ರಾಜ್ಯ ಸುದ್ದಿ

ಕ.ಜ್ಞಾ.ವಿ.ಸಮಿತಿ – ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ 25,000ರೂ ಬಹುಮಾನ ಪಡೆಯಿರಿ.

Share News

ಕ.ಜ್ಞಾ.ವಿ.ಸಮಿತಿ – ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ 25,000ರೂ ಬಹುಮಾನ ಪಡೆಯಿರಿ.

ಬೆಂಗಳೂರು – ಸತ್ಯಮಿಥ್ಯ ( ಜುಲೈ -18).

ವಿದ್ಯಾರ್ಥಿಗಳಲ್ಲಿ ಸ್ವಾತಂತ್ರ್ಯ ಚಳುವಳಿ, ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಗೌರವ, ಪ್ರೀತಿ ಮೂಡಿಸುವುದು, ಸಾಮಾಜಿಕ ಕಳಕಳಿ, ಸೌಹಾರ್ದ ಮನೋಭಾವ ಬೆಳೆಸುವುದು, ಸ್ಪರ್ಧೆಯಲ್ಲಿ ಭಾಗವಹಿಸುವ ಮನೋಭಾವ ಮೂಡಿಸುವ ಉದ್ದೇಶದಿಂದ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಆನ್‌ಲೈನ್ ಸ್ಪರ್ಧೆಯ ಪರಿಚಯ ಮಾಡುವ ಉದ್ದೇಶದಿಂದ ಪ್ರೌಢಶಾಲಾ ವಿದ್ಯಾರ್ಥಿಗಳಗಾಗಿ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿದ ಆನ್ ಲೈನ್ ರಸಪ್ರಶ್ನೆ ಸ್ಪರ್ಧೆಯನ್ನು ಏರ್ಪಡಿಸಿದೆ.

8, 9 ಮತ್ತು 10ನೇ ತರಗತಿಯ ಸರ್ಕಾರಿ, ಅನುದಾನಿತ, ಖಾಸಗಿ, ಕನ್ನಡ, ಇಂಗ್ಲೀಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರೌಢಶಾಲಾ ವಿದ್ಯಾರ್ಥಿಗಳು ತಮ್ಮ ಹೆಸರು, ತರಗತಿ, ಶಾಲೆ, ಮೊಬೈಲ್ ನಂಬರ್(ವಾಟ್ಸಾಪ್) ಹಾಗೂ 40ರೂ ಪ್ರವೇಶ ಶುಲ್ಕವನ್ನು ತಮ್ಮ ಶಾಲಾ ಶಿಕ್ಷಕರು ಅಥವಾ ಕೆಜೆವಿಎಸ್ ತಾಲ್ಲೂಕು ಸಂಯೋಜಕರು ಅಥವಾ ಜಿಲ್ಲಾ ಸಂಯೋಜಕರಲ್ಲಿ ಪಾವತಿಸಿ 25.07.2024  ಗುರುವಾರದೊಳಗೆ ನೊಂದಾಯಿಸಿಕೊಳ್ಳಬವುದು .

ಜಿಲ್ಲೆ/ ತಾಲ್ಲೂಕು/ ಶಾಲಾಸಂಯೋಜಕರು ತಮ್ಮ ಬಳಿ ನೊಂದಾಯಿಸಿಕೊಂಡ ವಿದ್ಯಾರ್ಥಿಗಳ ವಾಟ್ಸಾಪ್ ಗುಂಪು ರಚಿಸಿಕೊಂಡು ಮಾಹಿತಿ ಒದಗಿಸುವರು.

ಪರೀಕ್ಷೆ ಹಾಗೂ ಆಯ್ಕೆ: ನೊಂದಾಯಿಸಿಕೊಂಡ ವಿದ್ಯಾರ್ಥಿಗಳಿಗೆ ಜುಲೈ 26ರ ಶುಕ್ರವಾರ ಹಾಗೂ 27ರ ಶನಿವಾರ ಸಂಜೆ 7 ಗಂಟೆಗೆ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು. ಜುಲೈ 28ರ ಭಾನುವಾರ ಬೆಳಗ್ಗೆ 11 ರಿಂದ 11.30ರ ವರೆಗೆ ಮೊದಲ ಹಂತದ ಪರೀಕ್ಷೆ ನಡೆಸಿ ಪ್ರತಿ ಜಿಲ್ಲೆಗೆ ಮೂರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಆ ವಿದ್ಯಾರ್ಥಿಗಳ ಪ್ರತ್ಯೇಕ ವಾಟ್ಸಾಪ್ ಗುಂಪು ಮಾಡಿಕೊಂಡು ಆಗಸ್ಟ್ 4ರ ಭಾನುವಾರ ಬೆಳಗ್ಗೆ 11 ರಿಂದ 11.30ರ ವರೆಗೆ ಎರಡನೇ ಹಂತದ ಪರೀಕ್ಷೆ ನಡೆಸಿ ರಾಜ್ಯಮಟ್ಟದ ಗಂಟೆಗೆ, ಅದೇ ದಿನ ಫಲಿತಾಂಶ ಪ್ರಕಟಿಸಲಾಗುವುದು.

ಪ್ರಶ್ನೆಗಳು ಹಾಗೂ ಮೌಲ್ಯಮಾಪನ: ಒಟ್ಟು 50 ಬಹುಆಯ್ಕೆಯ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು 8, 9 ಮತ್ತು 10ನೇತರಗತಿಯ ಇತಿಹಾಸ ಪಠ್ಯ ಹಾಗೂ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿರುತ್ತವೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲೂ ಪ್ರಶ್ನೆ ಮತ್ತು ಬಹುಆಯ್ಕೆಯ ಉತ್ತರಗಳಿರುತ್ತವೆ. ಯಾವ ಭಾಷೆಯಲ್ಲಾದರು ಉತ್ತರ ಕೊಡಬಹುದು.

ಪ್ರಶ್ನೆಗಳು ಹಾಗೂ ಮೌಲ್ಯಮಾಪನ: ಒಟ್ಟು 50 ಬಹುಆಯ್ಕೆಯ ಪ್ರಶ್ನೆಗಳಿರುತ್ತವೆ. ಪ್ರಶ್ನೆಗಳು 8, 9 ಮತ್ತು 10ನೇ ತರಗತಿಯ ಇತಿಹಾಸ ಪಠ್ಯ ಹಾಗೂ ಸ್ವಾತಂತ್ರ್ಯ ಚಳುವಳಿಗೆ ಸಂಬಂಧಿಸಿರುತ್ತವೆ. ಕನ್ನಡ ಹಾಗೂ ಇಂಗ್ಲೀಷ್ ಎರಡು ಭಾಷೆಗಳಲ್ಲೂ ಪ್ರಶ್ನೆ ಮತ್ತು ಬಹುಆಯ್ಕೆಯ ಉತ್ತರಗಳಿರುತ್ತವೆ. ಯಾವ ಭಾಷೆಯಲ್ಲಾದರೂ ಉತ್ತರಿಸಬಹುದು. ಸ್ಪರ್ಧೆ ಆನ್‌ಲೈನ್‌ನಲ್ಲಿ ನಡೆಯಲಿದ್ದು ನೊಂದಾಯಿಸಿಕೊಂಡ ಎಲ್ಲರಿಗೂ ಗೂಗಲ್‌ಲಿಂಕ್ ಮೂಲಕ ಪ್ರಶ್ನೆಗಳನ್ನು ಕಳುಹಿಸಲಾಗುವುದು. ವಿದ್ಯಾರ್ಥಿಗಳು ಉತ್ತರಿಸಿ ಸಬ್ಸಿಟ್(Submit)ಮಾಡಿದ ನಂತರ ಅವರವರ ಅಂಕಗಳು ಅವರಿಗೆ ತಿಳಿಯಲಿದೆ. ಉತ್ತರಿಸಬೇಕಾದ ಅವಧಿ 30ನಿಮಿಷಗಳಾದರೂ ಕಡಿಮೆ ಸಮಯದಲ್ಲಿ ಹೆಚ್ಚು ಪ್ರಶ್ನೆಗಳಿಗೆ ಅಥವಾ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದವರು ಬಹುಮಾನಕ್ಕೆ ಆಯ್ಕೆಯಾಗುತ್ತಾರೆ.

ಬಹುಮಾನ:

ರಾಜ್ಯಮಟ್ಟದ ಬಹುಮಾನ: ಪ್ರಥಮ ಬಹುಮಾನ ರೂ.25,000. ದ್ವಿತೀಯ ಬಹುಮಾನ ರೂ.15,000 ತೃತೀಯ ರಊ.10,000 ಹಾಗೂ ಹತ್ತು ಸಮಾಧಾನಕರ ಬಹುಮಾನ ರೂ.1000 ಜೊತೆಗೆ ಸ್ಮರಣಿಕೆ ಹಾಗೂ ಪ್ರಶಸ್ತಿಪತ್ರ

• ಜಿಲ್ಲೆ, ತಾಲ್ಲೂಕು ಹಂತದಲ್ಲಿ: ಈ ಬಗ್ಗೆ ಆಯಾ ಜಿಲ್ಲೆ ಹಾಗೂ ತಾಲ್ಲೂಕು ಸಮಿತಿಯವರು ನಿರ್ಧರಿಸುವರು.

• ಅಭಿನಂದನಾಪತ್ರ: ಸ್ಪರ್ಧೆಗೆ ನೊಂದಾಯಿಸಿಕೊಂಡ ಎಲ್ಲ ವಿದ್ಯಾರ್ಥಿಗಳಿಗೆ, ಜಿಲ್ಲೆ, ತಾಲ್ಲೂಕು ಮತ್ತು ಶಾಲಾ ಸಂಯೋಜಕರಿಗೆ ಬಹುವರ್ಣದ ಮುದ್ರಿತ ಪ್ರಮಾಣ ಪತ್ರ ನೀಡಲಾಗುವುದು.

• ಬಹುಮಾನ ವಿತರಣೆ : ಶಾಲಾ ಹಂತದಲ್ಲಿ ಆಗಸ್ಟ್ 15ರಂದು ಶಾಲೆಯಲ್ಲಿ ನಡೆಯುವ ಸ್ವಾತಂತ್ರ್ಯ ದಿನೋತ್ಸವದಲ್ಲಿ ಪ್ರಶಸ್ತಿಪತ್ರ ವಿತರಿಸಲಾಗುವುದು. ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದ ಬಹುಮಾನ ವಿತರಣೆ ದಿನಾಂಕವನ್ನು ಆಯಾ ಸಮಿತಿಯವರು ನಿರ್ಧರಿಸಿ ವಿಜೇತ ವಿದ್ಯಾರ್ಥಿಗಳಿಗೆ ತಿಳಿಸುವರು

 

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:

ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ನಂ.435, 6ನೇ ‘ಸಿ’ ಮುಖ್ಯರಸ್ತೆ, 1ನೇ ಹಂತ, 2ನೇ ಘಟ್ಟ, ಮಂಜುನಾಥನಗರ, ಬೆಂಗಳೂರು-560010

: 080-35835292 : 9448957666 : kjvs2012@gmail.com


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!