ರಾಜ್ಯದಲ್ಲಿ ಪಿಓಪಿ ಗಣೇಶ ವಿಗ್ರಹ ಬ್ಯಾನ್ ಸಿಎಂಗೆ ಪತ್ರ.
ಪಿಒಪಿ ಗಣಪತಿ ಬ್ಯಾನ್ ಮಾಡಲು ಮುಖ್ಯಮಂತ್ರಿಗೆ ಪತ್ರ ಬರೆದ -:ಮುತ್ತಣ್ಣ ಭರಡಿ

ರಾಜ್ಯದಲ್ಲಿ ಪಿಓಪಿ ಗಣೇಶ ವಿಗ್ರಹ ಬ್ಯಾನ್ ಸಿಎಂಗೆ ಪತ್ರ.
ಪಿಒಪಿ ಗಣಪತಿ ಬ್ಯಾನ್ ಮಾಡಲು ಮುಖ್ಯಮಂತ್ರಿಗೆ ಪತ್ರ ಬರೆದ -:ಮುತ್ತಣ್ಣ ಭರಡಿ
ಗದಗ: ಸತ್ಯ ಮಿಥ್ಯ ( ಜುಲೈ- 29)
ಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪೂಜಿಸುವುದೇ ಶ್ರೇಷ್ಠ ಎಂಬ ನಂಬಿಕೆಯಿದೆ. ಆದರೆ, ಕೆಲವರು ಕಡಿಮೆ ಸಮಯದಲ್ಲಿ ಹೆಚ್ಚಿನ ವಿಗ್ರಹಗಳನ್ನು, ತಯಾರಿಸಬಹುದೆಂಬ ದುರಾಸೆಯಿಂದ ಪರಿಸರಕ್ಕೆ ಹಾನಿ ಉಂಟು ಮಾಡುವ ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಗಣಪ ತಯಾರು ಮಾಡುತ್ತಿದ್ದಾರೆ. ಪ್ಲಾಸ್ಟರ್ ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಬಾವಿ, ಕೆರೆ, ನದಿ ಸೇರಿದಂತೆ ಇನ್ನಿತರೆ ಜಲ ಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಪರಿಸರ ಮಾಲಿನ್ಯವಾಗುತ್ತಿದೆ.
ಪ್ಲಾಸ್ಟರ್ ಆಫ್ ಪ್ಯಾರಿಸ ಗಣೇಶ ಮೂರ್ತಿಗಳ ತಯಾರಿಕೆ ಮತ್ತು ಮಾರಾಟ ಹಾಗೂ ಬಣ್ಣ ಲೇಪನ ಮಾಡುವುದು ಜಲಮಾಲಿನ್ಯ ತಡೆ ಮತು ನಿಯಂತ್ರಣ ಕಾಯ್ದೆ 1974 ಕಲಂ 33 (ಎ) ಪ್ರಕಾರ ಕಾನೂನು ಬಾಹಿರವಾಗಿದೆ. ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನಿಷೇಧಿಸಿ ಆದೇಶ ಹೊರಡಿಸಿದೆ. ಹೀಗಿದ್ದರೂ ಪಿಓಪಿ ಗಣೇಶ ವಿಗ್ರಹ ಮಾರಾಟ ಬೇಕಾ ಬಿಟ್ಟಿಯಾಗಿ ನಡೆದಿದೆ.. ಪಿಓಪಿ ವಿಗ್ರಹಗಳಿಂದ ಉಂಟಾಗುವ ಜಲಮಾಲಿನ್ಯದ ಬಗ್ಗೆ ಸಾರ್ವಜನಿಕರಲ್ಲಿ ನಾವು ಕಳೆದ 12 ವರ್ಷಗಳಿಂದ ಅರಿವು ಮೂಡಿಸುತ್ತಿದ್ದೇವೆ. ಹೀಗಿದ್ದರೂ ಕೆಲ ದಂಧೆಕೋರರು ಲಾಭಕ್ಕಾಗಿ ಪಿಓಪಿ ವಿಗ್ರಹ ತಯಾರಿಕೆ ಹಾಗೂ ಮಾರಾಟ ಮಾಡಲು ನೆರೆಯ ಮಹಾರಾಷ್ಟ್ರ ರಾಜ್ಯಗಳಿಂದ ಮತ್ತು ತಾವೇ ತಯಾರಿಸಿದ ಮಣ್ಣಿನ ವಿಗ್ರಹದಂತೆ ಕಾಣುವ ಪಿಓಪಿ, ಜೊತೆಗೆ (RED-OXIDE) ಮಿಶ್ರಿತ, ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳನ್ನು ತಂದು ಈ ವರ್ಷ ಮಾರಾಟಕ್ಕೆ ಮುಂದಾಗಿದ್ದಾರೆ. ಇದರಿಂದ ಪರಿಸರ ರಾಜ್ಯದ ಪರಿಸರ ಸ್ನೇಹಿ ಗಣೇಶ ವಿಗ್ರಹಗಳ ತಯಾರಕರಿಗೆ ಬಹಳಷ್ಟು ತೊಂದರೆಯಾಗುತ್ತಿದೆ.
ಹೀಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಕೂಡಲೇ ಅವುಗಳನ್ನು ಪರಿಶೀಲಿಸಿ ವಶಪಡಿಸಿಕೊಂಡ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ ಮೂರ್ತಿಗಳ ಮಾರಾಟಕ್ಕೆ ಅವಕಾಶ ನೀಡಬಾರದು, ಮತ್ತು ರಾಜ್ಯದ ಗಡಿ ಭಾಗದಲ್ಲಿ ನಿಯಂತ್ರಣಕ್ಕೆ ಚೆಕ್ ಪೋಸ್ಟ್ ಗಳನ್ನು ತೆರೆಯಬೇಕು.
ರಾಜ್ಯಾದ್ಯಂತ ಒಂದೇ ನಂಬರ್ ನ ಹೆಲ್ಪ್ ಲೈನ್ ತೆರೆಯಬೇಕು. ಹಾಗೂ ಹಲವಾರು ವರ್ಷಗಳಿಂದ ಪ್ರಮುಖ ಬೇಡಿಕೆಯಾದ ಸರ್ಕಾರದಿಂದ ಕಲಾವಿದರಿಗೆ ಗುರುತಿನ ಚೀಟಿ ನೀಡುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರಿಗೆ ಪ್ರಧಾನ ಕಾರ್ಯದರ್ಶಿ ಮುತ್ತಣ್ಣ ಭರಡಿ ಪತ್ರ ಬರೆದಿದ್ದಾರೆ.
ವರದಿ : ಮುತ್ತು