ರಾಜ್ಯ ಸುದ್ದಿವಿಡಿಯೋಗಳು

ನಾರಾಯಣಪುರ ಜಲಾಶಯ 2.5 ಲಕ್ಷ ಕ್ಯೂಸೆಕ್ಸ್ ನೀರು ಹೊರಗೆ – ನದಿ ತೀರದ ಜನರು ಎಚ್ಚರವಾಗಿರಲು ಮನವಿ.

Share News

ನಾರಾಯಣಪುರ ಜಲಾಶಯ 2.5 ಲಕ್ಷ ಕ್ಯೂಸೆಕ್ಸ್ ನೀರು ಹೊರಗೆ – ನದಿ ತೀರದ ಜನರು ಎಚ್ಚರವಾಗಿರಿ.

ನಾರಾಯಣಪುರ -ಸತ್ಯಮಿಥ್ಯ ( ಜುಲೈ – 25)

ಮಹಾರಾಷ್ಟ್ರದಲ್ಲಿ ಬಿಡದೆ ಸುರಿಯುತ್ತಿರುವ ಮಳೆಯಿಂದ ಆಲಮಟ್ಟಿ ಜಲಾಶಯಕ್ಕೆ ಅಪಾಯಮಟ್ಟ ಮೀರಿ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಆದ್ದರಿಂದ ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಮತ್ತು ಕೃಷ್ಣಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿನ ಮಳೆಯಿಂದ ನಾರಾಯಣಪುರ ಅಣೆಕಟ್ಟಿನ ಒಳಹರಿವು ಸುಮಾರು 2.5 ಲಕ್ಷ ಕ್ಯೂಸೆಕ್ಸ್ ಕಿಂತ ಹೆಚ್ಚಾಗುವ ಸಾಧ್ಯತೆಯಿದೆ. ಆದ್ದರಿಂದ, ನೀರಿನ ಸುರಕ್ಷಿತ ಮಟ್ಟವನ್ನು ಕಾಯ್ದುಕೊಳ್ಳಲು, ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ಹೊರಹರಿವನ್ನು ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 2.00 ರವರೆಗಿನ ಅವಧಿಯಲ್ಲಿ 2,5 ಲಕ್ಷ ಕ್ಯೂಸೆಕ್‌ಗೆ ಹೆಚ್ಚಿಸಲಾಗುವುದು ಮತ್ತು ಮುಂಬರುವ ಅವಧಿಯಲ್ಲಿ ಒಳಹರಿವಿನ ಆಧಾರದ ಮೇಲೆ ಕೃಷ್ಣಾ ನದಿಗೆ ಮತ್ತಷ್ಟು ಹೊರಹರಿವನ್ನು ಹೆಚ್ಚಿಸಲಾಗುವುದು .

ನಾರಾಯಣಪುರ ಜಲಾಶಯದ ರಮಣೀಯ ದೃಶ್ಯ ವಿಡಿಯೋ 

ನಾರಾಯಣಪುರ ಜಲಾಶಯದ ವಿವರ:25.07.2024 ಬೆಳಿಗ್ಗೆ 8 ಗಂಟೆಗೆ ಪ್ರಸ್ತುತ ನೀರಿನ ಮಟ್ಟ:490.84 ಮೀ

ಪ್ರಸ್ತುತ ಒಳಹರಿವು : 2.25 ಲಕ್ಷ ಕ್ಯೂಸೆಕ್ಸ್

ನದಿಗೆ ಪ್ರಸ್ತುತ ಹೊರಹರಿವು : 2,25,650 ಕ್ಯೂಸೆಕ್(25 ಗೇಟ್‌ಗಳು )

ಪ್ರಸ್ತುತ ಸಂಗ್ರಹ : 27.212 ಟಿಎಂಸಿ. (81.68%)(ಗರಿಷ್ಠ ಸಂಗ್ರಹ FRL 492.25 M =33.313 TMC)

ಸಂಬಂಧಿತರು ನಾರಾಯಣಪುರ ಅಣೆಕಟ್ಟಿನ ಕೆಳಭಾಗದ ನದಿ ತೀರದ ಹಳ್ಳಿಯ ಜನರನ್ನು ಎಚ್ಚರವಾಗಿರಿ ಪ್ರಭಾವಿ ಅಧಿಕಾರಿಗಳು ವಿಜೇಂದ್ರ ಹಳ್ಳಿ ಹಾಗೂ ಶಿವರಾಜ್ ಕುಮಾರ್ ಮಾಹಿತಿ ನೀಡಿದರು .

ವರದಿ : ಶಿವು ರಾಠೋಡ


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!