ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣ ಉಳಿಸಿ – ಮಹೇಂದ್ರ. ಜಿ
ರಕ್ತವನ್ನು ಕೃತಕವಾಗಿ ಬಾಹ್ಯವಾಗಿ ತಯಾರಿಸಲು ಸಾಧ್ಯವಿಲ್ಲ ಅದೇನಿದ್ದರೂ ಮನುಷ್ಯನ ದೇಹದಿಂದಲೇ ಪಡೆಯಬೇಕು.
ಗಜೇಂದ್ರಗಡ : ಸತ್ಯ ಮಿಥ್ಯ ( ಜೂ -20)
ರಕ್ತದಾನ ಮಾಡುವ ಪ್ರಕ್ರಿಯೇ ಕೆಲವೇ ಕ್ಷಣದಲ್ಲಿ ನಡೆದು ಹೋಗುತ್ತದೆ. ಆದರೆ ರಕ್ತ ಪಡೆದ ವ್ಯಕ್ತಿಗೆ ನೀವು ನೀಡಿದ ರಕ್ತ ಆತನ ದೇಹದಲ್ಲಿ ಪ್ರಾಣವಾಗಿ ಕೆಲಸ ಮಾಡುತ್ತಿರುತ್ತದೆ.ಆದ್ದರಿಂದ ರಕ್ತದಾನದಂತಹ ಶ್ರೇಷ್ಠ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ಎಂದು ಬಿ ಎಸ್ ಎಸ್ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಮಹೇಂದ್ರ. ಜಿ ಹೇಳಿದರು.
ಅವರು ಬಿ ಎಸ್ ಎಸ್ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ. ಐ ಕ್ಯೂ ಎ ಸಿ ಯುವ ರೆಡ್ ಕ್ರಾಸ್ ಘಟಕ, ಸ್ಕೌಟ್ಸ್ & ಗೈಡ್ಸ್ ಹಾಗೂ ಎನ್ ಎಸ್ ಎಸ್ ಘಟಕ ಮತ್ತು ಜಿಲ್ಲಾ ರಕ್ತನಿಧಿ ಕೇಂದ್ರ ಗದಗ (ಜಿಮ್ಸ್ )ಸಹಯೋಗದಲ್ಲಿ ಜರುಗಿದ ರಕ್ತದಾನ ಶಿಬಿರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರಕ್ತ ದಾನಮಾಡುವ ಮೊದಲು ನಿಮ್ಮಲ್ಲಿರುವ ಸದೃಢತೆಯನ್ನು ವೈದ್ಯರು ಪರೀಕ್ಷಿಸುತ್ತಾರೆ. ನೀವು ಆಯ್ಕೆಯಾದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ರಕ್ತವನ್ನು ತೆಗೆದುಕೊಳ್ಳುವ ಪ್ರಕ್ರಿಯೆ ಮುಗಿದೆ ಹೋಗುತ್ತದೆ. ಆದರೆ ನೀವು ನೀಡುವ ರಕ್ತದ ಪ್ರತಿ ಹನಿ ಪಡೆದುಕೊಳ್ಳುವ ವ್ಯಕ್ತಿಯ ದೇಹದಲ್ಲಿ ಆತನ ಪ್ರಾಣ ಇರುವವರೆಗೂ ನಿಮ್ಮ ರಕ್ತ ಆ ವ್ಯಕ್ತಿಯ ಜೊತೆಯಲ್ಲಿ ಇರುತ್ತದೆ. ಇಂತಹ ಸೂಕ್ಷ್ಮತೆಯನ್ನು ಅರಿತು ರಕ್ತದಾನ ಮಾಡುವುದರಿಂದ ನಿಮ್ಮಲ್ಲಿ ಶ್ರೇಷ್ಠತೆಯ ಭಾವನೆ ಮೂಡುತ್ತದೆ ಎಂದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಶಕುಂತಲಾ ಅರಮನೆ. ರಕ್ತವನ್ನು ಕೃತಕವಾಗಿ ಬಾಹ್ಯವಾಗಿ ತಯಾರಿಸಲು ಸಾಧ್ಯವಿಲ್ಲ ಅದೇನಿದ್ದರೂ ಮನುಷ್ಯನ ದೇಹದಿಂದಲೇ ಪಡೆಯಬೇಕು. ರಕ್ತದಾನ ಮಾಡುವುದರಿಂದ ಮನುಷ್ಯನ ದೇಹದಲ್ಲಿ ಹೊಸ ರಕ್ತ ಉತ್ಪಾದನೆಯಾಗುತ್ತದೆ ಇದರಿಂದ ದೇಹದಲ್ಲಿ ಚೈತನ್ಯ ಮೂಡುತ್ತದೆ. ವರ್ಷಕ್ಕೊಮ್ಮೆಯಾದರು ರಕ್ತದಾನ ಮಾಡಬೇಕು ಎಂದು ರಕ್ತ ದಾನದ ಮಹತ್ವ ತಿಳಿಸಿಕೊಟ್ಟರು.
ವಿದ್ಯಾರ್ಥಿಗಳು ಮತ್ತು ಕಾಲೇಜಿನ ಸಿಬ್ಬಂದಿಗಳು ಸೇರಿಕೊಂಡು ಒಟ್ಟು 32 ಯುನಿಟ್ ರಕ್ತವನ್ನು ಕೊಡುವ ಮೂಲಕ ಕಾಲೇಜಿನ ಹಿರಿಮೆ ಹೆಚ್ಚಿಸಿದ್ದಾರೆ
ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಎಸ್.ಬಿ.ಪಾಟೀಲ್, ಪ್ರೊಪೆಸರ್ ಸಿದ್ದೇಶ್. ಕೆ ಮಾತನಾಡಿದರು. ಡಾ. ಸುವರ್ಣ. ಜಿ. ಆರ್, ಡಾ. ಶಿವಾನಂದ, ವೆಂಕಟೇಶ್. ಡಿ. ವಿರೂಪಾಕ್ಷಯ್ಯ, ಮಂಜುನಾಥ, ಗದಗ ಜಿಲ್ಲಾ ರಕ್ತ ನಿಧಿ ಕೇಂದ್ರದ ಸಿಬ್ಬಂದಿ, ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಹಿತೇಶ್. ಬಿ, ಎಂ.ವೈ.ಜಟ್ಟಣ್ಣವರ, ಎಚ್. ಎಂ. ಜಂತ್ಲಿ, ಲಕ್ಷ್ಮಣ ಹುಲ್ಲುರ, ವಿನಾಯಕ ಜಾದವ್, ಪಿ. ಎಂ. ದಿವಾಣದ, ಸಾವಿತ್ರಿ ಪವಾರ, ಎಸ್. ಎಸ್. ರೋಣದ, ಮಾರುತಿ ಕಬ್ಬೇರ, ಜೀವಿತ.ಎಂ, ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.