ಗದಗ – ಹವಾಮಾನ ವೈಪರಿತ್ಯದಿಂದ ಕಡಿಮೆ ಮಳೆ. ಜಲಸಂಪನ್ಮೂಲ ನಿರ್ವಹಣೆ ತರಬೇತಿ.
ಸಮುದಾಯ ಸಂಪನ್ಮೂಲ ನಿರ್ವಹಣೆ, ಜಲಸಂಪನ್ಮೂಲಗಳ ನಿರ್ವಹಣೆ ಮತ್ತು ಗ್ರಾಮದ ನೀರಿನ ಆಯವ್ಯಯ ಕುರಿತು ತರಬೇತಿ
ಬೊಮ್ಮಸಾಗರ ಗ್ರಾಮದಲ್ಲಿ ಸಮುದಾಯ ಸಂಪನ್ಮೂಲ ನಿರ್ವಹಣೆ, ನೀರಿನ ಆಯವ್ಯಯ ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆ ಕುರಿತು ತರಬೇತಿ.
ಬೊಮ್ಮಸಾಗರ: ಸತ್ಯ ಮಿಥ್ಯ ( ಜೂ -25).
ರಿಲಯನ್ಸ್ ಫೌಂಡೇಶನ್ ಮತ್ತು ವೆಡ್ಸ್ ಸಹಯೋಗದೊಂದಿಗೆ. ಸಮುದಾಯ ಸಂಪನ್ಮೂಲ ನಿರ್ವಹಣೆ, ಜಲಸಂಪನ್ಮೂಲಗಳ ನಿರ್ವಹಣೆ ಮತ್ತು ಗ್ರಾಮದ ನೀರಿನ ಆಯವ್ಯಯ ಕುರಿತು ತರಬೇತಿ ಹಮ್ಮಿಕೊಳ್ಳಲಾಗಿತ್ತು.
“ಪ್ರಸ್ತುತ ಹವಾಮಾನ ವೈಪರಿತ್ಯದಿಂದ ನೀರಿನ ಮೂಲಗಳು ಮತ್ತು ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಗದಗ ಜಿಲ್ಲೆಯಲ್ಲಿ ವಾರ್ಷಿಕ ಕೇವಲ 631mm ನಷ್ಟು ಮಳೆ ಆಗುತ್ತಿದ್ದು, ಅದು ಬೆಳೆಗಳಿಗೆ ಸಾಕಾಗುವುದಿಲ್ಲ ಮತ್ತು ಗದಗ ಜಿಲ್ಲೆಯ ಶೇ 60ರಷ್ಟು ಅಂತರ್ಜಲವು ರಾಸಾಯನಿಕಯುಕ್ತ ನೀರಾಗಿದ್ದು ಅದನ್ನು ಕೃಷಿಗೆ ಅಳವಡಿಸಲು ಮತ್ತು ಕುಡಿಯಲು ಯೋಗ್ಯವಿಲ್ಲ.
ಆದ್ದರಿಂದ ನಾವು ಮೇಲ್ಮೈ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಹೊಂಡಗಳ ನಿರ್ಮಾಣ ಮತ್ತು ಕೆರೆಗಳ ಅಭಿವೃದ್ಧಿಪಡಿಸುವುದು ಮತ್ತು ಜಲ ಸಂಪನ್ಮೂಲಗಳ ನಿರ್ವಹಣೆ ಮಾಡಬೇಕಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಗಳಾದ ಶರಣಪ್ಪ ಕೊತಬಾಳ ಮಾತನಾಡಿದರು.
ಬೊಮ್ಮಸಾಗರ ಗ್ರಾಮದ ಸ್ವ-ಸಹಾಯ ಸಂಘದವರೊಂದಿಗೆ ಚರ್ಚಿಸಿ ನೀರಿನ ಆಯವ್ಯಯವನ್ನು ಮಾಡಿದರು. ಬೊಮ್ಮಸಾಗರ ಗ್ರಾಮದ ನಕ್ಷೆಯನ್ನು ತೋರಿಸುವುದರ ಮುಖಾಂತರ ಗ್ರಾಮಕ್ಕೆ ಮಳೆಯ ಮೂಲಕ ಕಡಿಮೆ ನೀರು ಬರುತ್ತಿದ್ದು, ಗ್ರಾಮದಲ್ಲಿ ಹಾದು ಹೋಗುವ ಹಳ್ಳಗಳಿಗೆ ಅಡ್ಡಲಾಗಿ ಚೆಕ್ ಡ್ಯಾಂಗಳನ್ನು ನಿರ್ಮಿಸಿಕೊಳ್ಳಬೇಕೆಂದು ಹೇಳಿದರು. ಕೆರೆ ಮತ್ತು ಕಾಲುವೆಗಳ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಲಾಯಿತು. ಗ್ರಾಮದ ಕುಡಿಯುವ ನೀರಿನ ಕೆರೆಯ ಫಿಲ್ಟರಿನ ಅಭಿವೃದ್ಧಿ ಮತ್ತು ದುರಸ್ತಿ ಬಗ್ಗೆ ಚರ್ಚೆ ಮಾಡಲಾಯಿತು. ಗ್ರಾಮದ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಯೋಜನೆಯನ್ನು ರೈತರೊಡನೆ ಚರ್ಚಿಸಿ ಸಿದ್ದಪಡಿಸಿದರು. ಗ್ರಾಮದ ನಕ್ಷೆಯನ್ನು ತೋರಿಸುವುದರ ಮುಖಾಂತರ ವೆಡ್ಸ್ ಸಂಸ್ಥೆಯ ವಿಸ್ತರಣಾಧಿಕಾರಿಯಾದ ವಿವೇಕಾನಂದ.ಟಿ ಅವರು ಭಾಗವಹಿಸಿ ಹವಾಮಾನ ಆಧಾರಿತ ಬೇಸಾಯ ಪದ್ಧತಿಗಳ ಬಗ್ಗೆ ಮಾತನಾಡಿದರು. ಗ್ರಾಮ ಅಭಿವೃದ್ಧಿ ಸಂಘದ ಸದಸ್ಯರು ಗ್ರಾಮದ ರೈತರು, ಗ್ರಾಮ ಪಂಚಾಯತಿ ಸದಸ್ಯರು, ಹಾಗೂ ಸ್ವಸಹಾಯ ಸಂಘದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ : ಮುತ್ತು.