ಪರವಾನಗಿ ಇಲ್ಲದ ಅಂಗಡಿ ಮೇಲೆ ತಹಸೀಲ್ದಾರ್ ನೇತೃತ್ವದಲ್ಲಿ ದಾಳಿ – ಭಯಗೊಂಡ ವ್ಯಾಪಾರಸ್ಥರು ಅಂಗಡಿ ಬಂದ್.
ಗಜೇಂದ್ರಗಡ : ಸತ್ಯಮಿಥ್ಯ (ಜೂಲೈ -04).
ಪಟ್ಟಣದಲ್ಲಿ ಉದ್ಯಮ ಪರವಾನಿಗೆ ಪಡೆಯದ ಅಥವಾ ನವೀಕರಿಸದ ಮತ್ತು ಆಕ್ರಮ ತಂಬಾಕು ಮಾರಾಟ, ಕಳಪೆ ಗುಣಮಟ್ಟದ ಪ್ಲಾಸ್ಟಿಕ್ ಮತ್ತು ಹೋಟೆಲ್ ಗಳಲ್ಲಿ ಟೆಸ್ಟಿಂಗ್ ಪೌಡರ್ ಉಪಯೋಗಿಸಿ ಆಹಾರ ತಯಾರಮಾಡುವ ಹೋಟೆಲ್ ಗಳ ಮೇಲೆ ತಹಶೀಲ್ದಾರ್ ನೇತೃತ್ವದಲ್ಲಿ ದಾಳಿ ಮಾಡಲಾಯಿತು.ಇದರಿಂದ ಪಟ್ಟಣದ ಅನೇಕ ಕಡೆ ಭಯಗೊಂಡ ವ್ಯಾಪಾರಸ್ಥರು ಅಂಗಡಿ ಬಂದ್ ಮಾಡಿ ಮನೆಗೆ ಹೋದ ಘಟನೆ ಜರುಗಿತು.
ನಿನ್ನೆಯಿಂದ ಗಜೇಂದ್ರಗಡ ತಹಸೀಲ್ದಾರ್ ಕಿರಣಕುಮಾರ ಕುಲಕರ್ಣಿ , ಪುರಸಭೆ ಮುಖ್ಯಧಿಕಾರಿ ಬಸವರಾಜ ಬಳಗಾನೂರ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಪುರಸಭೆ ಸಿಬ್ಬಂದಿಯಂನ್ನೊಳಗೊಂಡ ತಂಡ ನಗರದ ಅನೇಕ ಕಡೆ ದಾಳಿ ಮಾಡಿದರು.
ಪಟ್ಟಣದ ದುರ್ಗಾವೃತ್ತ, ಕುಷ್ಟಗಿ ರಸ್ತೆ,ಬಸ್ ನಿಲ್ದಾಣದ ಪಕ್ಕ,ಡಬಲ್ ರೋಡ್ ಸೇರಿದಂತೆ ಅನೇಕ ಕಡೆ ಭೇಟಿ ನೀಡಿದ ತಂಡ ಕಿರಾಣಿ ಅಂಗಡಿಯಲ್ಲಿನ ಆಕ್ರಮ ತಂಬಾಕು, ಗುಟಕ, ನಿಷೇದಿತ ಪ್ಲಾಸ್ಟಿಕ್ ಗಳನ್ನು ವಶಕ್ಕೆ ತೆಗೆದುಕೊಳ್ಳಲಾಯಿತು.
ದೊಡ್ಡ ದೊಡ್ಡ ಜನಪ್ರಿಯ ಹೋಟೆಲ್ ಗಳ ಮೇಲೆ ದಾಳಿ ಮಾಡಿ. ಆಹಾರ ತಯಾರಿಕೆಗೆ ಬಳಸುತ್ತಿದ್ದ ಟೆಸ್ಟಿಂಗ್ ಪೌಡರ್ ವಶಕ್ಕೆ ತೆಗೆದುಕೊಂಡು ಎಚ್ಚರಿಕೆ ನೋಟಿಸ್ ನೀಡಿ ಅಂಗಡಿಯನ್ನು ಸಿಜ್ ಮಾಡಲಾಯಿತು.
ಪರವಾನಗಿ ತೆಗೆದುಕೊಳ್ಳದೆ ನಡೆಸುತ್ತಿದ್ದ ಬಂಗಾರದ ಅಂಗಡಿ, ಬೀಡಾ ಅಂಗಡಿ, ಸೇರಿದಂತೆ ಅನೇಕ ಮಳಿಗೆಗಳಿಗೆ ಭೇಟಿ ಮಾಡಿ ಪರವಾನಿಗೆ ತೆಗೆದುಕೊಂಡು ವ್ಯಾಪಾರ ಪ್ರಾರಂಭಿಸಲು ಆಗ್ರಹಿಸಿದರು.
ಈ ನಡುವೆ ನಗರದ ಪ್ರಖ್ಯಾತ ಸ್ಥಳ ಕೊಳ್ಳಿಯವರ ಕ್ರಾಸ್ ನಲ್ಲಿ ಅಧಿಕಾರಿಗಳ ದಾಳಿಮಾಡುತ್ತಾರೆ ಎಂಬ ಗಾಳಿ ಸುದ್ದಿಗೆ ಬಹುತೇಕ ಎಲ್ಲ ಅಂಗಡಿಗಳು ಬಂದ್ ಮಾಡಲಾಗಿತ್ತು ಅಕ್ಷರ ಸಹ ಕರ್ಪ್ಯೂ ವಾತಾವರಣ ನಿರ್ಮಾಣವಾಗಿತ್ತು.
ಈ ರೀತಿ ಏಕಎಕಿ ದಾಳಿ ಮಾಡುವುದು ಸರಿಯಲ್ಲ. ಮೊದಲು ತಿಳುವಳಿಕೆ ನೋಟೀಸ್ ಆದರೂ ನೀಡಬೇಕಿತ್ತು. ಕಸ ವಿಲೇವಾರಿ ಗಾಡಿಯಲ್ಲಾದರೂ ಒದರಿಸಬೇಕಿತ್ತು. ನಂತರ ಕ್ರಮ ಕೈಗೊಂಡಿದ್ದಾರೆ ಚೆನ್ನಾಗಿರುತ್ತಿತ್ತು ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬಂದವು.
ವರದಿ : ಸುರೇಶ ಬಂಡಾರಿ.