
ಸಾಲಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ರೈತ ಆತ್ಮಹತ್ಯೆ.

ಯಾದಗಿರಿ :ಸತ್ಯಮಿಥ್ಯ ( ಜುಲೈ -31)
ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ. ಗುರಪ್ಪ ತಂದೆ ದತ್ತಪ್ಪ ಸಗರ್. ವಯಸ್ಸು 40. ಈತ ಕರ್ನಾಟಕ ಬ್ಯಾಂಕ್ ನಲ್ಲಿ 7 ಲಕ್ಷ ಸಾಲ ಮಾಡಿದ್ದ ಮೂರ-ನಾಲ್ಕು ವರ್ಷದಿಂದ ಸರಿಯಾದ ಮಳೆ ಇಲ್ಲದ ಕಾರಣ ಬೇಸತ್ತ ರೈತ ಯಾವದೇ ದಿಕ್ಕು ತೋಚದೇ ನೇಣು ಬಿಗಿದುಕೊಂಡು ಸೋಮವಾರ ಸಾಯಂಕಾಲ ಆತ್ಮಹತ್ಯೆಗೆ ಶರಣಾದ ಘಟನೆ ಅಗ್ನಿ ಗ್ರಾಮದಲ್ಲಿ ನಡೆದಿದೆ.
ಹೆಂಡತಿ ಮತ್ತು ಮೂರು ಜನ ಮಕ್ಕಳನ್ನು ಬಿಟ್ಟು ಅಗಲಿದ್ದಾನೆ ಎನ್ನಲಾಗಿದೆ ಕೆಂಭಾವಿ ಪೊಲೀಸ್ ಸ್ಟೇಷನಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ವರದಿ : ಶಿವು ರಾಠೋಡ್.