ಸರ್ಕಾರಿ ಆದರ್ಶ ವಿದ್ಯಾಲಯದ ತರಗತಿ ತರಗತಿಗಳಿಗೆ ಅರ್ಜಿ ಆಹ್ವಾನ
ಗದಗ ಜಿಲ್ಲೆಯ ಇಟಗಿ ಆದರ್ಶ ಶಾಲೆಯ 7,8ಮತ್ತು 9 ನೇ ತರಗತಿಯ ಖಾಲಿಯಿರುವ ಸ್ಥಾನಗಳಿಗೆ ಅರ್ಜಿ ಆಹ್ವಾನ.

*ಸರ್ಕಾರಿ ಆದರ್ಶ ವಿದ್ಯಾಲಯದ ತರಗತಿ ತರಗತಿಗಳಿಗೆ ಅರ್ಜಿ ಆಹ್ವಾನ*

ಇಟಗಿ: ಸತ್ಯ ಮಿಥ್ಯ (ಜೂ 20)
ಸರ್ಕಾರಿ ಆದರ್ಶ ವಿದ್ಯಾಲಯ ಇಟಗಿ ಶಾಲೆಯ 2024-25 ನೇ ಸಾಲಿಗಾಗಿ 7, 8 ಮತ್ತು 9 ನೇ ತರಗತಿಗಳಲ್ಲಿ ಖಾಲಿ ಉಳಿದಿರುವ ಸೀಟುಗಳಿಗಾಗಿಅರ್ಜಿಗಳನ್ನು ಆಹ್ವಾನಿಸಲಾಗಿದೆ.
7ನೇ ತರಗತಿಗೆ – 6,
8ನೇ ತರಗತಿಗೆ – 4,
9ನೇ ತರಗತಿಗೆ – 1, ಒಟ್ಟು 11 ಸೀಟುಗಳು ಲಭ್ಯವಿದ್ದು, ಖಾಲಿ ಉಳಿದಿರುವ ಸ್ಮಾನಗಳಿಗೆ ಮೀಸಲಾತಿಅನ್ವಯ ಭರ್ತಿ ಮಾಡಲು ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿಗಳನ್ನುಆಹ್ವಾನಿಸಲಾಗಿದೆ.
ಅರ್ಜಿ ನಮೂನೆಗಳು ಸರ್ಕಾರಿ ಆದರ್ಶ ವಿದ್ಯಾಲಯ ಇಟಗಿಶಾಲೆಯಲ್ಲಿ ಸಿಗುತ್ತವೆ. ಮತ್ತು ಭರ್ತಿ ಮಾಡಿ ಅದೇ ಶಾಲೆಯಲ್ಲಿ ಜೂನ್ 25, 2024 ಒಳಗೆ ಸದರಿ ಶಾಲೆಯಲ್ಲಿ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳಿಗೆ ದಿನಾ೦ಕ 29-6-2024ರಂದು 10:30 ರಿಂದ 1 ಗಂಟೆಯವರೆಗೆ ಸದರಿ ಶಾಲೆಯಲ್ಲಿ ಪ್ರವೇಶ ಪರೀಕ್ಷೆಗಳು ನಡೆಯಲಿದ್ದು,
ಆಸಕ್ತರು ಅರ್ಜಿ ಸಲ್ಲಿಸಲು ಈ ಮೂಲಕ ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಎಫ್. ಎಚ್. ಢಾಲಾಯತ ಮುಖ್ಯೋಪಾಧ್ಯಾಯರು ಆದರ್ಶ ವಿದ್ಯಾಲಯ ಇಟಗಿ ದೂರವಾಣಿ ಸಂಖ್ಯೆ: 9449165379, 9880750264 ಇವರನ್ನು ಸಂಪರ್ಕಿಸಲುಕೋರಲಾಗಿದೆ.
ಎಂದು ಶ್ರೀ ಆರ್. ಎನ್. ಹುರಳಿ ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳು ರೋಣ ತಿಳಿಸಿದ್ದಾರೆ.
ವರದಿ : ಸುರೇಶ ಬಂಡಾರಿ.