ಸ್ಥಳೀಯ ಸುದ್ದಿಗಳು

ಕೊಪ್ಪಳ : ಮಾನಾಪಮಾನ ಮೆಟ್ಟಿ ನಿಂತಾಗ ಸಾಧನೆ ಸಾಧ್ಯ :ಯಲ್ಲಪ್ಪ ಬಡಿಗೇರ

Share News

ಮಾನಾಪಮಾನ ಮೆಟ್ಟಿ ನಿಂತಾಗ ಸಾಧನೆ ಸಾಧ್ಯ  :ಯಲ್ಲಪ್ಪ ಬಡಿಗೇರ.

ಕೊಪ್ಪಳ : ಸತ್ಯಮಿಥ್ಯ ( ಆಗಸ್ಟ್ -08)

ರವಿವರ್ಮ ಕಲೆಗಳಿಗೆ ಹೆಸರುವಾಸಿಯಾದ ಪ್ರಾಚೀನ ಭಾರತೀಯ.ಅವರ ಹಾದಿಯಲ್ಲಿಯೇ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಾನಾಪುರ ಗ್ರಾಮದ ಕರಕುಶಲ ಕೆಲಸದಲ್ಲಿ ಅನೇಕ ಅವಾರ್ಡ್, ಪ್ರಶಸ್ತಿಗಳನ್ನು ಮುಡಿಗೇರಿಸಿದ ಯಲ್ಲಪ್ಪ ಬಡಿಗೇರ.

ಅವರಿಗೆ ಮೊದಲು ಒಪ್ಪತ್ತು ಊಟ ಮಾಡಲು ಮತ್ತು ಸರಿಯಾಗಿ ಮಲಗಲು ಸಿಗದಂತಹ ಕಷ್ಟಕರ ಸನ್ನಿವೇಶದಲ್ಲಿ. ಅನೇಕ ಅವಮಾನಗಳನ್ನು ಸಹಿಸಿಕೊಂಡು. ಕಲೆಯ ಮೇಲೆ ಶ್ರದ್ದೆ, ಪರಿಶ್ರಮ, ಇಟ್ಟು ಕೆಲಸ ಮಾಡಿದ್ದರಿಂದ . ಇವರ ಕಾರ್ಯಕ್ಷಮತೆ ಮೆಚ್ಚಿ ದೊಡ್ಡ ಕೆಲಸಗಳು ಹುಡುಕಿಕೊಂಡು ಬಂದವು. ಕಲೆಯನ್ನು ಗುರುತಿಸಿ ನಾನಾ ಸಂಸ್ಥೆಗಳು ಉತ್ತಮ ಪ್ರಶಸ್ತಿಗಳು, ಅವಾರ್ಡಗಳನ್ನು ನೀಡಿದರು ಎಂದು ಬಡಿಗೇರ ಯಲ್ಲಪ್ಪ ತಮ್ಮ ಯಶೋಗಾಥೆಯನ್ನು ಬಿಚ್ಚಿಡುತ್ತಾರೆ.

ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಸರಸ್ವತಿ ಎಂಬ ಶಿಕ್ಷಕರು ನನಗೆ ಮಾರ್ಗದರ್ಶಕರಾಗಿದ್ದರು . ಅವರು ಬೋರ್ಡಿನ ಮೇಲೆ ಚಿತ್ರಗಳನ್ನು ಬಿಡಿಸಿದಾಗ ನಾನು ಮನೆಯಲ್ಲಿ ಬಂದು ಕಟ್ಟಿಗೆಯಲ್ಲಿ ಕೆತ್ತನೆ ಮಾಡಿ ತೋರಿಸುತ್ತಿದ್ದೆ ಮತ್ತು ನನ್ನ ಬೆಳವಣಿಗೆಯನ್ನು ಕಂಡ ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಆಶೀರ್ವಾದದೊಂದಿಗೆ ನನಗೆ ಇವತ್ತಿನ ದಿವಸ ಇಟಗಿ ಉತ್ಸವದಲ್ಲಿ ಚಾಲುಕ್ಯ ವಿಕ್ರಮಾದಿತ್ಯ ಪ್ರಶಸ್ತಿ, ಹನ್ನೊಂದನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರಕುಶಲ ಪ್ರಶಸ್ತಿ , ಬೆಣಕಲ್ ಗ್ರಾಮದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರಕುಶಲ ಪ್ರಶಸ್ತಿ, 15ನೇ ಕೊಪ್ಪಳ ಜಿಲ್ಲಾ ಉತ್ಸವ ಕರಕುಶಲ ಪ್ರಶಸ್ತಿ, 16ನೇ ಕೊಪ್ಪಳ ಜಿಲ್ಲಾ ಐಸಿರಿ ಪ್ರಶಸ್ತಿ, ಮತ್ತು ಯಾದಗಿರಿ, ಗುಲ್ಬರ್ಗ, ಬೀದರ್ ,3 ಜಿಲ್ಲೆಗಳಲ್ಲಿ ನೃಪತುಂಗ ಪ್ರಶಸ್ತಿ, ಅಂಜನಾದ್ರಿ ಯಲ್ಲಿ ಸಹಸ್ರಾತ್ ದಿನ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಬೆಂಗಳೂರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಪಾಟೀಲ್ ಪುಟ್ಟಪ್ಪ ಸ್ಮಾರಕ ಪ್ರಶಸ್ತಿ, ಡಾ. ಸಿದ್ದಯ್ಯ ಪುರಾಣಿಕ ಪ್ರಶಸ್ತಿ , ಬಾದಾಮಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಧುನಿಕ ರವಿವರ್ಮ ಎಂಬ ಪ್ರಶಸ್ತಿ ಲಭಿಸಿದ್ದಲ್ಲದೆ ಅನೇಕ ಅವಾರ್ಡ್ ಗಳು ದೊರಕಿದ್ದು, ಇದೇ ಅಗಸ್ಟ್ 31 ರಂದು ಬೆಂಗಳೂರು ಏಷಿಯಾ ಇಂಟರ್ನ್ಯಾಷನಲ್ ಕಲ್ಚರ್ ಅಕಾಡೆಮಿ ವತಿಯಿಂದ ಡಾ. ಪದವಿ ದೊರೆಯಲಿದೆ ಮತ್ತು ನನ್ನ ಕಲೆಯನ್ನು ಮೆಚ್ಚಿ ಸದ್ಯದಲ್ಲಿ ಡೆಲ್ಲಿಯಲ್ಲಿ ವಿಶ್ವಕರ್ಮ ಜಕಣಾಚಾರ್ಯ ಕಟ್ಟಿಗೆ ಕೆತ್ತನೆ ಕೆಲಸಕ್ಕೆ ಅವಾರ್ಡ್ ಕೊಡಲಾಗುವುದು ಎಂದು ಸುದ್ದಿ ಕೇಳಿ ಬಂದಿದೆ.

ಇದೇ ತಿಂಗಳು ಆಗಸ್ಟ್ 24, 25, 26, ರಂದು ನಡೆಯಲಿರುವ 17ನೇ ತಿರುಳುಗನ್ನಡ ಸಾಂಸ್ಕೃತಿಕ ಸಮ್ಮೇಳನದ ಸರ್ವಧ್ಯಕ್ಷನ್ನಾಗಿ ಆಯ್ಕೆ ಮಾಡಲಾಗಿದೆ.

ನನಗೆ ಇಷ್ಟೆಲ್ಲ ಪ್ರಶಸ್ತಿಗಳು, ಅವಾರ್ಡ್, ಲಭಿಸಬೇಕಾದರೆ ನನಗೆ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಕೃಪ ಆಶೀರ್ವಾದ ಮತ್ತು ನನ್ನ ಮಡದಿಯಾದ ಲಕ್ಷ್ಮಿ ದೇವಿ ಮತ್ತು ನನ್ನ ಮಕ್ಕಳಾದ ಶ್ವೇತ, ವಿನೋದ, ಕಾವ್ಯ ಇವರುಗಳ ಸಹಕಾರ ದಿಂದ ಎಂದು ಮಾತನಾಡಿದರು.

ಮತ್ತು ನಾನು ಈ ವೃತ್ತಿಯನ್ನು ನನ್ನ ಮಗನಿಗೂ ಹಾಗೂ ಇನ್ನೂ ಅನೇಕ ಜನರಿಗೆ ಶ್ರೀ ಗವಿಸಿದ್ದೇಶ್ವರ ಕಟ್ಟೆಗೆ ಕುಸರಿ ಕೆಲಸ ಶಾಲೆಯನ್ನು ನೆರವೇರಿಸಿದ್ದು ನನ್ನ ವಿದ್ಯೆಯನ್ನು ಇನ್ನು ಅನೇಕ ವಿದ್ಯಾರ್ಥಿಗಳಿಗೆ ಕಲಿಸಿಕೊಡುತ್ತಿದ್ದೇನೆ ಎಂದು ಹೇಳಿದರು.

ಯಾವುದೇ ನಿರೀಕ್ಷೆ ಅಥವಾ ಹೆಚ್ಚಿನ ಬೇಡಿಕೆ ಇಲ್ಲದೆ ರಥಗಳನ್ನು ಮತ್ತು ಕಟ್ಟಿಗೆಯ ಕೆತ್ತನೆಯ ಕೆಲಸಗಳನ್ನ ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಇವರಿಗೆ ನಮಗೆ ಹಾಗೂ ನಮ್ಮ ಕುಟುಂಬದವರಿಗೆ ತುಂಬಾ ಸಂತೋಷವಾಗಿದೆ ಎಂದು ಪತ್ನಿ ಲಕ್ಷ್ಮಿ ದೇವಿ ಮಾತನಾಡಿದರು.

ನಂತರ ತಂದೆಯ ಬಗ್ಗೆ ಹಿರಿಯ ಮಗಳಾದ ಶ್ವೇತ ತನ್ನ ತಂದೆಯ ಕಷ್ಟಕರ ಜೀವನದಲ್ಲಿ ನಮ್ಮ ವಿದ್ಯಾಭ್ಯಾಸವನ್ನ ಮಾಡಿಸುತ್ತಿದ್ದು ಅವರ ಆಸೆಯಂತೆಯೇ ನಾನು ಡಾಕ್ಟರ್ ಆಗುವ ಬಯಕೆ ಹೊಂದಿದ್ದು ಅತ್ಯಂತ ಕಠಿಣ ಕ್ರಮದೊಂದಿಗೆ ಕೆಲಸಗಳನ್ನು ನಿರ್ವಹಿಸಿ. ನನ್ನ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡುತ್ತಿದ್ದು ಅವರ ಆಸೆಯನ್ನು ಪೂರೈಸುವಲ್ಲಿ ಯಶಸ್ವಿಯಾಗುತ್ತೇನೆ ನನ್ನ ತಂದೆಯ ಕೆಲಸ ನಮಗೆಲ್ಲರಿಗೂ ಅತ್ಯಂತ ಸಂತೋಷವೆನಿಸುತ್ತದೆ, ಮತ್ತು ನಮ್ಮ ತಂದೆಯವರ ಕೆಲಸದಿಂದ ನಮ್ಮನ್ನು ಎಲ್ಲೆಲ್ಲೂ ಗುರುತಿಸುತ್ತಾರೆ ಎಂದು ಮಾತನಾಡಿದರು.

ಇಂತಹ ಉತ್ತಮ ಕಟ್ಟಿಗೆಯ ಕುಸುರಿ ಕೆಲಸದಲ್ಲಿ ಇನ್ನೂ ಅನೇಕ ಪ್ರಶಸ್ತಿಗಳು ಅವಾರ್ಡ್ಗಳು ದೊರೆತು ಇನ್ನು ಎತ್ತರ ಮಟ್ಟಕ್ಕೆ ನಮ್ಮ ಕೊಪ್ಪಳ ಜಿಲ್ಲೆಯ ಕುಕುನೂರು ತಾಲೂಕಿನ ಬಾನಾಪುರ ಗ್ರಾಮದ ಹೆಸರು ಎಲ್ಲಲ್ಲೂ ಹಬ್ಬಲಿ ಎಂದು ಗ್ರಾಮದ ಸಾರ್ವಜನಿಕರು ಶುಭ ಹಾರೈಸಿದ್ದಾರೆ.

ವರದಿ :ಚೆನ್ನಯ್ಯ ಹಿರೇಮಠ.


Share News
ನಿಜವಾದ ಮತ್ತು ವಿಶ್ವಾಸಾರ್ಹ ಸುದ್ದಿ ಮಾಧ್ಯಮಕ್ಕೆ ಬಲ ತುಂಬಲು ನೆರವು ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ Scan Code ಮೂಲಕ ನೆರವು ನೀಡಿ

Related Articles

Leave a Reply

Your email address will not be published. Required fields are marked *

Back to top button
error: Content is protected !!