ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವದು ಪ್ರತಿ ನಾಗರೀಕನ ಕರ್ತವ್ಯ – ಮುಕ್ತುಮಸಾಬ್ ಮುಧೋಳ್ (ಸಾಗರ )
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವದು ಪ್ರತಿ ನಾಗರೀಕನ ಕರ್ತವ್ಯ – ಮುಕ್ತುಮಸಾಬ್ ಮುಧೋಳ್ (ಸಾಗರ )
ಗದಗ : ಸತ್ಯಮಿಥ್ಯ ( ಜುಲೈ -20).
ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವದು ಪ್ರತಿ ನಾಗರೀಕನ ಕರ್ತವ್ಯ. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತವಾಗಬೇಕು ಎಂದು ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮುಕ್ತುಮಸಾಬ್ ಮುಧೋಳ್ (ಸಾಗರ ) ನುಡಿದರು.
ಅವರು ಇಂದು ಗದಗ ನಗರದ ನೂರು ವರ್ಷದ ಇತಿಹಾಸ ಹೊಂದಿರುವ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆ ನಂಬರ್ ೦೨ ರಲ್ಲಿ ಮಕ್ಕಳಿಗೆ ಟೈ ಮತ್ತು ಬೆಲ್ಟ್ ಗಳನ್ನು ವಿತರಿಸಿ ಮಾತನಾಡುತ್ತ. ಸರ್ಕಾರಿ ಶಾಲೆಯ ಮಕ್ಕಳು ಸೌಲಭ್ಯ ದಿಂದ ವಂಚಿತರಗಬಾರದು ಎಂಬ ಉದ್ದೇಶದಿಂದ ನನ್ನ ಆಶೆಯಂತೆ ನನ್ನ ಅಳಿಲು ಸೇವೆಯನ್ನು ಈ ವಿದ್ಯಾರ್ಥಿಗಳಿಗೆ ನೀಡಿದ್ದೇನೆ ಮತ್ತು ಮುಂಬರುವ ದಿನಗಳಲ್ಲಿ ಉತ್ತಮ ಫಲಿತಾಂಶ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಉದ್ದೇಶ ಹೊಂದಿದ್ದೇನೆ ಎಂದರು.
ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ದಲಬಂಜನ ಮೇಡಂ ರವರ ನೇತೃತ್ವದಲ್ಲಿ ಎಲ್ಲಾ ಮಕ್ಕಳಿಗೆ ವಿತರಣೆ ಮಾಡಲಾಯಿತು . ಇದೆ ಸಂದರ್ಭದಲ್ಲಿ ಮುದೋಳರವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖಂಡರಾದ ಈರಣ್ಣ ಬಾಳಿಕಾಯಿ, ಹಾಜಿಅಲಿ ಎಚ್ ಕೊಪ್ಪಳ, ತಿಪ್ಪಣ್ಣ ಹುಡ್ಡೆದ. ಬಾದಷಹ ಭಗವಾನ, ರವಿ ಮೋಹಿತೆ, ಶಾಲೆಯ ಎಲ್ಲಾ ಗುರುಗಳು ಗುರುಮಾತೆಯರು ಹಾಗೂ ಶಾಲೆಯ ಎಲ್ಲಾ ಮಕ್ಕಳು ಉಪಸ್ಥಿತರಿದ್ದರು.
ವರದಿ : ವಿರೂಪಾಕ್ಷ.