
ದಿ. ಲಕ್ಷ್ಮಿ ಅರ್ಬನ್ ಬ್ಯಾಂಕ ಚುನಾವಣೆ – ಉಮೇದುವಾರ ಬಸವರಾಜ ಕೊಟಗಿ ಸುದ್ದಿಗೋಷ್ಠಿ.
ಗಜೇಂದ್ರಗಡ – ಸತ್ಯಮಿಥ್ಯ (ಡಿ -28).
ನಗರದ ದಿ. ಲಕ್ಷ್ಮಿ ಅರ್ಬನ್ ಬ್ಯಾಂಕಿನ ಆಡಳಿತ ಮಂಡಳಿ ನಿರ್ದೇಶಕರ ಸಾಮಾನ್ಯ ಕ್ಷೇತ್ರದ ಚುನಾವಣೆ ಪ್ರಕ್ರಿಯೆ ಬರದಿಂದ ಸಾಗಿದೆ.
ರವಿವಾರ ಡಿಸೇಂಬರ್ 29 ರಂದು ನಡೆಯುವ ಚುನಾವಣೆಯ ಪ್ರಯುಕ್ತ ಕುಷ್ಟಗಿ ರಸ್ತೆಯ ಜಾಲಿಹಾಳ ಸಾ ಮಿಲ್ ನಲ್ಲಿ ಇಂದು ಪತ್ರಿಕಾಗೋಷ್ಠಿ ಕರೆದಿದ್ದರು.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಸವರಾಜ ಕೊಟಗಿ. ಪ್ರಜಾಪ್ರಭುತ್ವ ಸಾಮಾಜಿಕ ಕ್ಷೇತ್ರದಲ್ಲಿ ಸ್ಪರ್ಧೆಮಾಡಲು ಅವಕಾಶ ಕಲ್ಪಿಸಿದೆ ಆದ್ದರಿಂದ ಸ್ಪರ್ಧೆ ಮಾಡಿದ್ದೇನೆ. ಕಳೆದ ಎರಡು ಅವಧಿಯ ಸಂದರ್ಭದಲ್ಲಿ ಹಿರಿಯರ ಮಾತಿಗೆ ಬೆಲೆಕೊಟ್ಟು ನಾನು ಸ್ಪರ್ಧೆಯಿಂದ ಹಿಂದೆ ಸರಿದಿದ್ದೆ. ನನಗು ಕೂಡಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬೇಕು ಮತ್ತು ಬ್ಯಾಂಕನ್ನು ಉನ್ನತ ಮಟ್ಟಕ್ಕೆ ಏರಿಸುವ ಗುರಿಯೊಂದಿಗೆ ಸ್ಪರ್ಧೆ ಮಾಡಿದ್ದೇನೆ. ಬ್ಯಾಂಕಿನ ಶಾಖೆಗಳನ್ನು ಹೆಚ್ಚು ಮಾಡುವದು, ಬ್ಯಾಂಕಿನ ಸದಸ್ಯರ ಮಕ್ಕಳ ಉದ್ಯೋಗ ಅವಕಾಶ ಒದಗಿಸುವದು, ಬ್ಯಾಂಕಿನ ಸದಸ್ಯರಿಗೆ ಆರ್ಥಿಕವಾಗಿ ಸಹಕಾರ ನೀಡುವ ಮೂಲಕ ವ್ಯಾಪಾರ ವೃದ್ಧಿಸುದು, ಬ್ಯಾಂಕಿನ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಮತ್ತು ದುರ್ಬಲವಾದ ಸದಸ್ಯರಿಗೆ ಬೆಂಬಲವಾಗಿ ನಿಲ್ಲುವ ಉದ್ದೇಶಹೊಂದಿದ್ದೇನೆ ಆದ್ದರಿಂದ ನನಗೆ ಮತ ನೀಡುವ ಮೂಲಕ ನನ್ನ ಗೆಲುವಿಗೆ ಸಹಕರಿಸಲು ಕೋರಿಕೊಂಡರು. ಚುನಾವಣೆ ಅಂದ ಮೇಲೆ ಬ್ಯಾನರ್ ಹಾಕಿಸುವದು ಸಹಜವಾಗಿ ಪ್ರಕ್ರಿಯೇ ಇದನ್ನೂ ತಮ್ಮ ರಾಜಕೀಯ ಬಳಸಿಕೊಂಡು ಕೀಳಿಸುವ ಪ್ರಯತ್ನ ಮಾಡಿದ್ದಾರೆ. ನಂತರ ಪರವಾನಗಿ ಪತ್ರ ನೀಡಿ ಮರಳಿ ಬ್ಯಾನರ್ ಹಾಕಿಸಿದ್ದೇನೆ ಇಂತಹ ಕ್ಷುಲ್ಲಕ ರಾಜಕೀಯ ನನಗೆ ನೋವು ನೀಡಿದೆ ಎಂದರು.
ಈ ಸಂದರ್ಭದಲ್ಲಿ ಶರಣಪ್ಪ ಮೆಣಸಿನಕಾಯಿ, ಸುರೇಶ ಜಾಲಿಹಾಳ, ರುದ್ರಪ್ಪ ಪೊಲೀಸಪಾಟೀಲ್, ಹುಚ್ಚಪ್ಪ ಹಾವೇರಿ, ಮಹಾಗುಂಡಪ್ಪ ಕೊಟಗಿ, ಪ್ರಕಾಶ ಬಳಿಗೇರ, ರಫೀಕ್ ಹವಾಲ್ದಾರ್, ಬಸವರಾಜ ಡಂಬಳ, ಪ್ರಕಾಶ ಶಿರೂರ, ಅಲ್ಲಮಪ್ರಭು ಕೊಟಗಿ, ಸಲಿಂ ಹವಾಲ್ದಾರ್, ಮುತ್ತಣ್ಣ ಚಟ್ಟೆರ ಸೇರಿದಂತೆ ಅನೇಕರು ಬೆಂಬಲ ಸೂಚಿಸಿದರು.
ವರದಿ : ಸುರೇಶ ಬಂಡಾರಿ.