ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು – ಧ್ರುವ ಜತ್ತಿ.
*ಜತ್ತಿ ಫೌಂಡೆಶನ್ ವತಿಯಿಂದ ಸಸಿ ನೆಡುವ ಕಾರ್ಯಕ್ರಮ.
*ಪರಿಸರ ರಕ್ಷಣೆ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯ.ಪ್ರತಿ ಜೀವಿ ಬದುಕಲು ಗಿಡ ಮರಗಳು ಬೇಕು.
ಸಾವಳಗಿ: ಸತ್ಯಮಿಥ್ಯ (ಜೂ -26)
ಪರಿಸರವನ್ನು ಬೆಳೆಸಿ ಪೋಷಣೆ ಮಾಡಿ ಉಳಿಸಿಕೊಳ್ಳುವ ಕಾರ್ಯ ಅಷ್ಟೊಂದು ಸುಲಭವಲ್ಲ. ಪರಿಸರ ಸಂರಕ್ಷಿಸಲು ಹೃದಯವಂತಿಕೆ ಬೇಕು ಎಂದು ಬಿ.ಡಿ ಜತ್ತಿ ಫೌಂಡೆಶನ್ ಅಧ್ಯಕ್ಷ ಧ್ರುವ ಜತ್ತಿ ಹೇಳಿದರು.
ಜಮಖಂಡಿ ತಾಲೂಕಿನ ಸಾವಳಗಿ ಸಮೀಪದ ಕಾಜಿಬೀಳಗಿಯ ಅರಣ್ಯ ಪ್ರದೇಶದಲ್ಲಿ ಜತ್ತಿ ಫೌಂಡೇಶನ್ ವಿಷನ್ ಬಾಗಲಕೋಟ್ 2040 ಸಹಯೋಗದಡಿಯಲ್ಲಿ ಫ್ರಾನ್ಸ್ ವಿದ್ಯಾರ್ಥಿಗಳೊಂದಿಗೆ 300 ಕ್ಕೂ ಹೆಚ್ಚು ಸಸಿ ನೇಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬುಧವಾರ ಚಾಲನೆ ನೀಡಿದರು.
ಮಾನವನ ಮಿತಿ ಮೀರಿದ ಚಟುವಟಿಕೆಗಳಿಂದ ನಮ್ಮ ಸುತ್ತಲಿನ ಪರಿಸರ ಮಾಲಿನ್ಯವಾಗುತ್ತಿದೆ. ಗಿಡಗಳನ್ನು ನೆಟ್ಟು ಪೋಷಣೆ ಮಾಡುವುದರಿಂದ ಉತ್ತಮ ಪರಿಸರವನ್ನು ನಿರ್ಮಿಸಬಹುದು, ಗಿಡಗಳನ್ನು ನೆಟ್ಟು ಪೋಷಿಸುವುದರಿಂದ ಗಾಳಿ, ನೆರಳು, ಹಣ್ಣುಗಳು ದೊರೆತು ಪರಿಸರ ಸಂಪದ್ಭರಿತವಾಗುತ್ತದೆ.ನಮ್ಮ ಸುತ್ತಿಲಿನ ಪರಿಸರದ ಅಂಶಗಳಾದ ನೀರು, ಜಲ, ನೆಲವನ್ನು ಹಾಳುಗೆಡುವಬಾರದು. ಗಿಡಗಳನ್ನು ಪೋಷಣೆ ಮಾಡಿ ಸಂರಕ್ಷಿಸಿ ಅದರ ನೆರಳು ಅಥವಾ ಫಲವನ್ನು ಪಡೆದುಕೊಳ್ಳುವಂತಾಗಬೇಕು.
ಕಾರ್ಯಕ್ರಮದಲ್ಲಿ ಜಮಖಂಡಿ BLD ಕಾಲೇಜ್ ವಿದ್ಯಾರ್ಥಿಗಳು ಫ್ರಾನ್ಸ್ ದೇಶದ ವಿದ್ಯಾರ್ಥಿಗಳು ಸಾವಳಗಿ ಗ್ರಾಮದ ಸುತ್ತಮುತ್ತಲಿನ ಗುರುಹಿರಿಯರು ಭಾಗವಹಿಸಿದರು.
ಜತ್ತಿ ಫೌಂಡೇಶನ್ ಸಂಸ್ಥಾಪಕರು ತೇರದಾಳ ಮತಕ್ಷೇತ್ರ ಮತ್ತು ಜಮಖಂಡಿ ಮತಕ್ಷೇತ್ರದ ಯುವ ನಾಯಕ ಧ್ರುವ ಜತ್ತಿ ಅವರ ನೇತೃತ್ವದಲ್ಲಿ ಬುಧವಾರ ಸಾವಳಗಿ ಸಮೀಪದ ಕಾಜಿಬೀಳಗಿಯ ಅರಣ್ಯ ಪ್ರದೇಶದಲ್ಲಿ ಸಸಿಗಳನ್ನು ನೆಟ್ಟರು.
“ಇಂದಿನ ದಿನಮಾನಗಳಲ್ಲಿ ಪರಿಸರವನ್ನು ತುಂಬಾ ಹಾಳು ಮಾಡುತ್ತಿದ್ದಾರೆ, ಮುಂದಿನ ಯುವ ಪೀಳಿಗಾಗಿಗೆ ಪರಿಸರವನ್ನು ಸಂರಕ್ಷಿಸಿ, ನಮ್ಮ ಜತ್ತಿ ಫೌಂಡೆಶನ್ ವತಿಯಿಂದ ಸುಮಾರು 300 ಕ್ಕಿಂತ ಹೆಚ್ಚು ಸಸಿಗಳನ್ನು ತೇರದಾಳ ಹಾಗೂ ಜಮಖಂಡಿ ಮತಕ್ಷೇತ್ರದಲ್ಲಿ ಸಸಿಗಳನ್ನು ನೆಟ್ಟಿದ್ದೇವೆ”
ಧ್ರುವ ಜತ್ತಿ.
ಬಿ. ಡಿ. ಜತ್ತಿ ಫೌಂಡೇಶನ್ ಅಧ್ಯಕ್ಷ ಬೆಂಗಳೂರು
ವರದಿ : ಸಚೀನ ಜಾಧವ