ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ.
ಸಂಘಟನೆ ನೊಂದವರ ದ್ವನಿಯಾಗಿ ಕೆಲಸಮಾಡಲಿ - ಯಚ್ಚರೇಶ್ವರ ಶ್ರೀ.

ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಪದಾಧಿಕಾರಿಗಳ ಆಯ್ಕೆ.
ಸಂಘಟನೆ ನೊಂದವರ ದ್ವನಿಯಾಗಿ ಕೆಲಸಮಾಡಲಿ – ಯಚ್ಚರೇಶ್ವರ ಶ್ರೀ.
ಹೊಳೆಆಲೂರ:ಸತ್ಯ ಮಿಥ್ಯ (ಜೂ -25)
ಹೊಳೆಆಲೂರಿನ ಪ್ರವಾಸಿ ಮಂದಿರದಲ್ಲಿ ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಭಾಗದ ಅಧ್ಯಕ್ಷ ಎಂ.ಎ.ಕುರ್ತಕೋಟಿ ಹಾಗೂ ರೋಣ ತಾಲೂಕ ಅಧ್ಯಕ್ಷ ಎಂ.ಎಚ್. ನದಾಫ ನೇತೃತ್ವದಲ್ಲಿ ಉತ್ತರ ಕರ್ನಾಟಕ ಭಾಗದ ಪದಾಧಿಕಾರಿಗಳು ,ಜಿಲ್ಲಾ ಪದಾಧಿಕಾರಿಗಳು,ತಾಲೂಕಾ ಪದಾಧಿಕಾರಿಗಳ,ಹೊಳೆಆಲೂರ ಗ್ರಾಮ ಘಟಕ ಮತ್ತು ವಿದ್ಯಾರ್ಥಿ ಘಟಕದ ಪದಾಧಿಕಾರಿಗಳನ್ನು ಆದೇಶ ಪತ್ರ ನೀಡುವ ಮೂಲಕ ಆಯ್ಕೆ ಮಾಡಲಾಯಿತು.
ಈ ಸಮಯದಲ್ಲಿ ಮಾತನಾಡಿದ ಶ್ರೀ ಯಚ್ಚರೇಶ್ವರ ಮಹಾಸ್ವಾಮೀಜಿಗಳು ಅನ್ಯಾಯದ ವಿರುದ್ಧ ಧ್ವನಿಯಾಗುವ ಮೂಲಕ ಜನರಿಗೆ ನ್ಯಾಯ ದೊರಕಿಸಿ. ನ್ಯಾಯಯುತ ಹೋರಾಟಗಳ ಮೂಲಕ ಸಂಘಟನೆಯನ್ನು ಬಲಿಷ್ಠಗೊಳಿಸಿ. ಸಂಘಟನೆ ಜಾತಿ ಮತ ಪಂತ ಮೀರಿ ಬೆಳೆಯಲಿ. ಎಲ್ಲ ಜನಾಂಗದ ನೊಂದವರ ಕಣ್ಣೀರು ಒರೆಸುವ ಕೆಲಸ ಮಾಡಿ ಎಂದು ಹೇಳಿದರು.
ಉತ್ತರ ಕರ್ನಾಟಕ ಗೌರವಾಧ್ಯಕ್ಷರಾದ ಶ್ರೀ ಶ್ರೀ ದಿವಾನ್ ಶರೀಫ್ ಶ್ರೀಮುರುಗೇಂದ್ರ ಸ್ವಾಮೀಜಿ ಶಾಂತಿಧಾಮ ಗದಗ ಜಿಲ್ಲೆ ಪ್ರಧಾನ ಕಾರ್ಯದರ್ಶಿಯಾದ ಮುರ್ತುಜಾ ಗೌಂಡಿ ರೋಣ ತಾಲೂಕು ಉಪಾಧ್ಯಕ್ಷರಾದ ಬಸವರಾಜ ಹಾದಿಮನಿ ರೋಣ ತಾಲೂಕ ಪ್ರಧಾನ ಕಾರ್ಯದರ್ಶಿಯಾಗಿ ಲಿಯಾಕತ್ ಅಂಗಡಿಗೇರಿ, ರೋಣ ತಾಲೂಕ ವಿದ್ಯಾರ್ಥಿ ಘಟಕದ ಉಪಾಧ್ಯಕ್ಷರಾದ ಸಂಕೇತ ದಾನರೆಡ್ಡಿ,
ನೂತನ ವಿದ್ಯಾರ್ಥಿ ಘಟಕ ಅಧ್ಯಕ್ಷರಾದ ಬಾಬು ಮುಲ್ಲಾ, ಉಪಾಧ್ಯಕ್ಷರಾದ ಶರೀಫ ನದಾಫ,ಪ್ರಧಾನ ಕಾರ್ಯದರ್ಶಿಯಾದ ಸಂತೋಷ ರಾಜಪುರೋಹಿತ್,ವಿದ್ಯಾರ್ಥಿ ಘಟಕದ ಅಧ್ಯಕ್ಷರಾದ ಸಂಜು ಮಾದರ, ಉಪಾಧ್ಯಕ್ಷರಾದ ಕಾರ್ತಿಕ್ ಬಡಿಗೇರ ಆಯ್ಕೆಯಾದರು.
ಮುಖಂಡರಾದ ವಾಸುದೇವ ಪವಾರ,ಮೋತಿಲಾಲ್ ರಾವಲ್,ಮೌಲಾನ ಅಬ್ದುಲ್ ಲತೀಫ್, ಯಮನೂರ್ ನದಾಫ್, ಎಂ. ಎಸ್. ಬಹುದ್ದೂರಖಾನ, ನಿಖಿಲ್ ಕಡೇಮನಿ,ಹನುಮಂತ ಹಳ್ಳಿಕೇರಿ,ಖಾಜಾ ಜಕ್ಕಲಿ, ಅರುಣ ಪೂಜಾರ್, ಮೈಬು ನದಾಫ,ರಂಗಪ್ಪ ಬಾರಕೇರ, ಹನುಮಂತ, ಪೀರಸಾಬ ನದಾಫ,ದೇವರಾಜ ಅಂಬಿಗೇರ, ಮಾಬುಸಾಬ್ ಚಾಚಾ, ಪ್ರಕಾಶ ಅಡಿವೆಪ್ಪ ಇನ್ನು ಅನೇಕರು ಉಪಸ್ಥಿತರಿದರು.
ವರದಿ : ಮುತ್ತು.