ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯ – ವಿವೇಕಾನಂದಗೌಡ ಪಾಟೀಲ್.
ಗಜೇಂದ್ರಗಡದಲ್ಲಿ ಮುಂದಿನ ತಿಂಗಳು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.

ಗಜೇಂದ್ರಗಡ : ಸತ್ಯಮಿಥ್ಯ ( ಜುಲೈ -14).
ಆರೋಗ್ಯಕರ ಸಮಾಜ ನಿರ್ಮಾಣ ಮಾಡುವಲ್ಲಿ ಪತ್ರಿಕೆಗಳ ಪಾತ್ರ ಬಹುಮುಖ್ಯವಾಗಿದೆ. ಪ್ರಸ್ತುತ ಸಂದರ್ಭದಲ್ಲಿ ಮುದ್ರಣ ಮಾಧ್ಯಮದ ಜಾಗವನ್ನು ಡಿಜಿಟಲ್ ಮಾಧ್ಯಮಗಳು ಭರ್ತಿ ಮಾಡುತ್ತಿವೆ. ಮಾಧ್ಯಮಗಳು ತಮ್ಮ ವೃತ್ತಿ ಧರ್ಮ ಪಾಲನೆ ಮಾಡುವುದರಿಂದ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಗದಗ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್ ಹೇಳಿದರು.
ಅವರು ಶನಿವಾರ ಸಂಜೆ ನಗರದ ಗವಿಸಿದ್ದೇಶ್ವರಮಠದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಗಜೇಂದ್ರಗಡ ತಾಲೂಕಾ ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆಯನ್ನು ಉದ್ದೇಶಿಸಿ ಮಾತನಾಡಿದರು. ಮುಂದಿನ ತಿಂಗಳು ಗಜೇಂದ್ರಗಡ ನಗರದಲ್ಲಿಯೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಲು ತಯಾರಿಮಾಡಿಕೊಳ್ಳಲಾಗುತ್ತಿದೆ ದಿನಾಂಕ ಘೋಷಣೆ ಬಾಕಿ ಇದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಪ್ರೋ. ಬಿ. ಎ. ಕೆಂಚರಡ್ಡಿ. ಸ್ವಾತಂತ್ರ ಚಳುವಳಿಯಲ್ಲಿ ಪತ್ರಿಕೆಗಳ ಪಾತ್ರ ದೊಡ್ಡದು. ಕನ್ನಡ ಪತ್ರಿಕೋದ್ಯಮ, ಪತ್ರಿಕೆಗಳು ಕುರಿತು ಚರ್ಚೆ, ಅವಲೋಕನ ನಡೆಯುತ್ತವೆ. ಪತ್ರಿಕೋದ್ಯಮದ ಪರಿಚಯ ಜನಸಾಮಾನ್ಯರಿಗೆ ಆಗಬೇಕು ಎಂಬ ಉದ್ದೇಶದಿಂದ ಪತ್ರಿಕಾ ದಿನ ಆಚರಿಸಲಾಗುತ್ತದೆ.
ಇಂದು ಪತ್ರಿಕೋದ್ಯಮವೆಂಬುದು ಕಾಲದ ಸ್ಥಿತ್ಯಂತರದಲ್ಲಿ ಹಲವು ಬದಲಾವಣೆ ಕಂಡಿದೆ. ಪತ್ರಿಕೋದ್ಯಮದ ರೀತಿ, ಸ್ವರೂಪ ಬದಲಾಗಿದೆ. ಮುದ್ರಣ ಮಾಧ್ಯಮ ಜಗತ್ತಿನ ಎಲ್ಲ ದೇಶಗಳನ್ನು ಹತ್ತಿರಕ್ಕೆ ತಂದಿದೆ ಹಾಗೂ ಪರಿಚಯಿಸಿಕೊಟ್ಟಿದೆ. ನಿಯತಕಾಲಿಕೆಗಳು, ದಿನಪತ್ರಿಕೆಗಳು ಜ್ಞಾನದ ಪ್ರಸರಣ ಆರಂಭಿಸಿದವು.
ಇದೆ ಸಂದರ್ಭದಲ್ಲಿ ನಗರದ ಹಿರಿಯ ಪತ್ರಕರ್ತರಿಗೆ ಸನ್ಮಾನ ಮಾಡಲಾಯಿತು.
ಬಂಡಾಯ ಸಾಹಿತಿ ಡಾ. ಅರ್ಜುನ ಗೊಳಸಂಗಿ, ಸುರೇಶ ಪತ್ತಾರ, ಆರ್. ಜಿ. ಮ್ಯಾಕಲ್ ಮಾತನಾಡಿದರು. ಪತ್ರಕರ್ತರಾದ ರಾಘವೇಂದ್ರ ಕುಲಕರ್ಣಿ, ಡಿ.ಜಿ. ಮೊಮಿನ್, ಪುಂಡಲೀಕ ಕಲ್ಲಿಗನೂರ, ಶ್ರೀಶೈಲ ಕುಂಬಾರ, ಶಿವು ಕುಮಾರ ಶೆಶಿಮಠ, ಎಸ್.ಎಮ್. ಒಲೇಕಾರ, ಆಕಾಶ ತಾಳಿಕೊಟಿ, ಕಸಾಪ ಅಧ್ಯಕ್ಷ ಅಮರೇಶ ಗಾಣಗೇರ ಅಧ್ಯಕ್ಷತೆ ವಹಿಸಿದ್ದರು.ಬಸವರಾಜ ಕೊಠಗಿ,ಬಿ.ಟಿ. ಹೊಸಮನಿ, ಅನ್ನದಾನಿ ಹಿರೇಮಠ, ಮಹಾಂತೇಶ ಅಂಗಡಿ,ಶಿವಾನಂದ ಗಿಡ್ಡನಂದಿ, ಡಾ. ಜಿ.ಬಿ. ಪಾಟೀಲ, ಬಿ.ಎಸ್. ಬಾಪೂರೆ, ಎಸ್. ಎಸ್. ನರೇಗಲ್ಲ, ಎ. ಎಸ್. ಕವಡಿಮಟ್ಟಿ, ರಾಟೋಡ, ಎಸ್ ಎಸ್ ಡೊಳ್ಳಿನ ,ಬಸವರಾಜ ಮುನವಳ್ಳಿ, ನಾಗರಾಜ ಬುಟ್ಟಾ, ರಾಜೂ ಅಂಗಡಿ ಇನ್ನಿತರು ಉಪಸ್ಥತರಿದ್ದರು.
ವರದಿ :ಸುರೇಶ ಬಂಡಾರಿ.