ರಾಜ್ಯ ಸುದ್ದಿ
ಮೊಹರಂ ಸಂದರ್ಭ : ದರ್ಶನ ಪೋಟೋ ಹಿಡಿದು ಹೆಜ್ಜೆ ಹಾಕಿದ ಅಭಿಮಾನಿಗಳು.
ದರ್ಶನ್ ಬಿಡುಗಡೆಗೆ ಅಲೈ ದೇವರ ಮೊರೆಹೋದ ಅಭಿಮಾನಿಗಳು.

ಮೊಹರಂ ಸಂದರ್ಭ : ದರ್ಶನ ಪೋಟೋ ಹಿಡಿದು ಹೆಜ್ಜೆ ಹಾಕಿದ ಅಭಿಮಾನಿಗಳು.
ಯಾದಗಿರಿ: ಸತ್ಯಮಿಥ್ಯ ( ಜುಲೈ -15).
ತಾಲೂಕಿನ ಅರಿಕೇರಾ ಗ್ರಾಮದಲ್ಲಿ ಮೊಹರಂ ಹಬ್ಬವು ಹಿಂದೂ-ಮುಸ್ಲಿಂರು ಭಾವೈಕ್ಯತೆಯಿಂದ ಯಾವುದೇ ತಾರತಮ್ಯವಿಲ್ಲದೇ, ಸರ್ವಧರ್ಮೀಯರು ಪಾಲ್ಗೊಂಡು ಹಬ್ಬವನ್ನು ಆಚರಿಸುತ್ತಾರೆ.
ಈ ವೇಳೆ ದರ್ಶನ್ ಪೋಟೋ ಹಿಡಿದು ಕುಣಿದು ಕುಪ್ಪಳಿಸಿ ಅಭಿಮಾನಿಗಳು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ ತೂಗುದೀಪ ಇತ್ತೀಚಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಇದರಿಂದ ಹೊರಬರುವಂತಾಗಲಿ ಎಂದು ಅಲೈ ದೇವರಿಗೆ ಮೊರೆಹೋಗಿದ್ದಾರೆ.
ವರದಿ : ಶಿವು ರಾಠೋಡ.