ಬಾತ್‌ರೂಂನಲ್ಲಿ ಭುಸುಗುಡುತ್ತಿದ್ದ ಹಾವು.
ಹಾವನ್ನು ಹಿಡಿದು ಅರಣ್ಯಕ್ಕೆ ಬಿಟ್ಟ ಉರಗ ರಕ್ಷಕ ಮಂಜುನಾಥ.

ಬಾತ್‌ರೂಂನಲ್ಲಿ ಭುಸುಗುಡುತ್ತಿದ್ದ ಹಾವು.
ಚಿತ್ರ :ಸೆರೆಡಿದ ನಾಗರ ಹಾವು
ನರೇಗಲ್:ಸತ್ಯಮಿಥ್ಯ (ಆಗಸ್ಟ್ -04)
ಪಟ್ಟಣದ 3ನೇ ವಾರ್ಡಿನ ಜಕ್ಕಲಿರೋಡ್ ಆಶ್ರಯ ಕಾಲೋನಿಯಲ್ಲಿ ದೇವಕ್ಕ ರಾಠೋಡ ಎನ್ನುವರ ಮನೆಯ ಬಾತ್‌ರೂಂನಲ್ಲಿ ಭುಸುಗುಡುತ್ತಿದ್ದ ನಾಗರಹಾವನ್ನು ಉರಗತಜ್ಞ ಮಂಜುನಾಥ ಜ್ಯೋತಿಮಠ ರಕ್ಷಣೆ ಮಾಡಿ ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಆಹಾರ ಹುಡುಕಿಕೊಂಡ ಮನೆಯ ಕಡೆಗೆ ಬಂದ 4 ಅಡಿ ಉದ್ದದ ನಾಗರ ಹಾವು ಗೇಟ್ ಮೂಲಕ ಒಳಗೆ ಬಂದಿದೆ. ನಂತರ ಬಾಗಿಲು ತೆರೆದಿದ್ದ ಬಾತ್‌ರೂಂ ಗೆ ಹೋಗಿದೆ. ಮನೆಯ ನಿವಾಸಿಗಳು ಬಾತ್‌ರೂಂ ಕಡೆಗೆ ಹೋದ ಸಂದರ್ಭದಲ್ಲಿ ನಾಗರಹಾವು ಭುಸ ಗುಡುತ್ತಿರುವುದು ಕಂಡು ಬಂದಿದೆ ಹಾಗೂ ನಿವಾಸಿಗಳಲ್ಲಿ ಭಯ, ಆತಂಕ ಮೂಡಿಸಿದೆ. ಬಾತ್‌ರೂಂ ಬಾಗಿಲು ಹಾಕಿ ಉರಗ ರಕ್ಷಕ ಕೋಚಲಾಪುರ ಗ್ರಾಮದ ಮಂಜುನಾಥ ಜ್ಯೋತಿಮಠ ಅವರಿಗೆ ಮಧ್ಯಾಹ್ನ ಕರೆ ಮಾಡಿದ್ದಾರೆ.
ಸಂಜೆ ವೇಳೆ ಸ್ಥಳಕ್ಕೆ ಬಂದ ಉರುಗ ರಕ್ಷಕ ಬಾತ್‌ರೂಂ ಬಾಗಿಲು ತೆರೆದಾಗ ಹಾವು ಅಲ್ಲಯೇ ಇರುವುದು ಕಂಡುಬಂದಿದೆ. ನಂತರ ಅವರು ಹಾವನ್ನು ಮಾನಿಟರ್ ಮಾಡಿ ಸುರಕ್ಷಿತವಾಗಿ ಹಿಡಿದು ಅರಣ್ಯ ಪ್ರದೇಶಕ್ಕೆ ಬಿಡುವ ಮೂಲಕ ಮನೆಯವರ ಆತಂಕವನ್ನ ದೂರ ಮಾಡಿದ್ದಾರೆ.
ಚಿತ್ರ :ನರೇಗಲ್ ಪಟ್ಟಣದ 3ನೇ ವಾರ್ಡಿನ ನಿವಾಸಿ ದೇವಕ್ಕ ರಾಠೋಡ ಅವರ ಮನೆಯಲ್ಲಿ ಉರತಜ್ಞ ಮಂಜುನಾಥ ಜ್ಯೋತಿಮಠ ಅವರು ಸೆರೆಡಿದ ನಾಗರ ಹಾವು
ನಾಗರ ಹಾವನ್ನು ನೋಡಲು ಬಹಳ ಜನರು ಬಂದ ಕಾರಣ ಆರಂಭದಲ್ಲಿ ಹಾವು ಸಿಟ್ಟಿನಲ್ಲಿ ಇತ್ತು. ಹೆಡೆ ಎತ್ತಿ ಭೂಸುಗುಡುವ ಶಬ್ದ ಮಾಡುತಿತ್ತು. ಆದರೆ ಸ್ವಲ್ಪ ಸಮಯ ತೆಗೆದುಕೊಂಡು ಮಾನಿಟರ್ ಮಾಡಿದ ಉರಗ ರಕ್ಷಕ ಚಾಕಲೇಟ್ ಡಬ್ಬಿಯ ಸಹಾಯದ ಮೂಲಕ ಹಿಡಿದಿದ್ದಾರೆ. ಹಾವುಗಳು ಕಪ್ಪೆ, ಮಿಡತೆ, ಇಲಿಯಂತ ಆಹಾರವನ್ನು ಅರಸಿ ಬರುವುದರಿಂದ ಈ ರೀತಿ ಜಂತುಗಳು ಮನೆಯ ಕೊಠಡಿಗೆ ಸೇರುವುದಕ್ಕೆ ಕಾರಣವಾಗಿದೆ. ಮನೆಯ ಸುತ್ತಲು ಹುಲ್ಲು ಬೆಳೆಯದಂತೆ, ಗಿಡಗಂಟಿಗಳು ಇರದಂತೆ ಹಾಗೂ ಕಸ ಇರದಂತೆ ಶುಚಿತ್ವ ಕಾಪಾಡಿಕೊಂಡರೆ ಹಾವುಗಳು ಜನವಸತಿ ಪ್ರದೇಶದಲ್ಲಿ ಕಂಡು ಬರುವುದು ಕಡಿಮೆ ಎಂದು ಸಲಹೆ ನೀಡಿದರು. ಸಾರ್ವಜನಿಕರು ಯಾವುದೇ ಹಾವು ಮನೆ ಒಳಗೆ ಅಥವಾ ಕಂಪೌಂಡನಲ್ಲಿ ಅಕಸ್ಮಾತಾಗಿ ಬಂದರೆ ಕೊಲ್ಲದೆ, ಅವುಗಳನ್ನು ರಕ್ಷಿಸಿ ಅವುಗಳ ಆವಾಸಕ್ಕೆ ಬಿಡಬೇಕು. ಇದು ನಾವು ನಿಸರ್ಗಕ್ಕೆ ತೋರುವ ಗೌರವವಾಗಿದೆ ಎಂದರು. ಈ ವರೆಗೆ 800ಕ್ಕೂ ಹೆಚ್ಚು ರಕ್ಷಣೆ ಮಾಡಿರುವುದಾಗಿ ತಿಳಿಸಿದರು.
ವರದಿ :ಸುರೇಶ ಬಂಡಾರಿ.