
ಕರ್ತವ್ಯಲೋಪ ಬೆಟಗೇರಿ ಪಿ ಎಸ್ ಐ ಅಮಾನತಿಗೆ ಮನವಿ.
ಸಾರ್ವಜನಿಕ ಗಣೇಶನ ವಿಸರ್ಜನೆಯಲ್ಲಿ ಕರ್ತವ್ಯ ದುರುಪಯೋಗ ಮಾಡಿದ ಬೆಟಗೇರಿ ಪಿಎಸ್ಐ ಅವರನ್ನು ಅಮಾನತುಗೊಳಿಸಲು ಮನವಿ.
ಗದಗ : ಸತ್ಯಮಿಥ್ಯ (ಸೆ-08)
ನಗರದ ಬೆಟಗೇರಿ ಭಾಗದ ಸಾರ್ವಜನಿಕ ಗಣೇಶನ ವಿಸರ್ಜನೆಯ ದಿನದಂದು ಬೆಟಗೇರಿ ಪಿಎಸ್ಐ ಲಕ್ಷ್ಮಣ ಆರಿ ಅವರು ಶಾಂತಿಯುತ ಮೆರವಣಿಗೆಯಲ್ಲಿ ಮಹಿಳೆಯರು ಮಕ್ಕಳು ವೃದ್ಧರ ಮೇಲೆ ಲಾಟಿ ಪ್ರಯೋಗವನ್ನು ಮಾಡುವುದರ ಮೂಲಕ ಕರ್ತವ್ಯವನ್ನು ದುರುಪಯೋಗ ಪಡೆದುಕೊಂಡಿದ್ದಾರೆ ಆದ್ದರಿಂದ ಅವರನ್ನು ಕರ್ತವ್ಯದಿಂದ ಅಮಾನತು ಮಾಡಬೇಕೆಂದು ಬೆಟಗೇರಿ ಭಾಗದ ಸಾರ್ವಜನಿಕ ಗಜಾನನ ಮಂಡಳಿಯವರು ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.
ಮನವಿಯಲ್ಲಿ ದಿನಾಂಕ 6.9.2025 ರಂದು ಬೆಟಗೇರಿ ಭಾಗದ ಸಾರ್ವಜನಿಕ ಗಣೇಶನ ವಿಸರ್ಜನೆಯಲ್ಲಿ ರಾತ್ರಿ ಶಾಂತಿ ರೀತಿಯಿಂದ ಹೊರಟ ವಿಸರ್ಜನಾ ಮೆರವಣಿಗೆಯಲ್ಲಿ ಲಾಟಿ ಪ್ರಯೋಗವನ್ನು ಸಣ್ಣ ಮಕ್ಕಳು ವೃದ್ಧರು ಹಾಗೂ ಡೊಳ್ಳು ಬಾರಿಸುವ ಅವರಿಗೆ ಮನಸೋ ಇಚ್ಛೆ ವಿನಾಕಾರಣ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಹಾಗೂ ಉತ್ಸವದಲ್ಲಿ ತಂದಂತಹ ವಾಹನದ ಮೇಲೆ ಬೂಟಿ ಹಾಕಿಕೊಂಡು ಅಪವಿತ್ರ ಮಾಡಿದ್ದಾರೆ ಅವರಿಗೆ ಎಷ್ಟು ಮನವಿ ಮಾಡಿದರು ಅವರು ಸ್ಪಂದಿಸದೆ 25ಕ್ಕೂ ಹೆಚ್ಚು ಜನರ ಮೇಲೆ ಹಲ್ಲೆ ಮಾಡಿದ್ದಾರೆ ಆದಕಾರಣ ಕರ್ತವ್ಯಕ್ಕೆ ದಕ್ಕೆ ಮಾಡಿದ್ದಕ್ಕೆ ಸೂಕ್ತ ಕಾನೂನು ಕ್ರಮ ಕೈಗೊಂಡು ಅವರನ್ನು ತಕ್ಷಣ ಅಮಾನತುಗೊಳಿಸಬೇಕೆಂದು ಮನವಿ ಸಲ್ಲಿಸಿದರು.
ಮನವಿಯಲ್ಲಿ ಸಾರ್ವಜನಿಕ ಶ್ರೀ ಗಜಾನನ ಮಂಡಳಿ ಬೆಟಗೇರಿ, ವಿದ್ಯಾರಣ್ಯ ಯುವಕ ಸಂಘ,ವಿನಾಯಕ ಗಜನನ ಮಂಡಳಿ, ಜೈ ಗಣೇಶ ಯುವಕ ಮಂಡಳಿ, ಮಾಸ ದೇವಿ ಗಜಾನನ ಯುವಕ ಸಂಘದ,ಗಜಾನನ ಮಾಹಾ ಮಂಡಳಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಥಳೀಯ ನಗರಸಭೆಯ ಚುನಾಯಿತ ಪ್ರತಿನಿಧಿಗಳು, ಹಿಂದೂ ಪರ ಸಂಘಟನೆಗಳು ಮನವಿ ಸಲ್ಲಿಸಿದರು.
ವರದಿ : ಮುತ್ತು ಗೋಸಲ.