ಗ್ಯಾರಂಟಿ ಯೋಜನೆಗಾಗಿ ಇಂಧನ ದರ ಏರಿಕೆ ಅನಿವಾರ್ಯ – ಎಂಬಿಪಿ ಸಮರ್ಥನೆ.
ಕೇಂದ್ರದ ಬೆಲೆ ಏರಿಕೆ ವಿರುದ್ಧ ನೀವು ಪ್ರಶ್ನೆ ಮಾಡುವುದಿಲ್ಲ ಮರುಪ್ರಶ್ನೆ.

ಗ್ಯಾರಂಟಿ ಯೋಜನೆಗಾಗಿ ಇಂಧನ ದರ ಏರಿಕೆ ಅನಿವಾರ್ಯ – ಎಂಬಿಪಿ ಸಮರ್ಥನೆ.
ಬಿಜಾಪುರ : ಸತ್ಯ ಮಿಥ್ಯ ( ಜು -16).
ಕರ್ನಾಟಕ ಸರ್ಕಾರ ಪೆಟ್ರೋಲ್ ಡೀಸೆಲ್ ದರ ಏರಿಕೆ ಹಿನ್ನೆಲೆಯಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ರಾಜ್ಯ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್. ಗ್ಯಾರಂಟಿ ಯೋಜನೆಗಳಿಗೆ ಹಣ ಬೇಕಲ್ಲ ಆದ್ದರಿಂದ ದರ ಏರಿಕೆ ಅನಿವಾರ್ಯ. ಅಲ್ಲದೇ ಬೇರೆ ರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಡೀಸೆಲ್ ದರ ಕಡಿಮೆ ಇದೆ. ಅಭಿವೃದ್ಧಿಗಾಗಿ ದರ ಏರಿಕೆ ಅನಿವಾರ್ಯ ಎಂದು ಸಮರ್ಥಿಸಿಕೊಂಡರು.
ಕೇಂದ್ರದಲ್ಲಿ ಕಾಂಗ್ರೇಸ್ ಆಡಳಿತ ನಡೆಸುತ್ತಿರುವಾಗ ಪೆಟ್ರೋಲ್ ಕೇವಲ 65 ರೂಪಾಯಿಗಳಿಗೆ ಸಿಗುತ್ತಿತ್ತು. ಗ್ಯಾಸ್ 440 ರೂಪಾಯಿಗಳಿಗೆ ಸಿಗುತ್ತಿತ್ತು. ಮೋದಿ ಆಡಳಿತದಲ್ಲಿ 110 ರೂಪಾಯಿ ಪೆಟ್ರೋಲ್ 1000 ಗ್ಯಾಸ್ ಆಗಿದ್ದರು ನೀವೂ ಅವರನ್ನು ಪ್ರಶ್ನೆ ಮಾಡುವುದಿಲ್ಲ ಎಂದು ಮರು ಪ್ರಶ್ನೆ ಹಾಕಿದರು.
ಬೇರೆ ರಾಜ್ಯಗಳನ್ನೇ ತೆಗೆದುಕೊಳ್ಳಿ ಉದಾಹರಣೆಗೆ ತಮಿಳನಾಡು ನಮಗಿಂತ 5 ರೂ ಹೆಚ್ಚು ದರದಲ್ಲಿ ಪೆಟ್ರೋಲ್ ಮಾರುತ್ತಾರೆ. ಅಭಿವೃದ್ಧಿ ಮತ್ತು ಗ್ಯಾರಂಟಿಗಳಿಗಾಗಿ ಹಣಕಾಸು ಹೊಂದಾಣಿಕೆ ಮಾಡಲೇಬೇಕು ಆದ್ದರಿಂದ ದರ ಏರಿಕೆ ಅನಿವಾರ್ಯ ಎಂದರು.
ವರದಿ : ಶಿವು.