂಕಾಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಗರ್ಭಿಣಿ.ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂದಣ
ಮುಗಳಖೋಡ : ಸತ್ಯಮಿಥ್ಯ (ಜ -25).
9 ತಿಂಗಳು ತುಂಬು ಗರ್ಭಿಣಿಯನ್ನು ಚಿಕಿತ್ಸೆಗೆಂದು ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಆದರೆ ವೈದ್ಯರ ನಿರ್ಲಕ್ಷ್ಯದಿಂದ ರಕ್ತಸ್ರಾವ ಹೆಚ್ಚಾಗಿ ನನ್ನ ಪತ್ನಿ ಸಾವನಪ್ಪಿದ್ದಾಳೆ ಎಂದು ಮೃತ ಮುತ್ತವ್ವ ಗೊಳಸಂಗಿ ಇವರ ಪತಿ ಸಂತೋಷ ಗೊಳಸಂಗಿ ಆರೋಪಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲ್ಲೂಕಿನ ಮುಗಳಖೋಡದ ನಿವಾಸಿ ಸಂತೋಷ ದುರ್ಗಪ್ಪ ಗೊಳಸಂಗಿ ಇವರ ಮಡದಿ ಮುತ್ತವ್ವ ಸಂತೋಷ ಗೊಳಸಂಗಿ (21) ಇವರು ಮೃತ ದುರ್ಧೈವಿ ಅವರು ಹೆರಿಗೆಗಾಗಿ ರಾಯಬಾಗ ತಾಲ್ಲೂಕಿನ ಚಿಂಚಲಿ, ಗಣಿಕೋಡಿಯಲ್ಲಿನ ತವರು ಮನೆಗೆ ಹೋಗಿದ್ದರು. ಹೆರಿಗೆ ದಿನಾಂಕವನ್ನು ಇದೆ ತಿಂಗಳು 31 ಕ್ಕೆ ನೀಡಿದ್ದರು ಆದರೆ ಆರೋಗ್ಯದಲ್ಲಿ ಏರುಪೇರಾದ ಸಲುವಾಗಿ ಅಥಣಿ ತಾಲ್ಲೂಕಾ ಆಸ್ಪತ್ರೆಗೆ ಜನೆವರಿ 22 ರಂದು ದಾಖಲಿಸಲಾದ ಹಿನ್ನೆಲೆಯಲ್ಲಿ ಗರ್ಬೀಣಿಯ ರಕ್ತದೊತ್ತಡ (ಬಿಪಿ)ಯಲ್ಲಿ ನಿರಂತರ ವ್ಯತ್ಯಾಸ ಕಾಣುತ್ತಿದ್ದ ಕಾರಣ ಶಸ್ತ್ರಚಿಕಿತ್ಸೆ ಮೂಲಕ ಗುರುವಾರದಂದು ಹೆರಿಗೆ ಮಾಡಿದ್ದಾರೆ. ಆದರೆ ಶಸ್ತ್ರಚಿಕಿತ್ಸೆಯಿಂದ ರಕ್ತಸ್ರಾವ ನಿಲ್ಲದ ಕಾರಣ ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲು ಖಾಸಗಿ ವಾಹನದಲ್ಲಿ ಕರೆದುಕೊಂಡು ಹೊಗುವಾಗ ಮಾರ್ಗ ಮಧ್ಯ ಹೆಣ್ಣು ಮಗುವಿಗೆ ಜನ್ಮ ನೀಡಿ ಸಾವನಪ್ಪಿದ್ದಾಳೆ. ಇದು ಅಥಣಿ ತಾಲ್ಲೂಕಾ ಆಸ್ಪತ್ರೆಯ ಸಿಬ್ಬಂದಿಯ ದಿವ್ಯ ನಿರ್ಲಕ್ಷ್ಯದಿಂದ ಸಾವಿಗೀಡಾದ್ದಾಳೆ ಇದರ ಬಗ್ಗೆ ನನಗೆ ಸಂಶಯ ಇದೆ ಎಂದು ಪತಿ ಅಥಣಿ ಪೋಲಿಸ್ ರಾಣೆಗೆ ದೋರು ನೀಡಿದ್ದಾರೆ.
ಅಥಣಿ ಪಿಎಸ್ ಐ ಗಿರಮಲ್ಲಪ್ಪ ಉಪ್ಪಾರ ಹಾಗೂ ಸಿಬ್ಬಂದಿಯವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಜನಿಸಿದ ಹೆಣ್ಣು ಮಗು ಆರೋಗ್ಯವಾಗಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ತಾಲೂಕಾ ವೈದ್ಯಾದಿಕಾರಿ ಡಾ.ಬಸನಗೌಡಾ ಕಾಗೆ ಮಾತನಾಡಿ ಹೆರಿಗೆ ಸಮಯದಲ್ಲಿ ಬಿಪಿ ಸಂಪೂರ್ಣವಾಗಿ ಕಡಿಮೆಯಾದ ಹಿನ್ನೆಲೆ ಬಾಣಂತಿ ಸಾವಾಗಿದೆ , ನಿತ್ಯವೂ ಸಾಕಷ್ಟು ಹೆರಿಗೆ ಮಾಡಿಸುತ್ತೇವೆ ನಮ್ಮಲ್ಲಿ ಈ ವರೆಗೂ ಯಾವುದೇ ಬಾಣಂತಿ , ಶಿಶುಗಳ ಸಾವಾಗಿಲ್ಲಾ ಇದೆ ಮೊದಲಾಗಿದೆ ಇದು ಯಾವ ಕಾರಣಕ್ಕೆ ಆಗಿದೆ ಎನ್ನುವದು ಮರಣ್ಣೋತ್ತರ ಪರಿಕ್ಷಾ ವರದಿ ಬಂದ ಮೇಲೆ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ವರದಿ: ಸಂತೋಷ ಮುಗಳಿ.