ಸ್ಥಳೀಯ ಸುದ್ದಿಗಳು

ಅಂಚೆ ಕಚೇರಿಯಲ್ಲಿ ಎಟಿಎಂ ತೆರೆಯಲು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮನವಿ

ಹೊಳೆಆಲೂರ - ಅಂಚೆ ಕಛೇರಿಯಲ್ಲಿ ಎಟಿಎಂ ಇಲ್ಲದೆ ಗ್ರಾಹಕರು ಪರದಾಟ.

Share News

ಅಂಚೆ ಕಚೇರಿಯಲ್ಲಿ ಎಟಿಎಂ ತೆರೆಯಲು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆ ಮನವಿ

ರೋಣ :ಸತ್ಯಮಿಥ್ಯ ( ಜೂ -28)

ತಾಲೂಕಿನಲ್ಲಿ ಹೊಳೆಆಲೂರ ಗ್ರಾಮ ದಿನದಿಂದ ದಿನಕ್ಕೆ ಬೆಳೆಯುತ್ತಲಿದೆ. ಪ್ರಮುಖ ವ್ಯಾಪಾರ ಕೇಂದ್ರವಾಗಿ ಪರಿವರ್ತನೆಯಾಗುತ್ತಿದೆ ದಿನ ನಿತ್ಯ ಸುತ್ತಲಿನ ಗ್ರಾಮದಿಂದ ಬಹಳಷ್ಟು ಜನ ಈ ಊರಿಗೆ ಬಂದು ವ್ಯಾಪಾರದಲ್ಲಿ ತೊಡಗಿಕೊಳ್ಳುವುದರಿಂದ ಸ್ಥಳೀಯ ಪೋಸ್ಟ್ ಆಫೀಸ್ ಶಾಖೆಯಲ್ಲಿ ಎಟಿಎಂ ಹಾಗೂ ಪೋಸ್ಟ್ ಆಫೀಸ್ನಲ್ಲಿ ಜನತೆಗೆ ದೊರಕು ಸೌಲಭ್ಯಗಳನ್ನು ಒದಗಿಸಬೇಕು ಎಂದು ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ಉತ್ತರ ಕರ್ನಾಟಕ ಅಧ್ಯಕ್ಷ ಎಮ್. ಎ.ಕುರ್ತಕೋಟಿ ಹಾಗೂ ರೋಣ ತಾಲೂಕ ಅಧ್ಯಕ್ಷರು ಎಮ್ ಎಚ್ ನದಾಫ್ ರವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು .

ಪೋಸ್ಟ್ ಆಫೀಸ್ನಲ್ಲಿ ಹಣ ತೆಗೆದುಕೊಳ್ಳಲು ಒಂದೇ ಕೌಂಟರ್ ಇದ್ದು ಇದರಿಂದಾಗಿ ವಯಸ್ಸಾದ ವಯೋವೃದ್ಧರು ಹಣ ತೆಗೆದುಕೊಳ್ಳಲು ತೊಂದರೆಯಾಗುತ್ತಿದ್ದು ಎರಡು ಕೌಂಟರ್ ಮಾಡಬೇಕು ಹಾಗೂ ಪೋಸ್ಟ್ ಆಫೀಸನ ಸುತ್ತ ಅಂಗಡಿಗಳು  ಇರುವುದರಿಂದ ಹೊಸಬರು ಪೋಸ್ಟ್ ಆಫೀಸನ್ನು ಹುಡುಕುವ ಪರಿಸ್ಥಿತಿ ಬಂದೋದಗಿದೆ. ಆದ್ದರಿಂದ ಸಾರ್ವಜನಿಕರಿಗೆ ತಿಳಿಯುವಂತೆ ಅಲ್ಲಿ ಎರಡು ಬೋಡುಗಳನ್ನು ಹಾಕಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಸಲ್ಲಿಸಲಾಯಿತು.

ಒಂದು ವೇಳೆ ಈ ಮೇಲ್ಕಂಡ ಮನವಿಗೆ ಸ್ಪಂದಿಸದಿದ್ದರೆ ಪೋಸ್ಟ್ ಆಫೀಸ್ ಮುಂಭಾಗದಲ್ಲಿ ಗ್ರಾಮಸ್ಥರಿಂದ ಹಾಗೂ ನಮ್ಮ ಸಂಘದಿಂದ ಪ್ರತಿಭಟನೆಯನ್ನು ಮಾಡುತ್ತೇವೆ ಎಂದು ಮಾನ್ಯ ಮುಖ್ಯ ವ್ಯವಸ್ಥಾಪಕರು ಗದಗ ಜಿಲ್ಲಾ ಪೋಸ್ಟ್ ಆಫೀಸ್ ಇವರಿಗೆ ಮನವಿಯನ್ನು ಸಲ್ಲಿಸಲಾಯಿತು.

ಈ ಸಮಯದಲ್ಲಿ ಬೇಟಗೇರಿ ಗ್ರಾಮ ಘಟಕ ಅಧ್ಯಕ್ಷರಾದ ಪ್ರಕಾಶ್ ಗಾರವಾಡ, ಇಮ್ರಾನ್ ಕಲೆಗಾರ್, ಪ್ರವೀಣ್ ಚಾವಲಾ, ಕಾಸಿಂ ಚಪ್ರಬಂಧ, ಪ್ರವೀಣ ಕರುಗಲ್ ಇನ್ನೂ ಅನೇಕ ಉಪಸ್ಥಿತರಿದ್ದರು.

ವರದಿ : ಮುತ್ತು.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!