ಸ್ಥಳೀಯ ಸುದ್ದಿಗಳು

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ – ಕಡಾಡಿ.

ಪ್ರತಿದಿನ ಪರಿಸರ ದಿನಾಚರಣೆಯಾಗಬೇಕು - ಮಹಾಂತೇಶ ಹಿಪ್ಪರಗಿ.

Share News

ಮೂಡಲಗಿ :ಸತ್ಯಮಿಥ್ಯ ( ಜೂಲೈ -07).

ತಂತ್ರಜ್ಞಾನ ಬೆಳೆದಷ್ಟು ನಾವು ಪರಿಸರ ಕಡೆ ಗಮನ ಕೊಡುವದನ್ನು ಬಿಟ್ಟಿದ್ದೆವೆ ಆದರೆ ಗಾಳಿ ಹಾಗೂ ಉತ್ತಮ ವಾತಾವರಣ ನಿರ್ಮಾಣ ಆಗಬೇಕಾದರೆ ಮರಗಳ ಬೆಳಸುವದು ಗಿಡಗಳನ್ನು ಸಂರಕ್ಷಿಸುವದು ನಮ್ಮೆಲ್ಲರ ಹೊಣೆ  ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು,

ಭಾನುವಾರ ಪಶು ಪಾಲನಾ ಇಲಾಖೆಯ ಆವರಣದಲ್ಲಿ ಭಾರತೀಯ ಜನತಾ ಪಕ್ಷ ಮೂಡಲಗಿ ನಗರ ಘಟಕದವತಿಯಿಂದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಏಕ ಪೇಡ ಮಾ ಕೆ ನಾಮ್ ತಾಯಿಗಾಗಿ ಒಂದು ಮರ ವನ ಮಹೋತ್ಸವ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿದರು,

ಪರಿಸರದ ಗಾಳಿ,ನೀರು,ಮಣ್ಣು.ಮರಗಳು ಕಾಡುಗಳು,ಸಾಗರಗಳು ಇತ್ಯಾದಿಗಳು ಎಂದೆಂದಿಗೂ ಪರಿಶುದ್ಧವಾಗಿ ಉಳಿಯುವದು ಬಹಳ ಮುಖ್ಯ. ನಾವು ಅವಲಂಬಿತರಾಗಿರುವ ಈ ಪರಿಸರ ಯುಗ ಯುಗಗಳವರೆರೆಗೂ ಹೀಗೆಯೇ ಉಳಿಯಬೇಕಿದೆ ಬೇಸರವೆಂದರೆ ನಾವು ಮಾಡುತ್ತಿರುವ ಅರಣ್ಯನಾಶ ಗಣಿಗಾರಿಕೆ,ಕೈಗಾರಿಕರಣ ಸೇರಿದಂತೆ ಹಲವಾರು ಮಾನವ ಚಟುವಟಿಕೆಗಳಿಂದ ಪರಿಸರವು ಇಂದು ಬಹಳ ಹಾನಿಗೊಳಗಾಗುತ್ತಿದೆ ಎಂದರು,

ಹಿಂದಿನ ಕಾಲದಲ್ಲಿ ಮನೆಯ ಸುತ್ತಮುತ್ತ ವಿವಿದ ಹಣ್ಣಿನ ಗಿಡಗಳನ್ನು ಬೆಳಸುವ ಪದ್ದತಿ ಇತ್ತು. ಅದು ಇಂದು ಮಾಯವಾಗಿದೆ. ಐದು ಮರ ನೆಟ್ಟು ಅದರಲ್ಲಿ ಕನಿಷ್ಟ ಮೂರು ಗಿಡಗಳು ಹೆಮ್ಮರವಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದರು. ಪ್ರತಿವರ್ಷ 143ಕ್ಕೂ ಹೆಚ್ಚು ದೇಶಗಳು ಜೂನ 5 ಪರಿಸರ ದಿನಾಚರಣೆ ದಿನದಲ್ಲಿ ಭಾಗಿಯಾಗುತ್ತವೆ. ಪ್ರತಿ ವರ್ಷ ವಿಶ್ವ ಪರಿಸರ ದಿನವನ್ನು ವಿವಿಧ ಹೆಸರಿನಲ್ಲಿ ಆಚರಿಸಲಾಗುತ್ತದೆ. ಪ್ರಮುಖ ಸಂಸ್ಥೆಗಳು, ಸಂಘಗಳು ಸಮುದಾಯಗಳು, ಉಭಯ ಸರ್ಕಾರಗಳು ವಿಶ್ವಾದ್ಯಂತ ಪರಿಸರ ದಿನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತವೆ ಎಂದರು,

ಅರಣ್ಯ ಇಲಾಖೆಯ ಮೂಡಲಗಿ ಬಿಟ್ ಅಧಿಕಾರಿ ಮಹಾಂತೇಶ ಹಿಪ್ಪರಗಿ ಮಾತನಾಡಿ, ಜೂನ 5 ಪರಿಸರ ದಿನಾಚರಣೆ ಅಲ್ಲಾ. ಪ್ರತಿ ದಿನ ಪರಿಸರ ದಿನಾಚರಣೆಯೇ. ದೈನಂದಿನ ಬದುಕಿನಲ್ಲಿ ಅರಣ್ಯ ಆರೋಗ್ಯ ಶಿಕ್ಷಣ ಈ ಮೂರು ವಿಷಯಗಳ ಬಗ್ಗೆ ನಾವು ಹೆಚ್ಚು ಗಮನಹರಿಸಬೇಕು, ಮರಗಳನ್ನು ಬೆಳಸದಿದ್ದರೆ ಮುಂದೆ ಆಕ್ಸಿಜನ್ ಬಾಟಲ್ ಮಕ್ಕಳ ಕೈ ಕೊಡಬೇಕಾಗುತ್ತದೆ .ರೈತ ತಮ್ಮ ಜಮೀನ ಬದುವಿನಲ್ಲಿ ಸಾಗವಾಣಿ.ತೇಗು.ಕಾಡಬೇವು. ಮರಗಳನ್ನು ಬೆಳೆಸಿದ ರೈತರಿಗೆ ಪ್ರತಿ ವರ್ಷ ಪ್ರೋತ್ಸಾಹ ಧನವನ್ನು ಸರ್ಕಾರ ನೀಡುತ್ತದೆ ಗಾಳಿ.ಜಲ.ಭೂಮಿ ಇವಗಳ ರಕ್ಷಣೆ ಮರಗಳಿಂದ ಮಾತ್ರ ಸಾಧ್ಯ ಎಂದರು,

ಪಶು ಪಾಲನಾ ಸಹಾಯಕ ನಿರ್ಧೇಶಕ ಡಾ ಮೋಹನ ಕಮತ, ಪಾಲಿ ಕೀನಿಕ್ ಸಹಾಯಕ ನಿರ್ಧೇಶಕ ಡಾ ಎಮ್ ಬಿ ವಿಭೂತಿ, ಅರಣ್ಯ ಇಲಾಖೆ ಅಧಿಕಾರಿಗಳು, ಮುಂಖಡರಾದ ಪ್ರಕಾಶ ಮಾದರ, ನಿಂಗಪ್ಪ ಪಿರೋಜಿ, ಶಿವಬಸು ಹಂದಿಗುಂದ, ಮಲ್ಲಪ್ಪ ಮದಗುಣಕಿ, ಡಾ ಬಿ ಎಮ್ ಪಾಲಭಾಂವಿ, ಬಸವರಾಜ ಪಾಟೀಲ್, ಚನ್ನಪ್ಪ ಅಥಣಿ, ಈಶ್ವರ ಮುರಗೋಡ, ಯುವ ಜನ ಸೇವಾ ಸಂಘದ ಅಧ್ಯಕ್ಷ ಈರಪ್ಪ ಡವಳೇಶ್ವರ ಉಪಸ್ಥಿತರಿದ್ದರು,

ವರದಿ : ಶಿವಾನಂದ ಮುಧೋಳ್.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!