ಬಸವರಾಜ ರಾಯರೆಡ್ಡಿಯರಿಂದ ಅಭಿವೃದ್ಧಿ ಕಾರ್ಯರಂಭ : ಸತ್ಯನಾರಾಯಣಪ್ಪ ಹರಪನಹಳ್ಳಿ.

ಬಸವರಾಜ ರಾಯರೆಡ್ಡಿಯರಿಂದ ಅಭಿವೃದ್ಧಿ ಕಾರ್ಯರಂಭ : ಸತ್ಯನಾರಾಯಣಪ್ಪ ಹರಪನಹಳ್ಳಿ.
ಕುಕನೂರ : ಸತ್ಯಮಿಥ್ಯ ( ಆಗಸ್ಟ್-01).
ಪಟ್ಟಣದ ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಮತ್ತು ಜೆಸ್ಕಾಂ ಉಪ ವಿಭಾಗ ಕಾರ್ಯಾಲಯ ಪ್ರಾರಂಭದೊಂದಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ಆರಂಭಗೊಳ್ಳಲಿವೆ ರೈತರು ಮತ್ತು ಸಾರ್ವಜನಿಕರಿಗೆ ಉಪಯುಕ್ತವಾಗಲಿದೆ ಎಂದು ಸತ್ಯನಾರಾಯಣಪ್ಪನಹಳ್ಳಿ ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಕುಕನೂರು ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ ಬಸವರಾಜ ರಾಯರೆಡ್ಡಿ ಮಾನ್ಯ ಶಾಸಕರು ಹಾಗೂ ಮಾನ್ಯ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರು ಇವರಿಂದ ಯಲಬುರ್ಗಾ ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿ ಕುಕನೂರು ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಮತ್ತು ಜೆಸ್ಕಾಂ ಉಪ ವಿಭಾಗ ಕಾರ್ಯಾಲಯ ಪ್ರಾರಂಭವನ್ನು ಅಗಸ್ಟ್ 3ನೇ ತಾರೀಕು ನೆರವೇರಿಸಲಾಗುವುದು ಎಂದು ತಿಳಿಸಿದರು.
ಕೋಲ್ಡ್ ಸ್ಟೋರೇಜ್ ಸ್ಥಾಪನೆಯಿಂದ ಕುಕುನೂರು ಭಾಗದ ರೈತರಿಗೆ ಹಾಗೂ ವರ್ತಕರಿಗೆ ತುಂಬಾ ಪ್ರಯೋಜನಕಾರಿ ಇದೆ ಸ್ಟೋರೇಜ್ ಕೊರತೆಯಿಂದ ಆಹಾರ ಧಾನ್ಯಗಳು ಹುಳು ಹೊಕ್ಕು ಸಾಕಷ್ಟು ನಷ್ಟ ಅನುಭವಿಸುವ ಪರಿಸ್ಥಿತಿ ಎದುರಾಗುತ್ತಿತ್ತು. ಇನ್ನು ಮುಂದೆ ಚಿಂತೆ ದೂರ ಆಗಿದೆ . ಅಲ್ಲದೆ ಜೆಸ್ಕಾಂ ಉಪ ವಿಭಾಗ ಪ್ರಾರಂಭದಿಂದ ರೈತರ ಪಂಪ್ಸೆಟ್ ಗಳಿಗೆ ನೀರು ಪೂರೈಕೆ ಹಾಗೂ ಈ ಭಾಗದಲ್ಲಿ ಗ್ರಾನೈಟ್, ರೈತರಿಗೆ ಮತ್ತು ಇತರೆ ಕೈಗಾರಿಕೆ ಸ್ಥಾಪನೆಯಿಂದ ವಿದ್ಯುತ್ ಸಂಪರ್ಕಕ್ಕೆ ಸಹಾಯಕವಾಗಿದೆ ಕುಕುನೂರು ಭಾಗಕ್ಕೆ ಅಭಿವೃದ್ಧಿ ಕೊಡುಗೆ ನೀಡಿದ ಶಾಸಕ ಬಸವರಾಜ ರಾಯರೆಡ್ಡಿ ಅವರ ನಿರಂತರ ಅಭಿವೃದ್ಧಿ ಸಂತಸ ತಂದಿದೆ ಎಂದು ಸತ್ಯನಾರಾಯಣ ಹರಪನಹಳ್ಳಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಸಂಗಮೇಶ ಗುತ್ತಿ, ಸಿದ್ದಯ್ಯ ಕಳ್ಳಿಮಠ, ರೆಹಮಾನಸಾಬ ಮೂಕಪ್ಪನವರ, ಸಿರಾಜ ಕರಮುಡಿ, ಗಗನ ನೋಟಗಾರ, ಮಾಲತೇಶ ಮುಧೋಳ, ಮಂಜುನಾಥ ಯಡಿಯಾಪುರ , ಪ್ರಶಾಂತ ಅರ್ಬೇರಳಿನ , ಅಣ್ಣಪ್ಪ ಮರಡಿ, ಸಿದ್ದಪ್ಪ, ಇತರರು ಹಾಜರಿದ್ದರು.
ವರದಿ : ಚನ್ನಯ್ಯ ಹಿರೇಮಠ.