ಕೆ,ಎಸ್,ಎಸ್ ಕಲಾ ಹಾಗೂ ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಸಾಂಘಿಕ, ಸಾಂಸ್ಕೃತಿಕ ಚಟುವಟಿಕೆಗಳ ಸಮಾರೋಪ ಸಮಾರಂಭ.
ಗಜೇಂದ್ರಗಡ:ಸತ್ಯಮಿಥ್ಯ (ಜುಲೈ -24)
ವಿದ್ಯಾರ್ಥಿಗಳು ಸಂಸ್ಕೃತಿ , ಸಂಸ್ಕಾರ, ಪ್ರಾಪಂಚಿಕ ಜ್ಞಾನ ಹಾಗೂ ಕೌಶಲ್ಯಗಳನ್ನು ರೂಢಿಸಿಕೊಳ್ಳುವ ಮೂಲಕ ದೇಶವನ್ನು ಕಟ್ಟುವ ಕೆಲಸದಲ್ಲಿ ಸಹಕಾರಿಯಾದಲ್ಲಿ ಮಾತ್ರ ನೀವು ಪಡೆದಂತಹ ಪದವಿಗಳಿಗೆ ಇನ್ನೂ ಹೆಚ್ಚಿನ ಗೌರವ ಸಿಗಲಿದೆ, ಶಿಕ್ಷಣದ ನಂತರ ಒಳ್ಳೆಯ ಅವಕಾಶಗಳಿದ್ದು ಅವುಗಳನ್ನು ಸದುಪಯೋಗ ಪಡಿಸಿಕೊಂಡು ಸುಂದರ ಬದುಕು ಕಟ್ಟಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕನಕದಾಸ ಶಿಕ್ಷಣ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ರವೀಂದ್ರನಾಥ ದಂಡಿನ ಕಿವಿಮಾತು ಹೇಳಿದರು .
ಪಟ್ಟಣದ ಕನಕದಾಸ ಶಿಕ್ಷಣ ಸಂಸ್ಥೆಯ ಕೆ,ಎಸ್,ಎಸ್ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ಹಾಗೂ ಬಿಕಾಂ ವಿದ್ಯಾರ್ಥಿಗಳ ಬಿಳ್ಕೊಡುಗೆ ಹಾಗೂ ಸಾಂಸ್ಕೃತಿ, ಕ್ರೀಡಾ, ಎನ್.ಎಸ್.ಎಸ್ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ ಅವರು ಕನಕದಾಸ ದೇವರ ಭಾವಚಿತ್ರಗಳಿಗೆ ಹೂ ಮಾಲೆ ಹಾಕಿ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯರಾದ ಪ್ರದೀಪ್ ಹೂಲ್ಲೂರ. ವಿದ್ಯಾರ್ಥಿಗಳು ಶೈಕ್ಷಣಿಕ ವರ್ಷದಲ್ಲಿ ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಎನ್ಎಸ್ಎಸ್ ಶಿಬಿರದಲ್ಲಿ ಪಾಲ್ಗೊಂಡು ಶೈಕ್ಷಣಿಕ ವರ್ಷದ ಎಲ್ಲ ರೀತಿಯ ಸಾಂಘಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಹಾಗೂ ಕಲಿಕೆಯ ಜ್ಞಾನವನ್ನು ಹೆಚ್ಚಿಸಿಕೊಂಡಿದ್ದೀರಿ ಅಲ್ಲದೆ ಶೈಕ್ಷಣಿಕ ವರ್ಷದಲ್ಲಿ ಕಾಲೇಜಿಗೆ ಉತ್ತಮ ಹೆಸರು ತಂದು ಕೊಡುವಂತಹ ವಿದ್ಯಾರ್ಥಿಗಳಾಗಿದ್ದೀರಿ ಅಂತಿಮ ವರ್ಷದ ವಿದ್ಯಾರ್ಥಿಗಳು ಪದವಿ ನಂತರ ತಮ್ಮ ಉದ್ಯೋಗದ ಕಡೆಗೆ ಹಾಗೂ ಹೆಚ್ಚಿನ ಓದಿನಕಡೆಗೆ ಒಲವು ಕೊಡುವದರೊಂದಿಗೆ ವಿದ್ಯಾರ್ಥಿಗಳು ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು ಶೈಕ್ಷಣಿಕ ವರ್ಷದಲ್ಲಿ ನಡೆದಂತಹ ಎಲ್ಲ ರೀತಿಯ ಚಟುವಟಿಕೆಗಳ ಕುರಿತು ವರದಿಯನ್ನು ಪ್ರಾಚಾರ್ಯರು ಹೇಳಿದರು.
ನಂತರ ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಂತಹ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರಶಸ್ತಿಯನ್ನು ವಿತರಣೆ ಹಾಗೂ ಕಾಲೇಜಿನ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಿದವು.
ಸಮಾರಂಭದಲ್ಲಿ ಮಹೇಶ್ ಪಟ್ಟೇದ ಡಾ. ಪುನೀತಕುಮಾರ ಬೆನಕನವಾರಿ, ಐ,ಬಿ ದಂಡಿನ್, ರವಿ ಗಡೇದವರ ಪದವಿ ಪ್ರಾಚಾರ್ಯರಾದ ಪ್ರದೀಪ್ ಹುಲ್ಲೂರ್, ಪಿಯು ಪ್ರಾಚಾರ್ಯರಾದ ಎಚ್. ಎನ್ ಗೌಡರ, ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಆರ್ ವಿ ಪತ್ತಾರ, ಡಿ,ಕೆ ಕಟ್ಟಿಮನಿ, ಎಲ್.ಕೆ.ಚಂದೂಕರ, ಕಾವ್ಯಶ್ರೀ ಬೇವಿನಕಟ್ಟಿ, ಐ.ಕೆ.ರೋಣದ, ಎಸ್.ಬಿ.ಪೂಜಾರ, ಎಂ ಎನ್ ಹಿರೇಮಠ್, ಎಸ್.ಎಸ್.ಅಚಲಕರ್. ಸೇರಿದಂತೆ ಕನಕದಾಸ ಶಿಕ್ಷಣ ಸಂಸ್ಥೆಯ ಎಲ್ಲಾ ಉಪನ್ಯಾಸಕರು ಶಿಕ್ಷಕರು ಸಂಸ್ಥೆಯ ಸಿಬ್ಬಂದಿಗಳು ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ : ಸುರೇಶ ಬಂಡಾರಿ.