
ಗದಗ : ರೈತರ ಬೆಳೆಹಾನಿ ಪರಿಹಾರಕ್ಕೆ ಜಿಲ್ಲಾಧಿಕಾರಿಗೆ ಮನವಿ.
ರೈತ ಹಿತಭಿವೃದ್ಧಿ ಸಂಘದಿಂದ ಮುಂಗಾರಿನಲ್ಲಿ ಬಿತ್ತಿದ ಬೆಳೆಗಳು ಹಾನಿಯಾದ ಕಾರಣ ಬೆಳೆ ಪರಿಹಾರ ಹಾಗ ಮಧ್ಯಂತರ ಪರಿಹಾರ ಕೊಡುವಂತೆ ಮನವಿ.
ಗದಗ:ಸತ್ಯಮಿಥ್ಯ ( ಜುಲೈ -29)
ಈ ವರ್ಷದಲ್ಲಿ ಮುಂಗಾರಿನ ಅಬ್ಬರ ಜೋರಾಗಿದ್ದು ಜಿಲ್ಲೆಯಲ್ಲಿ ಸತತವಾಗಿ 20 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರು ಬೆಳೆಗಳು ಹಾನಿಯಾಗುತ್ತಿವೆ ಆದ್ದರಿಂದ ವಿಮಾ ಕಂಪನಿಯವರು ರೈತರಿಗೆ ಬೆಳೆ ವಿಮೆ ಹಾಗೂ ಮಧ್ಯಂತರ ಬೆಳೆ ವಿಮಾ ಹಣವನ್ನು ಪಾವತಿ ಮಾಡಬೇಕೆಂದು ರೈತ ಹಿತಾಭಿವೃದ್ಧಿ ಸಂಘದಿಂದ ಇಂದು ನಗರದ ಒಕ್ಕಲಗೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪಾದಯಾತ್ರೆ ಮೂಲಕ ತೆರಳಿ ಜಿಲ್ಲಾಧಿಕಾರಿಗಳಾದ ಗೋವಿಂದ ರೆಡ್ಡಿಯವರಿಗೆ ಮನವಿ ಸಲ್ಲಿಸಲಾಯಿತು.
ನಂತರ ಮಾತನಾಡಿದ ಸಂಘದ ಕಾರ್ಯದರ್ಶಿ ಪರಮೇಶ್ವರಪ್ಪ ಪರಪ್ಪ ಜಂತ್ಲಿ. ತಾಲೂಕಿನಲ್ಲಿ ಸತತ ಇಪ್ಪತ್ತು ದಿನ ಮಳೆಯಾಗಿ ಮುಂಗಾರಿಯಲ್ಲಿ ಬಿತ್ತಿದ ಬೆಳೆಗಳು ಹೆಸರು,ಗೋವಿನಜೋಳ,ಉಳ್ಳಾಗಡ್ಡಿ,ಮೆಣಸಿನಕಾಯಿ,ಬಿಟಿ ಹತ್ತಿ, ಈ ಎಲ್ಲ ಬೆಳೆಗಳು ಮಳೆ ಹೆಚ್ಚಾಗಿ ಕೊಳೆರೋಗ ಬಂದು ಎಲೆ ಹಳದಿಯಾಗಿ ಜಿಗಿ ಹುಳ ಬಿದ್ದು ಗೋವಿನ ಜೋಳಕ್ಕೆ ಲದ್ದಿ ಹುಳ ಬಿದ್ದು ಬೆಳೆಗಳು ರೋಗಕ್ಕೆ ತುತ್ತಾಗಿವೆ ಎಲ್ಲ ಬೆಳೆಗಳಿಗೂ ಸರ್ಕಾರ ಬೆಳೆ ಹಾನಿ ಕೊಡಬೇಕು ಮತ್ತು ಎಲ್ಲಾ ಬೆಳೆಗಳಿಗೂ ಬೆಳೆದ ರೈತರಿಗೆ ಮಧ್ಯಂತರ ಪರಿಹಾರ ಕೊಡಿಸಬೇಕೆಂದು ಹಾಗೂ ಕಳೆದ ವರ್ಷ 30%ರೈತರಿಗೆ ಬೆಳೆ ಪರಿಹಾರ ಜಮಾ ಆಗದು 70% ರೈತರಿಗೆ ಬೆಳೆ ಪರಿಹಾರ ಹಣ ಜಮಾ ಆಗದ ಕಾರಣ ಈಗಲಾದರೂ ಬೆಳೆ ಪರಿಹಾರವನ್ನು ಹಾಕಬೇಕೆಂದು ವಿಮಾ ಕಂಪನಿಯವರು ಹಾಗೂ ಸರ್ಕಾರಕ್ಕೆ ರೈತ ಹಿತಭಿವೃದ್ಧಿ ಸಂಘದಿಂದ ಮನವಿಯಾಗಿದೆ.
ಮನವಿ ಸಲ್ಲಿಸುವಾಗ ಬಸಪ್ಪ ಕಲಬಂಡಿ, ಕಳಕಪ್ಪ ರೇವಡಿ, ಮಂಜುನಾಥ್ ಕೋಳಿವಾಡ ಮುತ್ತಣ್ಣ ಜೆಡಿ ಮಂಜುನಾಥ್ ಹಿತ್ತಲ ಮನಿ ವಿರೂಪಾಕ್ಷಪ್ಪ ಅಕ್ಕಿ ಈಶ್ವರಪ್ಪ ಗುಜಮಾಗಡಿ ಬಸವರಾಜ ಕವಳಿಕಾಯಿ ಕರಬಸಯ್ಯ ನಲ್ವಾತವಾಡಮಠ ರವಿ ಹುಡೇದ ಬಸವರಾಜ್ ಹುಬ್ಬಳ್ಳಿ, ಮಂಜುನಾಥ ಮಂದಾಲಿ,ಉಮೇಶ ಲಿಂಗರೆಡ್ಡಿ (ಹೊಂಬಳ) ಶರಣ್ಣಪ್ಪ (ಕದಡಿ) ಪಕೀರಗೌಡ ಪಾಟೀಲ್ (ಚಿಕ್ಕ ಹಿರೆಹಂದಿಗೋಳ) ಬಸವರಾಜ ದೊಡೆಪ್ಪನವರ (ಕದಡಿ) ಗದಗ ಜಿಲ್ಲೆಯ ರೈತ ಸಂಘದ ಅಧ್ಯಕ್ಷರಾದ ಬಸವರಾಜ್ ಕವಳಿಕಾಯಿ ಉಪಸ್ಥಿತರಿದ್ದರು
ವರದಿ : ಮುತ್ತು.