
ಪಿಂಜಾರ /ನದಾಫ್ ಹಾಗೂ ಇತರ ಹದಿಮೂರು ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ಬರದಿದ್ದಲ್ಲಿ ಮುಂದಿನ ದಿನಮಾನಗಳಲ್ಲಿ ಬಹಿರಂಗವಾಗಿ ಪ್ರತಿಭಟನೆ ,ಧರಣಿ ಮಾಡಲಾಗುವುದು:- ಮಹ್ಮದ ಸಿರಾಜುದ್ದೀನ
ಕುಕನೂರ: ಸತ್ಯಮಿಥ್ಯ ( ಜುಲೈ -22)
ಪಿಂಜಾರ /ನದಾಫ್ ಹಾಗೂ ಇತರ ಹದಿಮೂರು ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡುವ ಕುರಿತು ಕುಕನೂರು ಪಟ್ಟಣದ ತಹಸೀಲ್ದಾರರಿಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಕಳುಹಿಸಲಾಯಿತು .
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಪಿಂಜಾರ / ನದಾಫ ಸಮುದಾಯದ ರಾಜ್ಯ ಸದಸ್ಯ ಎ.ಪಿ. ಮುಧೋಳ.ನಮ್ಮ ಪಿಂಜಾರ / ನದಾಫ ಹಾಗೂ ಇನ್ನೂ ಇತರ ಹದಿಮೂರು ಜಾತಿಗಳ ಅಭಿವೃದ್ಧಿ ನಿಗಮಕ್ಕೆ ಯಾವುದೇ ರೀತಿಯ ಅನುದಾನ ನೀಡಿರುವುದಿಲ್ಲ.ಆಡಳಿತದಲ್ಲಿ ಯಾವುದೇ ರಾಜಕೀಯ ಪಕ್ಷಗಳು ಇದ್ದರೂ ಸಹಿತ ನಿಗಮಕ್ಕೆ ಅನುದಾನ ನೀಡುತ್ತಿಲ್ಲ.ನಮ್ಮ ಸಮಾಜ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ , ರಾಜಕೀಯ ಹಾಗೂ ಹಲವಾರು ರಂಗಗಳಲ್ಲಿ ಅತ್ಯಂತ ಹಿಂದುಳಿದಿದೆ. ಬಹುತೇಕ ಕುಟುಂಬಗಳು ಬಡತನದಲ್ಲಿವೆ.ಆದಷ್ಟು ಬೇಗನೆ ಮುಖ್ಯಮಂತ್ರಿಗಳು ನಮಗೆ ಅನುದಾನವನ್ನು ಕೊಡಬೇಕೆಂದು ಮಾತನಾಡಿದರು.
ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಹ್ಮದ್ ಸಿರಾಜುದ್ದೀನ್ ಕೊಪ್ಪಳ ರವರು ಮಾತನಾಡುತ್ತಾ ಪಿಂಜಾರ/ ನದಾಫ ಜನಾಂಗವು, ಕರ್ನಾಟಕದ ರಾಜ್ಯದ್ಯಂತ ಸುಮಾರು 22 ರಿಂದ 25 ಲಕ್ಷಗಳ ಜನಸಂಖ್ಯೆಯನ್ನು ಹೊಂದಿದೆ.ಸರ್ಕಾರದ ನಿರ್ದೇಶನದಂತೆ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಮತ್ತು ಇತರೆ ಯೋಜನೆಗಳಿಂದ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದ್ದೇವೆ. ತಾಂತ್ರಿಕ ದೋಷ ಹಾಗೂ ಅಧಿಕಾರಿಗಳ, ರಾಜಕೀಯ ನಿರ್ಲಕ್ಷತೆಯಿಂದ ಯಾವುದೇ ಯೋಜನೆಗಳು ಸರಿಯಾಗಿ ತಲುಪದೇ ವಂಚಿತರಾಗುತ್ತಿದ್ದೇವೆ . ಇದರ ನಿವಾರಣೆಗಾಗಿ ಹಲವಾರು ವರ್ಷಗಳಿಂದ ಹೋರಾಟ ಮಾಡಿ ಸಮಾಜ ಅಭಿವೃದ್ಧಿಗೆ ನೇರವಾಗಿ ಅನುಕೂಲವಾಗಲೆಂದು ಪ್ರತ್ಯೇಕ ನಿಗಮ ಮಂಡಳಿಗಳಿಗೆ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಹಿಂದಿನ ಸರ್ಕಾರ ಈ ಸಮಾಜದ ತೊಂದರೆಗಳನ್ನು ಗಮನಿಸಿ ಸಾಮಾಜಿಕ ಕಳಕಳಿಯಿಂದ ಜನಾಂಗಕ್ಕೆ ನೇರವಾಗಿ ಸೌಲಭ್ಯಗಳನ್ನು ಪಡೆದುಕೊಳ್ಳಲು ಪಿಂಜಾರ /ನದಾಫ್ ಹಾಗೂ ಇತರ ಹದಿಮೂರು ಜಾತಿಗಳ ಅಭಿವೃದ್ಧಿ ನಿಗಮ ದ ಆದೇಶದೊಂದಿಗೆ ಘೋಷಣೆ ಮಾಡಿದೆ. ನಂತರ ಈ ಹೊಸ ಸರ್ಕಾರ ಬಂದನಂತರ ಸಮಾಜದ ಹಿತ ದೃಷ್ಟಿಯಿಂದ ಹಾಗೂ ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನ ರೂಪಿಸಲು ಬಜೆಟ್ ನಲ್ಲಿ ಅಥವಾ ವಿಶೇಷ ಪ್ಯಾಕೇಜ್ ಮೂಲಕ ಅವಶ್ಯವಿರುವ ಅನುದಾನ ನೀಡಬೇಕೆಂದು ಸತತವಾಗಿ ಮುಖ್ಯಮಂತ್ರಿ, ಸಚಿವರುಗಳಿಗೆ ಮನವಿ ನೀಡುತ್ತಿದ್ದರೂ ಸಹ ಸರಕಾರ ಸ್ಪಂದಿಸದೇ ಸಮಾಜವನ್ನು ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುತ್ತಿದೆ.
ಹಾಲಿ ಸರ್ಕಾರವು ಬಡವರ ಪರ ಸ್ಪಂದಿಸುವ ಹಾಗೂ ಸಾಮಾಜಿಕ ನ್ಯಾಯವನ್ನು ನೀಡುವ ದಿಟ್ಟವಾದ ಸರಕಾರವೆಂದು ಚುನಾವಣಾ ಸಂದರ್ಭದಲ್ಲಿ ಸಾರ್ವಜನಿಕವಾಗಿ ಪ್ರಚಾರವನ್ನು ಮಾಡಿಕೊಳ್ಳುತ್ತಿದ್ದರೂ ಸಹ ರಾಜ್ಯದಲ್ಲಿ ಸುಮಾರು 25 ಲಕ್ಷಗಳ ಜನಸಂಖ್ಯೆ ಹೊಂದಿರುವ ನಮ್ಮಂತಹ ಬಡ ಸಮಾಜಗಳನ್ನು ಕಡಗಣನೆ ಹಾಗೂ ನಿರ್ಲಕ್ಷತನ ತೋರುವುದು ಸಮಾಜಕ್ಕೆ ಮಾಡುವ ಘೋರ ಅನ್ಯಾಯವಾಗಿದೆ.ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಸಾಮಾಜಿಕ ಕಳಕಳೆಯುಳ್ಳ ನಾಯಕರಾದ್ದು ಅತ್ಯಂತ ಹಿಂದುಳಿದ ಹಾಗೂ ಶೋಷಿತ ಈ ಸಮಾಜವನ್ನು ಕಡೆಗಣಿಸದೆ ಸಮಾಜದ ಹಿತಾಸಕ್ತಿಯಿಂದ ಕಷ್ಟಗಳನ್ನು ಗುರುತಿಸಿ, ಜನಸಂಖ್ಯೆ ಆಧಾರದ ಮೇಲೆ ಯೋಜನೆಗಳನ್ನು ರೂಪಿಸಲು ತಕ್ಷಣ ನಿಗಮಕ್ಕೆ ಅವಶ್ಯ ಇರುವ ಅನುದಾನವನ್ನು ನೀಡಬೇಕೆಂದು ರಾಜ್ಯಾದ್ಯಂತ ತಾಲೂಕ ಮತ್ತು ಜಿಲ್ಲಾ ಘಟಕಗಳಿಂದ ಏಕಕಾಲದಲ್ಲಿ ಮನವಿ ನೀಡುತ್ತಿದ್ದೇವೆ ಎಂದರು.
ಮುಖ್ಯಮಂತ್ರಿಗಳು ನಮ್ಮ ಬೇಡಿಕೆಗೆ ಸ್ಪಂದಿಸದೆ ಇದ್ದಲ್ಲಿ ಸರಕಾರವು ಹಿಂದುಳಿದ ಸಮಾಜಗಳಿಗೆ ಘೋರ ಅನ್ಯಾಯ ಎಸುಗುತ್ತಿರುವ ಬಗ್ಗೆ ರಾಜ್ಯಾದ್ಯಂತ ಸಾರ್ವಜನಿಕರ ಗಮನಕ್ಕೆ ತರಲು ಬಹಿರಂಗವಾಗಿ ಪ್ರತಿಭಟನೆ, ಧರಿಣಿ ಮಾಡಲಾಗುವುದು ಎಂದು ಹೇಳಿದರು..
ಈ ಸಂದರ್ಭದಲ್ಲಿ ಕುಕುನೂರು ತಾಲೂಕ ತಹಶೀಲ್ದಾರ್ ಎಚ್. ಪ್ರಾಣೇಶ್ ಸ್ವೀಕರಿಸಿ ಕೂಡಲೇ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಕಳಿಸಿಕೊಡಲು ತಿಳಿಸುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸ್ತಗಿರಿ ಸಾಬ್ ರಾಜೂರು ಕುಕುನೂರು ತಾಲೂಕ ಅಧ್ಯಕ್ಷರು, ಹುಸೇನ್ ಸಾಬ್ ಎ ನದಾಫ್ ತಾಲೂಕ ಕಾರ್ಯದರ್ಶಿ , ಫಕೀರ್ ಸಾಬ್ ರಾಜೂರ, ಮಹಮ್ಮದ್ ಅಲಿ ಅರಕೇರಿ, ಬಾಬು ಸಾಬ್ ಬ್ಯಾಡಗಿ, ಕಲಂದರ್ ಸಾಬ ನೂರಬಾಷಾ, ಮಲಿಕಸಾಬ ನೂರಬಾಷ, ಶಮಶಾದ್ ಬೇಗಂ, ರಜಿಯಾ ಬೇಗಂ, ರಿಜ್ವಾನ್ ನದಾಫ, ಜುಬೇದ ಬೇಗಂ, ಅಬ್ಬಾಸ ಅಲಿ ವೆಂಕಟಾಪುರ, ಇತರರು ಇದ್ದರು.
ವರದಿ:- ಚನ್ನಯ್ಯ ಹಿರೇಮಠ