ವಿದ್ಯಾರ್ಥಿಗಳು ತಿನ್ನುವ ಆಹಾರದಲ್ಲಿ ಹುಳು – ಕಣ್ಮುಚ್ಚಿ ಕುಳಿತ ಅಧಿಕಾರಿಗಳು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗಾರ
*ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಕಣ್ಮುಚ್ಚಿ ಕುಳಿತ ಅಧಿಕಾರಿಗಳು*
ಯಾದಗಿರಿ: ಸತ್ಯಮಿಥ್ಯ ( ಜೂ -29).
ಜಿಲ್ಲೆ ಶಹಾಪುರ ನಗರದ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯ ಅವ್ಯವಸ್ಥೆಯ ಆಗಾರವಾಗಿದೆ. ಇಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಹುಳುಗಳು ಕಂಡು ವಿದ್ಯಾರ್ಥಿಗಳು ದಂಗಾಗಿದ್ದಾರೆ.
ವಸತಿ ನಿಲಯದ ವಿದ್ಯಾರ್ಥಿಗಳಿಗೆ ನೀಡುವ ಆಹಾರ ಕಳಪೆ ಮಟ್ಟದ್ದಾಗಿದೆ ಎಂದು ವಿದ್ಯಾರ್ಥಿಗಳು ಪದೇ ಪದೇ ಮೇಲಧಿಕಾರಿಗಳಿಗೆ ಹೇಳಿದರು ಕ್ಯಾರೇ ಎನ್ನುತ್ತಿದ್ದಿಲ್ಲ. ಇನ್ನು ಮುಂದೆ ಆದರೂ ಕಣ್ಮುಚ್ಚಿಕೊಳ್ಳುತ ಅಧಿಕಾರಿಗಳೇ ಇತ್ತ ಗಮನಹರಿಸಬೇಕು.
😘
ಬಡ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಲು ಸರ್ಕಾರ ಸಾಕಷ್ಟು ಹಣ ನೀಡುತ್ತಿದ್ದರು ಇಂಥ ಕಳಪೆ ಗುಣಮಟ್ಟದ ಹಾರವನ್ನು ನೀಡಿ ಇಲಾಖೆಯ ಅಧಿಕಾರಿಗಳು ತಮ್ಮ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ ಇಂಥ ದುಷ್ಟ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡುಬೇಕು .ಇಂತಹ ಕಳಪೆ ಮಟ್ಟದ ಆಹಾರ ಕೊಡುವ ಏಜೆನ್ಸಿಗಳು ಹಾಗೂ ತೆಗೆದುಕೊಳ್ಳುತ್ತಿರುವ ಮೇಲ್ವಿಚಾರಕರು ಕೂಡಲೇ ಅಮಾನತು ಮಾಡುವಂತೆ ಪ್ರದೀಪ್ ಅಣಬಿ ಆಗ್ರಹಿಸಿದರು.
ವರದಿ : ಶಿವು ರಾಠೋಡ