ಎರಡನೇ ದಿನದ ದಸರೆಯ ಸಂಭ್ರಮ ಭಲು ಜೋರು.
ಚಿತ್ರ :ನವರಾತ್ರಿ ಹಬ್ಬದ ಆಚರಣೆಯಲ್ಲಿ ಎರಡನೇ ದಿನ ಮಹಿಳೆಯರು ಸಂಭ್ರಮಿಸಿದ್ದು
ಗದಗ : ಸತ್ಯಮಿಥ್ಯ (ಅ -04).
ಇಂದು ದಸರಾ ಹಬ್ಬದ ಎರಡನೇ ದಿನವಾಗಿದ್ದು. ಮಹಿಳೆಯರು ಇಂದು ಹಸಿರು ಬಣ್ಣದ ಸೀರೆ ಉಟ್ಟು ದೇವಿಯ ಆರಾಧನೆ ಮಾಡುತ್ತಾರೆ. ಇಂದಿನ ವಿಶೇಷ ನೋಡಲಾಗಿ.ನವರಾತ್ರಿ ಹಬ್ಬದ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರಿಂದ ಭಕ್ತನು ಸಂತೋಷವನ್ನು ಪಡೆದುಕೊಳ್ಳುತ್ತಾನೆ. ಇದರೊಂದಿಗೆ ಆ ವ್ಯಕ್ತಿಯ ಜೀವನದಲ್ಲಿನ ದುಃಖ ಮತ್ತು ತೊಂದರೆಗಳು ಮಾಯವಾಗುವುದು. ನವರಾತ್ರಿ ಹಬ್ಬದ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುವುದರ ವಿಶೇಷತೆ ಮತ್ತು ಮಹತ್ವದ ಕುರಿತು ತಿಳಿದುಕೊಳ್ಳೋಣ.
ಚಿತ್ರ :ನವರಾತ್ರಿ ಹಬ್ಬದ ಆಚರಣೆಯಲ್ಲಿ ಶಾರದಾ ನಾಯ್ಕ ಗೆಳತಿಯರ ಬಳಗ ಲಕ್ಷಣಸಾ ನಗರ ಗದಗ
ವೈದಿಕ ಪಂಚಾಂಗದ ಪ್ರಕಾರ, ಶಾರದೀಯ ನವರಾತ್ರಿಯ ಎರಡನೇ ದಿನದ ಪೂಜೆಯು ಅಕ್ಟೋಬರ್ 4 ರಂದು ಶುಕ್ರವಾರ ಮಧ್ಯರಾತ್ರಿ 2:59 ರಿಂದ ಪ್ರಾರಂಭವಾಗುತ್ತದೆ. ಹಾಗೂ ಅಕ್ಟೋಬರ್ 5 ರಂದು ಶನಿವಾರ ಮುಂಜಾನೆ 5:30ಕ್ಕೆ ಮುಕ್ತಾಯಗೊಳ್ಳುವುದು. ಇದರ ನಂತರ ನವರಾತ್ರಿ ಹಬ್ಬದ ತೃತೀಯ ತಿಥಿ ಆರಂಭವಾಗುವುದು. ಶಾರದೀಯ ನವರಾತ್ರಿಯ ಎರಡನೇ ದಿನದಂದು ಅಪರೂಪದ ಶಿವಸ್ ಯೋಗವೊಂದು ರೂಪುಗೊಳ್ಳುತ್ತಿದೆ.
ಚಿತ್ರ :ನವರಾತ್ರಿ ಹಬ್ಬದ ಸಂಭ್ರಮದಲ್ಲಿ ತಹಶೀಲ್ದಾರ್ ಕಚೇರಿ ರೋಣದ ಮಹಿಳಾ ಸಿಬ್ಬಂದಿಗಳು
ಈ ಯೋಗದ ಸಂಯೋಜನೆಯು ದಿನವಿಡೀ ಇರುತ್ತದೆ. ಇದೇ ವೇಳೆಗೆ ಅಕ್ಟೋಬರ್ 05 ರಂದು ಬೆಳಿಗ್ಗೆ 05:30 ಕ್ಕೆ ಶಿವಸ್ ಯೋಗ ಮುಕ್ತಾಯವಾಗಲಿದೆ. ಈ ಸಮಯದಲ್ಲಿ, ಮಹಾದೇವನು ಮಾತೃ ದೇವತೆ ಮಹಾಗೌರಿಯೊಂದಿಗೆ ಕೈಲಾಸದಲ್ಲಿ ಆಸೀನನಾಗುತ್ತಾನೆ. ಶಿವ-ಶಕ್ತಿಯನ್ನು ಶಿವಯೋಗದಲ್ಲಿ ಪೂಜಿಸುವುದರಿಂದ, ವ್ಯಕ್ತಿಯ ಪ್ರತಿಯೊಂದು ಆಸೆಯೂ ಈಡೇರುತ್ತದೆ. ಇದರೊಂದಿಗೆ, ಸಂತೋಷ, ಸಮೃದ್ಧಿ ಮತ್ತು ಆದಾಯದಲ್ಲಿ ಹೆಚ್ಚಳವೂ ಆಗುವುದು.
ಚಿತ್ರ :ನವರಾತ್ರಿ ಹಬ್ಬದ ಆಚರಣೆಯಲ್ಲಿ ಎರಡನೇ ದಿನ ಮಂಜುಳಾ,ಸುಜಾತ,ಶಶಿಕಲಾ,ಪ್ರೇಮಾ ರಾಜೀವಗಾಂಧಿ ನಗರ ಗದಗ
ಇಂದು ನಾಡಿನಾದ್ಯಂತ ಮಹಿಳೆಯರು ಸೂರ್ಯೋದಯಕ್ಕೆ ಮುನ್ನ ನಿತ್ಯ ಕರ್ಮಾದಿಗಳನ್ನು ಮುಗಿಸಿಕೊಂಡು ಶುಭ್ರವಾದ ಹಸಿರುಡಿಗೆಯೊಂದಿಗೆ ದೇವಸ್ಥಾನಗಳಲ್ಲಿ ಬಂದು ಪೂಜೆ ಸಲ್ಲಿಸುವುದನ್ನು ನೋಡಲು ದೇವಲೋಕವೇ ಧರೆಗಿಳಿದು ಬಂದಂತೆ ಕಂಡು ಬರುತ್ತದೆ.
ಚಿತ್ರ :ನವರಾತ್ರಿ ಹಬ್ಬದ ಸಂಭ್ರಮದಲ್ಲಿನಿರ್ಮಲ ಹಾಗೂ ಸಂಗಡಿಗರು ಅಮೀನಗಡ
ವರದಿ : ಮುತ್ತು ಗೋಸಲ್.