ವಿಜೃಂಭಣೆಯಿಂದ ಜರುಗಿದ ಗದುಗಿನ ಪುಟ್ಟರಾಜ ಗವಾಯಿಗಳ ಜಾತ್ರೆ.
ಏಳು ವರ್ಷವಾದ್ರೂ ಮುಗಿದಿಲ್ಲ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಟ್ಟಡ.
ವಿಜೃಂಭಣೆಯಿಂದ ಜರುಗಿದ ಗದುಗಿನ ಪುಟ್ಟರಾಜ ಗವಾಯಿಗಳ ಜಾತ್ರೆ.
ಗದಗ:ಸತ್ಯ ಮಿಥ್ಯ ( ಜೂ -26)
ಕಣ್ಣಿಲ್ಲದವರ ಆರಾಧ್ಯ ದೈವ ಗಾನಯೋಗಿ ತ್ರಿಭಾಷಾಗಾನ ಚಕ್ರವರ್ತಿ ಪದ್ಮವಿಭೂಷಣ ಪಂಡಿತ್ ಪುಟ್ಟರಾಜ ಗವಾಯಿಗಳವರ 14ನೆಯ ಪುಣ್ಯಸ್ಮರಣೆ ಹಾಗೂ ಪಂಡಿತ್ ಪಂಚಾಕ್ಷರಿ ಗವಾಯಿಗಳವರ 80ನೆಯ ಪುಣ್ಯಸ್ಮರಣೆ ಉಭಯ ಕವಿಗಳ ಜಾತ್ರಾ ಮಹೋತ್ಸವ ನಿನ್ನೆ ಲಕ್ಷಾಂತರ ಭಕ್ತರನ್ನು ಒಳಗೊಂಡಂತೆ ಜರುಗಿತು,
ಜಾತ್ರಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದಂತಹ ಸಾಧಕರಿಗೆ ಸನ್ಮಾನಿಸುವ ಕಾರ್ಯಕ್ರಮಗಳು ಜರುಗಿದವು.
ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ವಿವಿಧ ಕಲಾತಂಡಗಳು ಹಾಗೂ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಸಂಗೀತ ಕಲಾವಿದರು ಆಗಮಿಸಿ ಸಂಸ್ಕೃತಿಕ ಕಾರ್ಯಕ್ರಮಗಳಿಗೆ ಮೆರಗೂ ಮೂಡಿಸಿದರು .
ನಿನ್ನೆ ಜಾತ್ರಾ ಮಹೋತ್ಸವದ ಅಂಗವಾಗಿ ವೀರೇಶ್ವರ ಮಠದಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಪಂಡಿತ್ ಪುಟ್ಟರಾಜ ಗವಾಯಿಗಳವರ ಪಂಡಿತ್ ಪಂಚಾಕ್ಷರಿಗಳವರ ಭಾವಚಿತ್ರದೊಂದಿಗೆ ವಿವಿಧ ಕಲಾತಂಡಗಳೊಂದಿಗೆ ಭೂಮರೆಡ್ಡಿ ಸರ್ಕಲ್ ಗಾಂಧಿ ಸರ್ಕಲ್ ಕೆ,ಸಿ ರಾಣಿ ರಸ್ತೆ ಚೇತನ ಕ್ಯಾಂಟೀನ್ ಸೇರಿದಂತೆ ನಗರದ ವಿವಿದಡೆ ನೃತ್ಯ ಹಾಗೂ ಕಲಾತಂಡದೊಂದಿಗೆ ವಾದ್ಯ ಮೇಳದೊಂದಿಗೆ ಪುಟ್ಟರಾಜ ಗವಾಯಿಗಳವರ ನಾಮಸ್ಮರಣೆಯ ಮೂಲಕ ವಿಜ್ರಂಬಣೆಯಿಂದ ಭಕ್ತರು ಜಾತ್ರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಜಾತ್ರಾ ಮಹೋತ್ಸವದ ಅಂಗವಾಗಿ ವೀರೇಶ್ವರ ಮಠದಲ್ಲಿ ವಿವಿಧ ಬಗೆಯ ತಳಿರು ತೋರಣ ಹಾಗೂ ಹೂಗಳಿಂದ ಮಠದ ಆವರಣವನ್ನು ಅಲಂಕಾರಗೊಳಿಸಿ ಪುಟ್ಟರಾಜ ಗವಾಯಿಗಳವರ ಗದ್ದುಗೆ ವಿಶೇಷ ರೀತಿಯ ಅಲಂಕಾರದೊಂದಿಗೆ ಜಾತ್ರಾ ಮಹೋತ್ಸವವನ್ನು ನೆರವೇರಿಸಲಾಯಿತು.
ಜಾತ್ರಾ ಮಹೋತ್ಸವದ ಅಂಗವಾಗಿ ಭಕ್ತರು ಬೆಳಗ್ಗೆಯಿಂದಲೇ ಮಠಕ್ಕೆ ಆಗಮಿಸಿ ಶ್ರದ್ಧಾ ಭಕ್ತಿಯಿಂದ ಪೂಜೆಯನ್ನು ಸಲ್ಲಿಸಿ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಜಾತ್ರಾ ಮಹೋತ್ಸವಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಾಗೂ ವಿವಿಧ ರಾಜ್ಯಗಳಿಂದ ಜನರು ಆಗಮಿಸಿ ಪಂಡಿತ್ ಪುಟ್ಟರಾಜ ಗವಾಯಿಗಳವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡರು.
ಜಾತ್ರಾ ಮಹೋತ್ಸವದ ಅಂಗವಾಗಿ ಮಠದಲ್ಲಿ ಭಕ್ತರಿಗೆ ಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು ಅಲ್ಲದೆ ವಿವಿಧ ಸಂಘಟನೆಗಳು ನಗರದ ವಿವಿಧಡೆ ಪ್ರಸಾದದ ವ್ಯವಸ್ಥೆಯನ್ನು ಮಾಡಿದ್ದರು.
ಏಳು ವರ್ಷವಾದ್ರೂ ಮುಗಿದಿಲ್ಲ ಪುಟ್ಟರಾಜ ಗವಾಯಿಗಳ ಸ್ಮಾರಕ ಭವನ ಕಟ್ಟಡ.
ಮಾರ್ಚ್ 25, 2011ರಂದು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶ ಮಾಡಿತ್ತು. ಸ್ಥಳೀಯ ಶಾಸಕ ಎಚ್ ಕೆ ಪಾಟೀಲ್ 2016ರಲ್ಲಿ ಅಂದಿನ ಕಾಂಗ್ರೆಸ್ ಸರ್ಕಾರ 5 ಕೋಟಿ ಅನುದಾನ ತರುವಲ್ಲಿ ಹಚ್ಚಿನ ಕಾಳಜಿ ವಹಿಸಿದ್ದರು.
ಲೋಕೋಪಯೋಗಿ ಇಲಾಖೆ ಮೂಲಕ ಮಹಾರಾಷ್ಟ್ರ ಮೂಲದ ಶಿರ್ಕೆ ಕನ್ಸ್ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಲಾಗಿತ್ತು. ಆದ್ರೆ, 7 ವರ್ಷಗಳು ಕಳೆದು ಮತ್ತೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ್ರೂ ಸ್ಮಾರಕ ಭವನದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. 5 ಕೋಟಿಯ ಅನುಮೋದ ನೀಡಿದ್ದ ಕಟ್ಟಡ 6.25 ಕೋಟಿ ಖರ್ಚು ಮಾಡಿದ್ರೂ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅರ್ಧಕ್ಕೆ ಕಾಮಗಾರಿ ನಿಂತು ಹೋಗಿದೆ. ಇದು ಶ್ರೀಮಠದ ಪೀಠಾಧಿಪತಿಗಳಾದ ಕಲ್ಲಯ್ಯಜ್ಜನವರ ಅಸಮಾಧಾನಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಅನುದಾನ ನೀಡಿ ಸ್ಮಾರಕ ಪೂರ್ಣಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ವರದಿ:ಮುತ್ತು ಗೋಸಲ