ಲಿಂಗಸಗೂರು – ಹಾಸ್ಪಿಟಲ್ ಸಿಬ್ಬಂದಿ ಮೇಲೆ ಹಲ್ಲೆಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ.
ತಾಲೂಕ ವೈದ್ಯಾಧಿಕಾರಿಗಳ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ

ಲಿಂಗಸಗೂರು – ಹಾಸ್ಪಿಟಲ್ ಸಿಬ್ಬಂದಿ ಮೇಲೆ ಹಲ್ಲೆಮಾಡಿದವರ ವಿರುದ್ಧ ಕ್ರಮಕ್ಕೆ ಆಗ್ರಹ.
ತಾಲೂಕ ವೈದ್ಯಾಧಿಕಾರಿಗಳ ಸಂಘದಿಂದ ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ
ಲಿಂಗಸುಗೂರು:ಸತ್ಯಮಿಥ್ಯ (ಜೂ.28).
ರಾಯಚೂರು ಜಿಲ್ಲೆಯ ವಿ.ಜಿ.ಕೆ ಪಾಲಿಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ನಲ್ಲಿ ಜೂ.25ರಂದು ಕರ್ತವ್ಯಕ್ಕೆ ಹಾಜರಾದ ಆರೋಗ್ಯ ವೃತ್ತಿಪರರ ಮೇಲೆ ನಡೆದಿರುವ ಹಿಂಸೆಯನ್ನು ಖಂಡಿಸಿದ್ದಲ್ಲದೆ ಭಯದ ವಾತಾವರಣ ನಿರ್ಮಿಸಿದವರ ವಿರುದ್ದ ಜಿಲ್ಲಾಡಳಿತ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿ ಸ್ಥಳೀಯ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ಸಹಾಯಕ ಆಯುಕ್ತರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಘಟನೆಯನ್ನು ಖಂಡಿಸಿ ರಾಯಚೂರು ಜಿಲ್ಲೆಯ ಎಲ್ಲಾ ಭಾರತೀಯ ವೈದ್ಯಕೀಯ ಸಂಘದ ಸದಸ್ಯರು ತಮ್ಮ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳಲ್ಲಿ ಶುಕ್ರವಾರ(ಜೂ.28) ಮಧ್ಯಾಹ್ನ 12 ಗಂಟೆಯಿಂದ ತುರ್ತು ಹೊರತುಪಡಿಸಿ ತಮ್ಮ ಎಲ್ಲಾ ಸೇವೆಗಳನ್ನು ಹಿಂಪಡೆಯುವುದಾಗಿ ಮತ್ತು ಜೂ.29 ಬೆಳಿಗ್ಗೆ 9 ರಿಂದ ಜೂ.30ವರೆಗೆ ಎಲ್ಲಾ ವೈದ್ಯಕೀಯ ಸೇವೆಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸುವುದಾಗಿ ತಿಳಿಸಿದ್ದಾರೆ.
ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ಕಾರ್ಯನಿರ್ವಹಿಸುವಲ್ಲಿ ಭಯಮುಕ್ತ ವಾತಾವರಣ ಸೃಷ್ಟಿಸಬೇಕೆಂದು ಜಿಲ್ಲಾಡಳಿತಕ್ಕೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಡಾ. ಲಕ್ಷ್ಮಪ್ಪ ಇ.ಡಾ.ರಂಗನಾಥ್, ಡಾ.ರಾಚಪ್ಪ ಬುದ್ದಿನ್ನಿ,ಡಾ.ಆನಂದ್ ಚೌದ್ರಿ, ಡಾ.ರುದ್ರಗೌಡ ಪಾಟೀಲ್, ಡಾ.ವಿಜಯಮಕುಮಾರ, ಎಚ್ ಡಾ. ಎಂ.ಡಿ. ಖಾಜಾ ಮೊಹಿನುದ್ದೀನ್ ಇತರರು ಭಾವಹಿಸಿದ್ದರು.
ವರದಿ : ರಮೇಶ ನಾಯಕ.