ದೇವರ ದರ್ಶನ ಮುಗಿಸಿ ಹೊರಟವರಿಗೆ ಕಾದಿತ್ತು ಮೃತ್ಯು. ಮಸಣ ಸೇರಿದ ಹದಿಮೂರು ಮಂದಿ.
ಹಾವೇರಿ - ಭೀಕರ ರಸ್ತೆ ಅಪಘಾತ 13 ಮಂದಿ ಸ್ಥಳದಲ್ಲೇ ದುರ್ಮರಣ.

ದೇವರ ದರ್ಶನ ಮುಗಿಸಿ ಹೊರಟವರಿಗೆ ಕಾದಿತ್ತು ಮೃತ್ಯು. ಮಸಣ ಸೇರಿದ ಹದಿಮೂರು ಮಂದಿ.
ಹಾವೇರಿ – ಭೀಕರ ರಸ್ತೆ ಅಪಘಾತ 13 ಮಂದಿ ಸ್ಥಳದಲ್ಲೇ ದುರ್ಮರಣ.
ಹಾವೇರಿ:ಸತ್ಯ ಮಿಥ್ಯ ( ಜೂ -28).
ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಬಳಿ ಭೀಕರ ರಸ್ತೆ ಅಪಘಾತ ನಡೆದಿದ್ದು, 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಮೃತರು ಸವದತ್ತಿ ಯಲ್ಲಮ್ಮ ದೇವಿ ದರ್ಶನ ಮುಗಿಸಿ ಹೊರಟಿದ್ದರು ಎಂದು ತಿಳಿದು ಬಂದಿದೆ .
ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಟಿಟಿ ವಾಹನ ಹಿಂದಿನಿಂದ ಗುದ್ದಿದ್ದು, ಪರಿಣಾಮವಾಗಿ 13 ಜನರು ಮೃತಪಟ್ಟ ಘಟನೆ ಹಾವೇರಿಯ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿಯ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ (ಜೂನ್. 28) ಬೆಳಗ್ಗೆ ನಡೆದಿದೆ.
ಲಾರಿಗೆ ಟಿಟಿ ಡಿಕ್ಕಿಯಾದ ರಭಸಕ್ಕೆ ಟಿಟಿ ವಾಹನದಲ್ಲಿದ್ದ 7 ಮಂದಿ ಮಹಿಳೆಯರು ಸೇರಿದಂತೆ 13 ಜನ ಮೃತಪಟ್ಟಿದ್ದಾರೆ. ಟಿಟಿ ವಾಹನ ನಜ್ಜುಗುಜ್ಜಾಗಿದ್ದು, ವಾಹನದಲ್ಲಿ ಮೃತದೇಹಗಳು ಅಪ್ಪಚ್ಚಿಯಾಗಿವೆ.ದೇವಸ್ಥಾನದಿಂದ ಮರಳಿ ಬರುವಾಗ ಅಪಘಾತ ಸಂಭವಿಸಿದೆ. ಮೃತರು ಶಿವಮೊಗ್ಗ ಮೂಲದ ನಿವಾಸಿಗಳು ಎನ್ನಲಾಗಿದೆ.
ಬೆಳಗಿನ ಜಾವ 4 ಗಂಟೆಯ ಸುಮಾರಿಗೆ ಅಪಘಾತ ನಡೆದಿದೆ ಎನ್ನಲಾಗಿದೆ. ಘಟನೆ ತಿಳಿಯುತ್ತಿದ್ದ ಹಾಗೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಇಲಾಖೆ ಸಿಬ್ಬಂದಿ ವಾಹನದಲ್ಲಿ ಸಿಲುಕಿದ್ದ ಮೃತದೇಹಗಳನ್ನ ಹೊರ ತೆಗೆಯಲು ಹರಸಾಹಸ ಪಟ್ಟಿದ್ದಾರೆ. ಅಲ್ಲದೇ ಪೊಲೀಸರು ಮೃತರ ಹಿನ್ನೆಲೆ ಪತ್ತೆ ಹಚ್ಚುತ್ತಿದ್ದಾರೆ. ಘಟನೆಯಲ್ಲಿ ಓರ್ವ ಅಪ್ರಾಪ್ತರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಮೃತರನ್ನು ಸುಭದ್ರಾ ಬಾಯಿ (65 ವರ್ಷ), ಪರಶುರಾಮ (45 ವರ್ಷ), ಭಾಗ್ಯ (40 ವರ್ಷ), ನಾಗೇಶ್ (50 ವರ್ಷ), ವಿಶಾಲಾಕ್ಷಿ (40 ವರ್ಷ), ಅರ್ಪಿತಾ (18 ವರ್ಷ), (ಪುಣ್ಯ 50 ವರ್ಷ), ಮಂಜುಳಾ ಬಾಯಿ (62 ವರ್ಷ), ಆದರ್ಶ (23 ವರ್ಷ), ಮಾನಸ (24 ವರ್ಷ), ರೂಪಾ (40 ವರ್ಷ), ಮಂಜುಳಾ (50 ವರ್ಷ) ಎಂದು ಗುರುತಿಸಲಾಗಿದೆ.
6 ವರ್ಷದ ಮಗು ಹೆಸರು ಪತ್ತೆ ಆಗಬೇಕಿದೆ. ವಾಹನದಲ್ಲಿ 17 ಜನ ಪ್ರಯಾಣ ಮಾಡುತ್ತಿದ್ದರು. ಇನ್ನೂ ಅರ್ಪಿತಾ, ಅರುಣಾ, ಅನ್ನಪೂರ್ಣ ಎನ್ನುವ ಮೂವರು ಗಾಯಾಳುಗಳ ಚಿಕಿತ್ಸೆ ಪಡೆಯುತ್ತಿದ್ದಾರೆ. ಸಾವನಪ್ಪಿದವರು ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪವಿರುವ ಎಮ್ಮೆಹಟ್ಟಿ ಗ್ರಾಮದವರು.
ವರದಿ : ಮುತ್ತು.