
ಚಿರತೆ ದಾಳಿಗೆ ಮೂರು ಆಡು, ಒಂದು ಆಕಳು ಬಲಿ.
ಗಜೇಂದ್ರಗಡ – ಸತ್ಯಮಿಥ್ಯ (ಜ -20).
ಗಜೇಂದ್ರಗಡ-ಕಾಲಕಾಲೇಶ್ವರ ಗುಡ್ಡದ ನಡುವೆ ಅಂಬರ ಕೊಳ್ಳದ ವ್ಯಾಪ್ತಿಯಲ್ಲಿ ಆಗಾಗ ಪ್ರತ್ಯಕ್ಷವಾಗುವ ಚಿರತೆಯು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದೆ ಇದರಿಂದ ಜನರು ಭಯಗೊಂಡಿದ್ದಾರೆ.
ಭಾನುವಾರ ರಾತ್ರಿ ದಾಳಿ ಮಾಡಿರುವ ಚಿರತೆ ಮೂರು ಆಡು, ಒಂದು ಆಕಳನ್ನು ತಿಂದು ಹಾಕಿದೆ. ತಾವರೆಪ್ಪ ಜೀವಲಪ್ಪ ಮಾಳೋತ್ತರ ಎನ್ನುವರ ಹೊಲದಲ್ಲಿ ನಡೆದ ಮೇಲೆ ದಾಳಿಯಾಗಿದೆ.
ಆತಂಕದಲ್ಲಿ ರೈತರು ಚಿರತೆ ಪ್ರತ್ಯಕ್ಷಗೊಂಡ ಸಮೀಪದಲ್ಲಿ ಹೊಲದಲ್ಲಿಯೇ ರೈತರು ಮನೆಮಾಡಿಕೊಂಡು ವಾಸ ಮಾಡುತ್ತಾರೆ. ಇದರ ಪಕ್ಕದಲ್ಲಿಯೇ ರಾಣಿ ಚೆನ್ನಮ್ಮ ವಸತಿ ಶಾಲೆ ಇದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ಇರುತ್ತಾರೆ. ಹಾಗಾಗಿ ಆತಂಕದಿಂದ ಜನರು ಇದ್ದಾರೆ
ಎಷ್ಟು ಮನವಿ ಮಾಡಿದರು ಅರಣ್ಯ ಇಲಾಖೆಯವರು ಚಿರತೆಯ ದಾಳಿ ತಡೆಯಲು ಬೋನ್ ಇಟ್ಟು ಹಿಡಿಯಲು ಮುಂದಾಗುತ್ತಿಲ್ಲ ಎನ್ನುವುದು ಅಲ್ಲಿನ ನಿವಾಸಿಗಳ ಅಳಲಾಗಿದೆ.
ಸ್ಥಳಕ್ಕೆ ಪಶು ವೈದ್ಯಾಧಿಕಾರಿ ಜಯಶ್ರೀ ಪಾಟೀಲ್, ಕಿರಿಯ ಪಶು ವೈದ್ಯಕಿಯರು ರಜನಿ ಸಿಂಹಾಸನದ ಮತ್ತು ಪಶುವೈದ್ಯಾಲಯದ ಸಿಬ್ಬಂದಿ ಮಂಜುನಾಥ ಸರಗಣಾಚಾರಿ ಸೇರಿದಂತೆ ಅನೇಕರು ಇದ್ದರು.
ವರದಿ : ಸುರೇಶ ಬಂಡಾರಿ.