
ಹಾಲಕೆರೆ ಗ್ರಾಮದಲ್ಲಿ ದಲಿತ ಕುಂದು ಕೊರೆತೆ ಸಭೆ
ಹಾಲಕೆರೆ:ಸತ್ಯಮಿಥ್ಯ (ಜುಲೈ -25)
ಗದಗ ಜಿಲ್ಲೆಯ ರೋಣ ತಾಲೂಕಿನ ಹಾಲಕೆರೆ ಗ್ರಾಮದಲ್ಲಿ ದಲಿತ ಕುಂದು ಕೊರೆತೆ ಸಭೆ ನೆಡಯಿತು ಸಭೆಯಲ್ಲಿ ತಾಲ್ಲೂಕು ದಂಡಧಾಕಾರಿಗಳಾದ ಕಿರಣಕುಮಾರ ಕುಲಕರ್ಣಿ, ರೋಣ ಸಿಪಿಐ ಬೀಳಗಿ ಮತ್ತು ರೋಣ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಧಿಕಾತಿಗಳಾದ ಹರ್ತಿ ಹಾಗೂ ನರೇಗಲ್ಲ ಪಿ ಎಸ್ ಐ ಐಶ್ವರ್ಯ ನಾಗರಾಳರವರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿತು ಗ್ರಾಮ ಪಂಚಾಯತ ಪಿಡಿಓ ಶರಣಪ್ಪ ನರೇಗಲ್ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ತಾಲ್ಲೂಕು ಅಧಿಕಾರಿಗಳ ಮುಂದೆ ತಮ್ಮ ಸಮಸ್ಯೆಗಳನ್ನು ಜನರು ಹೇಳಿಕೊಂಡರು ಅದಕ್ಕೆ ಸ್ಪಂದಿಸಿದ ತಾಲ್ಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ನರೇಗ ಯೋಜನೆ ಬಿಲ್ಲುಗಳು ಆಗಿಲ್ಲ ಮತ್ತು ಒಡ್ಡಿನ ಪಗಾರ ಆಗಿಲ್ಲ ಮನೆಯ ಬಿಲ್ಲು ಬರುತ್ತಾ ಇಲ್ಲಾ ಎಂದು ದೂರ ಹೇಳಿದರು ಅದಕ್ಕೆ ಅವರು ಈ ಕೂಡಲೆ ಕ್ರಮ ಕೈಗೊಳ್ಳತ್ತೆವೆ ಎಂದು ಹೇಳಿದರು
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ವೃದ್ಯಾಪ ವೇತನ ವಿಧವಾ ವೇತನ ಅಂಗಲವೀಕಲರ ವೇತನ ವಿಳಂಬದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ತಹಸೀಲ್ದಾರ್ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳ ಭೇಟಿಯಾಗದೆ ನೇರವಾಗಿ ಬನ್ನಿ ನಿಮ್ಮ ಕೆಲಸಗಳನ್ನು ಮಾಡಿಕೊಂಡು ಹೋಗಿ ಎಂದು ಹೇಳಿದರು.
ಸಭೆಯಲ್ಲಿ ಮಂಜುನಾಥ ಬುರಡಿ ಮಾತಾನಾಡಿ ಹಾಲಕೆರೆ ಗ್ರಾಮದ ದಲಿತ ಮಹಿಳೆಯರಿಗೆ ಸಾಮೂಹಿಕವಾಗಿ ಶೌಚಾಲಯಾ ನಿರ್ಮಿಸಿಕೊಡಬೇಕು.ದಲಿತರಿಗೆ ಮೂರು ನಾಲ್ಕು ಲಕ್ಷ ಕೊಟ್ಟು ಜಾಗ ಹಿಡಿಯುವಷ್ಟು ಶ್ರೀಮಂತರಲ್ಲ ಆದರಿಂದ ಸರಕಾರದ ಕೆರೆ ಹತ್ತಿರ ಇರುವ ಎರಡು ಎಕ್ಕರೆ ಜಾಗವನ್ನು ಖರೀದಿ ಮಾಡಿ ಬಡ ದಲಿತರಿಗೆ ಗುಂಪು ಮನೆ ನಿರ್ಮಾಸಿ ಕೊಡಬೇಕು ಎಂದು ಹೇಳಿದರು.
ಸಭೆಯಲ್ಲಿ ಬಾಳಪ್ಪ ಬುರಡಿ ಮಾತನಾಡಿ ಊರಲ್ಲಿ ಸಾರಾಯಿ ಕುಡಿದು ಜಗಳಗಳಾಗುತ್ತಿವೆ ಆದ್ದರಿಂದ ಗ್ರಾಮವನ್ನು ಸಾರಾಯಿ ಮುಕ್ತಮಾಡಿ ಹಾಲಕೆರೆಯಲ್ಲಿ ನೆಮ್ಮದಿ ನೆಲೆಸುವ ಹಾಗೆ ಕ್ರಮಕೈಗೊಳ್ಳಿ ಎಂದರು.
ಸಿಪಿಐ ಬೀಳಗಿ ಖಂಡಿತವಾಗಿ ನಿಮ್ಮ ಎಲ್ಲರೂ ಸಹಕಾರ ಇದ್ದರೆ ಖಂಡಿತವಾಗಿ ಮಾಡುತ್ತೇವೆ ಹಾಗೂ ಅಂತವರ ವಿರುದ್ದ ಕಠಿಣ ಕ್ರಮ ಕೈಗೊಳಲಾಗುವುದು ಎಂದು ಹೇಳಿದರು.
ಸಮಾಜ ಕಲ್ಯಾಣ ಇಲಾಖೆ ಅಧಿಕಾರ ಹರ್ತಿಯವರ ಮೂಲಕ ಎಸ್ಸಿ ಜನಾಂಗಕ್ಕೆ ರುದ್ರಭೂಮಿ ಇರುವುದಿಲ್ಲ ಅದನ್ನುಮಂಜೂರು ಮಾಡಿಸಬೇಕು ಎಂದು ತಹಶಿಲ್ದಾರರ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಂಜುನಾಥ ಬುರಡಿ ಸುರೇಶ ಕ್ಯಾರ ನಿಂಗಪ್ಪ ಮುಂದಿನಮನಿ ಬಾಳಪ್ಪ ಬುರಡಿ ಮಹಾದೇವಪ್ಪ ಮುಂದಿನಮನಿ ಅಂದಪ್ಪ ಪೂಜಾರ ಶರಣಪ್ಪ ಜವಳಗೇರಿ ಹನಮಪ್ಪ ಕನ್ನಕಣ್ಣವರ ಬಸಪ್ಪ ಮೂಲಿಮನಿ ಮುದಿಯಪ್ಪ ಕ.ಮೂಲಮನಿ ಪರಸಪ್ಪ ತಲೇಖಾನ ಶರಣಪ್ಪ ಸಣ್ಣಬಸಪ್ಪನವರು ಯಮನಪ್ಪ ಸತ್ಯಮ್ಮನವರು ಮುಂತಾದವರು ಭಾಗಿಯಾದರು.
ವರದಿ : ಸುರೇಶ ಭಂಡಾರಿ.