ಹೆಂಡತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಡುರಸ್ತೆಯಲ್ಲೇ ಗಂಡನ ಮೇಲೆಯೇ ಮಾರಣಾಂತಿಕ ಹಲ್ಲೆ.

ಹೆಂಡತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ನಡುರಸ್ತೆಯಲ್ಲೇ ಗಂಡನ ಮೇಲೆಯೇ ಮಾರಣಾಂತಿಕ ಹಲ್ಲೆಯಾದ ಘಟನೆ.
ಗದಗ :ಸತ್ಯಮಿಥ್ಯ ( ಜುಲೈ – 15)
ಹೆಂಡತಿಗೆ ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ದುರುಳ ನಡುರಸ್ತೆಯಲ್ಲೇ ಗಂಡನ ಮೇಲೆಯೇ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹಾರೋಗೇರಿಯಲ್ಲಿ ನಡೆದಿದೆ.
ಬಸವರಾಜ, ರವಿ, ಕೋಟೆಪ್ಪ ಹಾಗೂ ಮುತ್ತಪ್ಪ ಎನ್ನುವವರಿಂದ ದೇವರಾಜ, ಭಾಗವ್ವ, ಚಂದ್ರವ್ವ, ಹಾಗೂ ದಾನಪ್ಪ ಎಂಬುವವರ ಮೇಲೆ ಹಲ್ಲೆಯಾಗಿದೆ.
ದೇವರಾಜ ಪತ್ನಿಗೆ ಚುಡಾಯಿಸಿದ್ದ ಕೊಟ್ರೆಪ್ಪ. ಹೆಂಡತಿಗೆ ಚುಡಾಯಿಸಿದ್ದಕ್ಕೆ ಪ್ರಶ್ನಿಸಿದ್ದ ಗಂಡ ದೇವರಾಜ್.
ಮಾಡಿದ ತಪ್ಪಿಗೆ ತೆಪ್ಪಗೆ ಇರುವ ಬದಲು ಕೊಟ್ರೇಪ್ಪ ಮಾರಕಾಸ್ತ್ರಗಳನ್ನ ಹಿಡಿದು ನಡುರಸ್ತೆಯಲ್ಲೇ ದೇವರಾಜ ಕುಟುಂಬಸ್ಥರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎನ್ನಲಾಗುತ್ತಿದೆ.
ಕುಟುಂಬದ ಆರು ಜನರು ಏಕಾಏಕಿ ನಡೆದ ದಾಳಿಗೆ ತೀವ್ರ ಗಾಯಗೊಂಡು ರಸ್ತೆ ಮೇಲೆ ಬಿದ್ದು ಹೊರಳಾಡಿದ್ದಾರೆ. ಸದ್ಯ ಗಾಯಾಳುಗಳನ್ನ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಕರಣ ಸಂಬಂಧ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ :ಮುತ್ತು.