ಕಾಲುವೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ ಪ್ರತಿಭಟನೆ
ಸಾವಳಗಿ:ಸತ್ಯಮಿಥ್ಯ (ಜೂಲೈ -11)
ಹಲವು ವರ್ಷಗಳಿಂದ ನೀರು ಬರುತ್ತಿಲ್ಲ, ಸಾವಳಗಿ ತುಂಗಳ ಏತ ನೀರಾವರಿ ಯೋಜನೆಯನ್ನು ಸಾವಳಗಿಯ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಅಥಣಿ ತಾಲೂಕಿನವರು ನೀರು ಬಿಡದೆ ವಂಚಿಸುತ್ತಿದ್ದಾರೆ.
ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದಲ್ಲಿ ಸಾವಳಗಿ ತುಂಗಳ ಏತ ನೀರಾವರಿ ಕಾಲುವೆಗಳಿಗೆ ನೀರು ಹರಿಸುತ್ತಿಲ್ಲ ಎಂದು ಸಾವಳಗಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರೈತರು ಬುಧವಾರ ಸಾವಳಗಿ ನಗರದಲ್ಲಿ ಪ್ರತಿಭಟನೆ ನಡೆಸಿ ಹಿಪ್ಪರಗಿ ನೀರಾವರಿ ಇಲಾಖೆ ಅಧಿಕಾರಿ ಎ ಡಬ್ಲ್ಯೂ ಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.
ರೈತ ಮುಖಂಡ ಬಿ ಎಸ್ ಸಿಂಧೂರ ಮಾತನಾಡಿ ಸಾವಳಗಿ ತುಂಗಳ ಏತ ನೀರಾವರಿ ಯೋಜನೆ ಬರಿ ಅಥಣಿ ತಾಲೂಕಿಗೆ ಮಾತ್ರ ಅನೂಕೂಲವಾಗಿದೆ ನಮ್ಮ ಭಾಗಕ್ಕೆ ಅನುಕೂಲವಾಗಿಲ್ಲಾ, ಇದನ್ನು ನೋಡಿದರೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣವಾಗಿದೆ, ರೈತರಿಗೆ ಅನುಕೂಲವಾಗುಂತೆ ನೋಡಿಕೊಳ್ಳಬೇಕು, ಅಧಿಕಾರಿಗಳು ಹೆಸರಿಗೆ ಮಾತ್ರ ಭರವಸೆ ನೀಡಿ ಹೋಗುತ್ತಾರೆ. ಆದಷ್ಟು ಬೇಗ ನೀರು ಹರಿಸುವಂತೆ ಆಗ್ರಹಿಸಿದರು.
ಸಾವಳಗಿ ತುಂಗಳ ಏತ ನೀರಾವರಿ 1.28 ಟಿಎಂಸಿ ನೀರನ್ನು ಸುಮಾರು 9045 ಹೇಕ್ಟರ ಪ್ರದೇಶ ಜಮೀನುಗಳಿಗೆ ನಿಯಮದ ಪ್ರಕಾರ ಪೂರೈಸಬೇಕು. ಸುಮಾರು ಹದಿನೈದು ವರ್ಷಗಳಿಂದ ಈ ಸಾವಳಗಿ ತುಂಗಳ ಕುರುಗೊಡು ಕನ್ನೋಳ್ಳಿ, ಗದ್ಯಾಳ, ಜಮೀನುಗಳಿಗೆ ಸರಿಯಾದ ಸಮಯಕ್ಕೆ ನೀರು ಒದಗಿಸಿದೆ ಇಲಾಖೆಯು ರೈತರಿಗೆ ಅನ್ಯಾಯ ಮಾಡುತ್ತಾ ಬಂದಿದೆ. ಹಲ್ಯಾಳ ಪೂರ್ವ ಮುಖ್ಯ ಕಾಲುವೆ ಮೂಲಕ 40 ಕಿ ಮೀ ಅಚ್ಚು ಕಟ್ಟು ಐದು ಹಳ್ಳಿಗಳಿಗೆ ನೀರು ದೊರೆಯುತ್ತಿಲ್ಲ, ಮುಖ್ಯ ಓಪನ್ ಕಾಲುವೆಗೆ ಬರಬೇಕಾದ ನೀರನ್ನು ತಡೆದು ನಮ್ಮ ಭಾಗದ ರೈತರಿಗೆ ರೈತರಿಗೆ ನೀರು ಇಲ್ಲದಂತೆ ಮಾಡಿದ್ದಾರೆ. ಹೊಸ ಯೋಜನೆಯಾದ ಸಾವಳಗಿ ಶಿವಲಿಂಗೇಶ್ವರ ಏತ ನೀರಾವರಿ ಯೋಜನೆಯನ್ನು ಮಂಜೂರು ಮಾಡಿದರೆ ಮಾತ್ರ ಈ ಭಾಗದ 5 ಹಳ್ಳಿಗಳಿಗೆ ನೀರನ್ನು ಸಮರ್ಪಕವಾಗಿ ಜಮೀನುಗಳಿಗೆ ಹರಿಸಲು ಸಾಧ್ಯವಿದೆ ಎಂದು ರೈತರು ಬೇಡಿಕೆ ಇಟ್ಟರು.
ಇದೇ ಸಂದರ್ಭದಲ್ಲಿ ತುಂಗಳ ಸಾವಳಗಿ ಏತ ನೀರಾವರಿ ಹೋರಾಟ ಸಮಿತಿಯ ಮುಖಂಡರು, ಹಾಗೂ ವಿವಿಧ ಗ್ರಾಮದ ರೈತರು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ವರದಿ :ಸಚಿನ್ ಜಾದವ್.
ಈ ಯೋಜನೆ 2021 ರಿಂದ ಪ್ರಾರಂಭವಾಗಿ 12 ವರ್ಷ ಕಳೆದರೂ ನಮ್ಮ ಭಾಗದ ರೈತರಿಗೆ ಅನುಕೂಲಕ್ಕಿಂತ ಅನಾನುಕೂಲ ಹೆಚ್ಚು ಆಗಿದ್ದು ಯಾವ ವರ್ಷವೂ ಈ ಕಾಲುವೆಗೆ ನೀರು ಹರಿಸಿಲ್ಲ, ನಾವು ಈ ಹಳ್ಳಿಗೆ ಬರತಕ್ಕಂತಹ ನೀರಿನ ಪಾಲನ್ನು ಒದಗಿಸಿ ಕೊಡಬೇಕು.
– ಪ್ರವೀಣ್ ಮೇಲಿನಕೇರಿ ದಲಿತ ಸಂಘರ್ಷ ಸಮಿತಿ ಮುಖಂಡ ಸಾವಳಗಿ.