ಕೋಲಿ ಸಮಾಜ ಎಸ್ಟಿಗೆ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ – ಉಮೇಶ ಮುದ್ನಾಳ ಆರೋಪ.
ಅಜಲಾಪುರ: ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆಗೊಳಿಸಿದ ಉಮೇಶ ಕೆ ಮುದ್ನಾಳ

ಕೋಲಿ ಸಮಾಜ ಎಸ್ಟಿಗೆ ಸೇರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಿರ್ಲಕ್ಷ – ಉಮೇಶ ಮುದ್ನಾಳ ಆರೋಪ.
ಅಜಲಾಪುರ: ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆಗೊಳಿಸಿದ ಉಮೇಶ ಕೆ ಮುದ್ನಾಳ
ಯಾದಗಿರಿ:ಸತ್ಯಮಿಥ್ಯ ( ಜೂ -28)
ಕೋಲಿ ಸಮಾಜ ರಾಜಕೀಯ, ಶೈಕ್ಷಣಿಕ, ಆರ್ಥಿಕವಾಗಿ ಹಿಂದುಳಿಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರಣ ಏಕೆಂದರೆ, ಟೋಕ್ರಿ ಕೋಲಿ ಬಿಟ್ಟುಹೊದ ಪರ್ಯಾಯ ಪದಗಳಾದ ಕೋಲಿ ಕಬ್ಬಲಿಗ, ಅಂಬಿಗ, ಬೆಸ್ತ ಸೇರಿದಂತೆ ಅನೇಕ ಪದಗಳನ್ನು ಪರಿಶಿಷ್ಟ ಪಂಗಡದಲ್ಲಿ ಸೇರಿಸಲು ವಿಠಲ್ ಹೇರೂರು ಅವರು ಸಾಕಷ್ಟು ವರ್ಷಗಳ ಹೋರಾಟ ಮಾಡಿದರೂ ಸಹ ಸೇರ್ಪಡೆ ಮಾಡದ ರಾಜಕಾರಣಿಗಳು ಅನ್ಯಾಯ ಮಾಡಿದ್ದಾರೆ ಎಂದು ಕೋಲಿ ಸಮಾಜದ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ ಕೆ. ಮುದ್ನಾಳ ಹೇಳಿದರು.
ಅವರು ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಸೈದಾಪೂರ ಹೋಬಳಿಯಲಿ ಬರುವ ಅಜಲಾಪುರ ಗ್ರಾಮದಲ್ಲಿ ನಿಜಶರಣ ಅಂಬಿಗರ ಚೌಡಯ್ಯನವರ ನಾಮಫಲಕ ಲೋಕಾರ್ಪಣೆ ಗೊಳಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಚುನಾವಣೆ ಬಂದಾಗ ಮಾತ್ರ ಕೋಲಿ ಸಮಾಜ ಪರಿಶಿಷ್ಟ ಪಂಗಡಕ್ಕೆ ಸೇರಿಸುವುದಾಗಿ ಇಲ್ಲಸಲ್ಲದ ಸುಳ್ಳು ಹೇಳುವ ಮೂಲಕ ಮತ ಪಡೆಯುತ್ತಾ ಬಂದಿದ್ದು ಆ ಪಕ್ಷಗಳಲ್ಲಿರುವ ನಮ್ಮ ಮುಖಂಡರಿಂದ ಹೇಳಿಕೆ ಕೊಡಿಸುತ್ತಾ ಮರಳು ಮಾಡುತ್ತಾ ಬಂದಿದ್ದಾರೆ. ಆದ್ದರಿಂದ ಸಮಾಜದ ಜನ ಜಾಗೃತರಾಗಬೇಕು, ರಾಜಕಾರಣಿಗಳು ಬಂದಾಗ ಪ್ರತಿಯೊಬ್ಬರು ಪ್ರಶ್ನೆ ಕೇಳುವಂತಾಗಬೇಕು ಅಂದಾಗ ಮಾತ್ರ ಸಮಾಜವನ್ನು ಗುರ್ತಿಸುತ್ತಾರೆ ಹೀಗಾಗಿ ಜಾಗೃತರಾಗಿ ಎಂದು ಕರೆ ನೀಡಿದರು.
ಇದಕ್ಕೂ ಮುನ್ನ ಪ್ರಮುಖ ರಸ್ತೆಗಳ್ಲಲಿ ಅಂಬಿಗರ ಚೌಡಯ್ಯನವರ ಭಾವಚಿತ್ರವನ್ನು ಛತ್ರಿ ಚಾಮರಗಳೊಂದಿಗೆ ಮೆರವಣಿಗೆ ಮಾಡಲಾಯಿತು.
ಈ ವೇಳೆ ರಫೀಕ್ ಪಟೇಲ್, ಅಂಜಿನೇಯ, ಬಾಬಾಖಾನ್, ಚೆನ್ನಪ್ಪ, ನಿಂಗು, ಶಂಕ್ರಪ್ಪ, ಚಂದ್ರಪ್ಪ, ಸಿದ್ರಾಮ, ಭೀಮಪ್ಪ, ನಿಂಗಪ್ಪ, ಶಿವರಾಜ, ತಾಯಪ್ಪ, ಬಾಲರಾಜ, ಸಾಯಿಬಣ್ಣ, ಭೀಮಶೆಪ್ಪ, ಅಚಿಜಪ್ಪ, ಚಂದ್ರಶೇಖರ, ಸುರೇಶ, ವೆಂಕಟಪ್ಪ, ಬಾಲಪ್ಪ, ಬಸವರಾಜ, ಶಂಕ್ರಮ್ಮ, ಮಲ್ಲಮ್ಮ, ದೇವಮ್ಮ, ಅಮೃತಾ, ಮಾದೇವಿ, ಅನಂತಮ್ಮ, ಪೋಷಮ್ಮ, ಶಾಮಮ್ಮ, ರಾಜೇಶ್ವರ, ಸುನಿತಾ ಸೇರಿ ಅನೇಕರಿದ್ದರು.
ಬನ್ನಪ್ಪ ಸ್ವಾಗತಿಸಿದರು, ವಿಶ್ವನಾಥರೆಡ್ಡಿ ನಿರೂಪಿಸಿದರು. ಗೋವಿಂದ ಇಡ್ಲೂರ ವಂದಿಸಿದರು.
ವರದಿ :ಶಿವು ರಾಠೋಡ