ನಾಳೆ ಮಂಗಳೂರು ಗ್ರಾಮದಲ್ಲಿ “ಜನಸ್ಪಂದನ” ಸಭೆ – ಸದುಪಯೋಗ ಪಡಿಸಿಕೊಳ್ಳಲು ತಹಸೀಲ್ದಾರ್ ಪ್ರಾಣೇಶ್. ಎಚ್. ಮನವಿ.
ನಾಳೆ ಮಂಗಳೂರು ಗ್ರಾಮದಲ್ಲಿ “ಜನಸ್ಪಂದನ” ಸಭೆ – ಸದುಪಯೋಗ ಪಡಿಸಿಕೊಳ್ಳಲು ತಹಸೀಲ್ದಾರ್ ಪ್ರಾಣೇಶ್. ಎಚ್. ಮನವಿ.
ಕುಕನೂರ: ಸತ್ಯಮಿಥ್ಯ ( ಜುಲೈ -22).
ಜಿಲ್ಲೆಯಲ್ಲಿನ ಸಾರ್ವಜನಿಕರ ಕುಂದು- ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಪ್ರತಿ ತಾಲೂಕು ಮಟ್ಟದಲ್ಲಿ” ಜನ ಸ್ಪಂದನ”ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ.
ಜುಲೈ 23 ಮಂಗಳವಾರದಂದು ಕೊಪ್ಪಳ ಜಿಲ್ಲೆ, ಕುಕುನೂರ ತಾಲೂಕಿನ ಮಂಗಳೂರು ಗ್ರಾಮದ ಬಾಪೂಜಿ ಡಿ .ಇಡಿ. ಕಾಲೇಜ್ ಆವರಣದಲ್ಲಿ “ಜನ ಸ್ಪಂದನ”ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಂಗಳವಾರ ಬೆಳಿಗ್ಗೆ 10:೦೦ ಗಂಟೆಯಿಂದ ಸಾಯಂಕಾಲ 5:೦೦ ಗಂಟೆಯವರೆಗೆ ನಿಗದಿಪಡಿಸಲಾಗಿರುತ್ತದೆ.
ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ನೇತೃತ್ವದಲ್ಲಿ ಜಂಟಿಯಾಗಿ ತಾಲೂಕು ಮಟ್ಟದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
“ಜನ ಸ್ಪಂದನ” ಕೋಶ/ವಿಭಾಗದಲ್ಲಿ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಪ್ಪದೆ ಹಾಜರಾಗತಕ್ಕದ್ದು ಒಂದು ವೇಳೆ ಇರದೇ ಇದ್ದ ಪಕ್ಷದಲ್ಲಿ ಅಂತವರ ವಿರುದ್ಧ ಶಿಸ್ತು ಕ್ರಮ ಜರುಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಎಲ್ಲ ಸಾರ್ವಜನಿಕರು ಈ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕುಕನೂರು ಪಟ್ಟಣದ ತಹಸೀಲ್ದಾರ್ ಪ್ರಾಣೇಶ್ ಹೆಚ್. ತಿಳಿಸಿದ್ದಾರೆ.
ವರದಿ : ಚನ್ನಯ್ಯ ಹಿರೇಮಠ