ಶ್ರೀ ಯಲ್ಲಾಲಿಂಗ ಮಹಾರಾಜರು ವಿಶ್ವವನ್ನು ಸುಭಿಕ್ಷವಾಗಿಡಲಿ: ಡಾ ಮುರುಘರಾಜೇಂದ್ರ ಸ್ವಾಮೀಜಿ.
ಶ್ರೀ ಯಲ್ಲಾಲಿಂಗ ಮಹಾರಾಜರು ಮುಗಳಖೋಡ ಪಟ್ಟಣದ ಮುಕುಟಮಣಿ ಮಣಿ ಇದ್ದಂತೆ.

ಶ್ರೀ ಯಲ್ಲಾಲಿಂಗ ಮಹಾರಾಜರು ವಿಶ್ವವನ್ನು ಸುಭಿಕ್ಷವಾಗಿಡಲಿ: ಡಾ ಮುರುಘರಾಜೇಂದ್ರ ಸ್ವಾಮೀಜಿ.
ಮುಗಳಖೋಡ :ಸತ್ಯಮಿಥ್ಯ (ಜುಲೈ -13)
ಶ್ರೀ ಯಲ್ಲಾಲಿಂಗ ಮಹಾರಾಜರು ಮುಗಳಖೋಡ ಪಟ್ಟಣದ ಮುಕುಟಮಣಿ ಮಣಿ ಇದ್ದಂತೆ. ಅಂಥಹ ಮಹಾತ್ಮರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಾವುಗಳೇ ಪುಣ್ಯವಂತರು ಎಂದು ಮುಗಳಖೋಡ – ಜಿಡಗಾ ಮಠದ ಪೀಠಾಧಿಪತಿ ಡಾ. ಮುರುಘರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಬ್ರಹನ್ಮಠದಲ್ಲಿ ನಡೆದ ಲಿಂಗೈಕ್ಯ ಶ್ರೀ ಯಲ್ಲಾಲಿಂಗ ಮಹಾರಾಜರ 139ನೇ ಜಯಂತೋತ್ಸವ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು ಪ್ರಸಕ್ತ ವರ್ಷದಿಂದ ನವಕಲ್ಯಾಣ ಜಿಡಗಾಮಠದಲ್ಲಿ ಮುಗಳಖೋಡ ಗುರು ಪರಂಪರೆಯು ನೊಂದವರ ನೆರವಿಗಾಗಿ ಬಡಮಕ್ಕಳಿಗೆ ವಸತಿ ಸಮೇತ ಉಚಿತ ಶಿಕ್ಷಣ ನೀಡುತ್ತಿದೆ. ಇಂತಹ ಮಹತ್ತರವಾದ ಕಾರ್ಯಕ್ಕೆ ಉದಾರ ಮನಸ್ಸಿನ ಭಕ್ತರು ಮಕ್ಕಳ ಶಿಕ್ಷಣಕ್ಕೆ ಹಾಗೂ ಪ್ರಸಾದ ವ್ಯವಸ್ಥೆಗೆ ಅನುಕೂಲವಾಗುವಂತೆ ಕಾಣಿಕೆಗಳನ್ನು ಸಮರ್ಪಿಸಬಹುದಾಗಿದೆ. ಒಂದು ಹಿಡಿ ಅಕ್ಕಿಯಿಂದ ಒಂದು ಹಸಿದ ಒಡಲು ತುಂಬಿದರೆ, ಅದಕ್ಕಿಂತ ಹೆಚ್ಚಿನ ಪುಣ್ಯ ಕಾರ್ಯ ಮತ್ತೊಂದು ಇಲ್ಲ ಎಂದರು.
ಶ್ರೀ ಯಲ್ಲಾಲಿಂಗ ಮಹಾರಾಜರ ಭಾವಚಿತ್ರಕ್ಕೆ ಪುಷ್ಪವೃಷ್ಟಿ ಮಾಡಿದ ಶ್ರೀಗಳು ಸಹಸ್ರ ಜನ ಭಕ್ತರ ಸಮ್ಮುಖದಲ್ಲಿ
ಕೇಕ್ ಕತ್ತರಿಸುವ ಮೂಲಕ ಶ್ರೀ ಯಲ್ಲಾಲಿಂಗ ಮಹಾರಾಜರ 139ನೇ ಜಯಂತೋತ್ಸವವನ್ನು ಅತಿ ವಿಜ್ರಂಭಣೆಯಿಂದ ಆಚರಣೆ ಮಾಡಿದರು. ಜನಪದ ಕಲಾವಿದ ಶ್ರೀಕಾಂತ ಕೆಂಧೊಳಿಯವರಿಂದ ಭಕ್ತಿಯ ಗಾಯನ ನಡೆಯಿತು. ಕಾರ್ಯಕ್ರಮದ ನಿರೂಪಣೆಯನ್ನು ನ್ಯಾಯವಾದಿ ಸೋಮು ಹೊರಟ್ಟಿ ನೆರವೇರಿಸಿದರು.
ಈ ಸಂದರ್ಭದಲ್ಲಿ ಎಂ ಎಸ್ ಗೋಕಾಕ, ಅನ್ನಪಗೌಡ ಪಾಟೀಲ, ರಾಯಗೌಡ ಖೇತಗೌಡರ, ಸಿದ್ದರಾಮ ಎರಡತ್ತಿ, ಗುರು ಮಠಪತಿ, ಬಸವರಾಜ್ ಜೋಪಾಟೆ, ಬಸವರಾಜ್ ಬಿರಾದರ, ಡಾ. ಎಂ ಎಸ್ ಕೊಪ್ಪದ, ಸಂಜಯ ಬಿರಾದರ, ಮಹಾಂತೇಶ ಯರಡತ್ತಿ, ಹಾಲಪ್ಪ ಶೇಗುಣಸಿ, ಪರಗೌಡ ಖೇತಗೌಡರ, ಮಂಗಲ ಪಣದಿ ಹಾಗೂ ಶ್ರೀಮಠದ ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ವರದಿ :ಸಂತೋಷ ಮುಗಳಿ.