ಸಂಗೀತ ಕ್ಷೇತ್ರದ ದಿಗ್ಗಜ ಶಿವಕುಮಾರ ಕುಕನೂರ ಅವರ ಹೆಸರಿನಲ್ಲಿ ದೊಡ್ಡದಾದ ಸಂಗೀತ ಭವನ ನಿರ್ಮಾಣವಾಗಬೇಕು: ಡಾ ಮಹಾದೇವ ಮಹಾಸ್ವಾಮಿಗಳು.

ತಬಲಾ ಪ್ರವೀಣ ಪಂ.ಶಿವಕುಮಾರ ಕುಕನೂರ ರವರ 9ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಸಂಗೀತ ಸ್ವರ ನಮನ ಕಾರ್ಯಕ್ರಮ.
ಕುಕನೂರಿನಲ್ಲಿ ಸಂಗೀತ ಕ್ಷೇತ್ರದ ದಿಗ್ಗಜ ಶಿವಕುಮಾರ ಕುಕನೂರ ಅವರ ಹೆಸರಿನಲ್ಲಿ ದೊಡ್ಡದಾದ ಸಂಗೀತ ಭವನ ನಿರ್ಮಾಣವಾಗಬೇಕು: ಡಾ ಮಹದೇವ ಮಹಾಸ್ವಾಮಿಗಳು.
ಕುಕನೂರ:ಸತ್ಯಮಿಥ್ಯ ( ಆಗಸ್ಟ್ -04)
ಕುಕನೂರು ಪಟ್ಟಣದಲ್ಲಿ ಸಂಗೀತ ದಿಗ್ಗಜ ತಬಲಾ ಪ್ರವೀಣ ಕುಕನೂರಿನ ಪ್ರತಿಮ ಕಲಾವಿದ ದಿವಂಗತ ಶಿವಕುಮಾರ ಕುಕನೂರ ಅವರ ಹೆಸರಿನಲ್ಲಿ ದೊಡ್ಡದಾದ ಸಂಗೀತ ಭವನ ನಿರ್ಮಾಣವಾಗಬೇಕಿದೆ ಎಂದು ಕುಕನೂರಿನ ಶ್ರೀ ಅನ್ನದಾನೇಶ್ವರ ಶಾಖಾಮಠದ ಶ್ರೀಗಳಾದ ಡಾ. ಮಹಾದೇವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಶ್ರೀ ಜಗದ್ಗುರು ಅನ್ನದಾನೇಶ್ವರ ಭವನದಲ್ಲಿ ಶ್ರೀ ಪಂಚಾಕ್ಷರಿ ಸಂಗೀತ ಸಾಹಿತ್ಯ ಕ್ರೀಡೆ ಹಾಗೂ ಗ್ರಾಮೀಣಾಭಿವೃದ್ದಿ ಸಂಸ್ಥೆ ( ರೀ) ಕುಕುನೂರು ಪಂಚಾಕ್ಷರಿ ಸಂಗೀತ ಪಾಠಶಾಲೆ ಅಭಿಮಾನಿ ಬಳಗ ಹಾಗೂ ಶಿಷ್ಯ ಬಳಗದ ವತಿಯಿಂದ ಕರ್ನಾಟಕ ಕಲಾ ಶ್ರೀ ಪ್ರಶಸ್ತಿ ಪುರಸ್ಕೃತ ತಬಲಾ ಪ್ರವೀಣ ದಿ.ಪಂ.ಶಿವಕುಮಾರ ಕುಕನೂರ ರವರ 9ನೇ ವರ್ಷದ ಪುಣ್ಯ ಸ್ಮರಣೆ ಹಾಗೂ ಸಂಗೀತ ಸ್ವರ ನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಜೀವನದುದ್ದಕ್ಕೂ ಸಂಗೀತ ಕಲೆಯನ್ನು ಮೈಗುಡಿಸಿಕೊಂಡು ಸಾವಿರಾರು ಶಿಷ್ಯ ಬಳಗವನ್ನು ಹೊಂದಿರುವ ಮೇರು ಕಲಾವಿದರು ಇಂತಹ ಮಹಾನೀಯ ಕಲಾವಿದರ ಪ್ರತಿ ವರ್ಷ ಅವರ ಹೆಸರಿನಲ್ಲಿ ಕಾರ್ಯಕ್ರಮವಾಗಬೇಕು ಸಂಗೀತಗಾರರಿಗೆ ಜಾತಿ ಧರ್ಮ ಮತ ಭೇದವಿಲ್ಲ ಸಂಗೀತ ಒಂದು ದಿವ್ಯಶಕ್ತಿ ಕಠಿಣ ಪರಿಶ್ರಮದಿಂದ ಮಾತ್ರ ಸಂಗೀತ ಒಲಿಯುತ್ತದೆ ಎಂದರು.ಹಿರಿಯ ಮುಖಂಡ ಬಸವಲಿಂಗಪ್ಪ ಭೂತೆ ಮಾತನಾಡಿ ಶಿವಕುಮಾರ ಅವರು ಕಟ್ಟಿ ಬೆಳೆಸಿದ ಈ ಪಂಚಾಕ್ಷರಿ ಸಂಗೀತ ಪಾಠ ಶಾಲೆಯು ಅವರ ಮಗ ಮುರಾರಿ ಕುಕನೂರ ರವರಿಂದ ಸಂಗೀತ ಪಾಠಶಾಲೆ ಈ ಭಾಗದಲ್ಲಿ ಉನ್ನತ ಮಟ್ಟದ ಪಾಠಶಾಲೆಯಾಗಿ ಬೆಳೆಯಲಿ, ಕುಕನೂರಿನ ಪ್ರಮುಖ ಬೀದಿಗಳಿಗಾಗಲಿ ರಸ್ತೆಗೆ ಆಗಲಿ ಶಿವಕುಮಾರ ಅವರ ಹೆಸರಿಡಬೇಕೆಂದರು.
ಹಿರಿಯ ಪತ್ರಕರ್ತರು ಕೊಟ್ರಪ್ಪ ತೋಟದ ಮುತ್ತಾಳˌಆರ್.ಪಿ.ರಾಜೂರ ಮುಖ್ಯ ಅತಿಥಿಗಳು ಮಾತನಾಡಿದರು, ಕಾರ್ಯಕ್ರಮದಲ್ಲಿ ಪ್ರಖ್ಯಾತ ಕಲಾವಿದರಾದ ಸದಾಶಿವ ಪಾಟೀಲˌಡಾ|ದೊಡ್ಡಯ್ಯ ಗವಾಯಿಗಳುˌಡಾ|ಶಂಕರ ಬಿನ್ನಾಳ ಹಿಂದುಸ್ತಾನಿ ಶಾಸ್ತ್ರಿಗಳುˌಡಾ|ಶಿವಬಸಯ್ಯ ಗಡ್ಡದ ಮಠ, ಪಂಡಿತ್ ಶರಣಕುಮಾರ್ ಗುತುರಗಿಯವರಿಂದ ತಬಲಾ ಸೋಲಾ, ಪಂ.ಶ್ಯಾಮರಾವ್ ಕುಲಾರಿˌ ವಿರುಪಾಕ್ಷಯ್ಯ ಪಟ್ಟದಕಲ್, ರಮೇಶ ಉಮಚೆಗಿ ಯವರಿಂದ ಸಹನಾಯಿ ವಾದನ, ಕೃಷ್ಣಕುಮಾರ್ ಕವಿತಾಳ, ವಿಜಯಲಕ್ಷ್ಮಿ ಬೆಂಗಳೂರು, ಮುಕುಂದ ಕುಕನೂರ, ಸೇರಿದಂತೆ ಹಲವಾರು ಕಲಾವಿದರಿಂದ ಸಂಗೀತ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿತು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಮುರಾರಿ ಕುಕನೂರ, ಜೀಪಂ ಮಾಜಿ ಅಧ್ಯಕ್ಷ ರಾಮಣ್ಣ ಬಜಂತ್ರಿ, ವೀರಣ್ಣ ಖಂಡಿˌಡಾ|ಬಸವರಾಜ ಬಣ್ಣದಭಾವಿˌಶಂಬಣ್ಣ ಯಲಬುರ್ಗಿˌಗದಿಗೆಪ್ಪ ಪವಾಡಿಗೌಡ್ರˌವೀರಯ್ಯ ತೋಂಟದಾರ್ಯಮಠˌಕಳಕಪ್ಪ ಕುಂಬಾರˌ ಮೊದಲಾದವರಿದ್ದರು. ಶಾಮರಾವ ಕುಲಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು,
ಕುಮಾರಿ ಮೇಘಾ ಯತ್ನಟ್ಟಿಯವರು, ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕರು ಕಲಾವಿದರು ಮುಖಂಡರು ಇತರರು ಉಪಸ್ಥಿತರಿದ್ದರು.
ವರದಿ : ಚೆನ್ನಯ್ಯ ಹಿರೇಮಠ.