ಜಮೀನು ದಾರಿ ಸಮಸ್ಯೆ ಇರ್ತಾರ್ಥಕ್ಕೆ ಕಾನೂನು ತಿದ್ದುಪಡೆ ಮಾಡಲು – ಜಿಲ್ಲಾಧಿಕಾರಿ ಮೂಲಕ ಸಿ. ಎಂ ಗೆ ಮನವಿ.
ಜಮೀನು ದಾರಿ ಸಮಸ್ಯೆ ಇರ್ತಾರ್ಥಕ್ಕೆ ಕಾನೂನು ತಿದ್ದುಪಡೆ ಮಾಡಲು – ಜಿಲ್ಲಾಧಿಕಾರಿ ಮೂಲಕ ಸಿ. ಎಂ ಗೆ ಮನವಿ.
ಯಾದಗಿರಿ – ಸತ್ಯಮಿಥ್ಯ (ಆಗಸ್ಟ್ -08).
ರಾಜ್ಯದ ಜಮೀನು ದಾರಿ ಸಮಸ್ಯೆ ಇತ್ಯರ್ಥಕ್ಕಾಗಿ ಕಾನೂನು ತಿದ್ದುಪಡೆ ಮಾಡಿ ದಾರಿ ಸಮಸ್ಯೆ ಬಗ್ಗೆ ಹರಿಸುವ ಅಧಿಕಾರವನ್ನು ರಾಜ್ಯದ ಎಲ್ಲಾ ತಹಶೀಲ್ದಾರ ಗಳಿಗೆ ಸಂಪೂರ್ಣ ಅಧಿಕಾರ ವಹಿಸಿ ಕೊಡುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತರ ಸಂಘ ರಾಜ್ಯ ಘಟಕದ ವತಿಯಿಂದ ಪದಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಹಾಗೂ ಕಂದಾಯ ಸಚಿವರಿಗೆ ಯಾದಗಿರಿ ಜಿಲ್ಲಾಧಿಕಾರಿಯಾದ ಡಾ.ಸುಶೀಲ. ಬಿ. ಸಲ್ಲಿಸುವದರ ಮೂಲಕ ಬುಧವಾರದಂದು ಯಾದಗಿರಿ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು..
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರೈತರ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ್ ಕುಲಕರ್ಣಿ ಮಾತನಾಡಿ ರಾಜ್ಯಾದ್ಯಂತ ರೈತರು ತಮ್ಮ ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆದುರಿಸುತ್ತಿದ್ದಾರೆ ದಾರಿ ಕೊಡದ ಕಾರಣ ಜಮೀನು ಬೀಳು ಬಿದ್ದು ಬಿತ್ತನೆ ಆಗದೆ ರೈತ ಕುಟುಂಬವು ಉಪವಾಸ ಬಿದ್ದಿವೆ.
ಹಳ್ಳಿಗಳಲ್ಲಿ ದಾರಿಗಾಗಿ ರೈತರ ಮಧ್ಯೆ ದ್ವೇಷದ ವಾತಾವರಣ ಉಂಟಾಗಿ ಒಡೆದಾಟಗಳು ನಡೆಯುತ್ತಿದ್ದು ರಾಜ್ಯದ ಕೆಲವು ಕಡೆ ಕೊಲೆಯಾದ ಉದಾಹರಣೆಗಳು ಸಹ ಇವೆ.
ನಕ್ಷೆಯಲ್ಲಿ ದಾರಿ ಗುರುತು ಇದ್ದರೆ ಮಾತ್ರ ಐದು ಹೋಗಲು ಅವಕಾಶ ಕೊಡುತ್ತಾರೆ ಇಲ್ಲದಿದ್ದರೆ ನ್ಯಾಯಾಲಯಕ್ಕೆ ಹೋಗಬೇಕು ಪ್ರಕರಣ ಇತ್ಯರ್ಥವಾಗಲು ಕನಿಷ್ಠ ಹತ್ತರಿಂದ ಹನ್ನೆರಡು ವರ್ಷ ಬೇಕಾಗುತ್ತದೆ ಅಲ್ಲಿಯವರೆಗೂ ರೈತರ ಪರಿಸ್ಥಿತಿ ಏನಾಗುತ್ತದೆ ಎಂಬುದು ಸರ್ಕಾರ ಗಂಭೀರವಾಗಿ ಆಲೋಚನೆ ಮಾಡಬೇಕು
ಕಳೆದ ಹತ್ತು ವರ್ಷಗಳಿಂದ ಹೋರಾಟ ಮಾಡಿದ್ದ ಪರಿಣಾಮ. ಸರ್ಕಾರದ ಗಮನಕ್ಕೆ ಬಂದ ನಂತರ ಕಾಟಾಚಾರಕ್ಕೆ ಎಂಬಂತೆ ಸುತ್ತಲೇ ಹೊರಡಿಸಿತು ಆದರೆ ರಾಜ್ಯದ ಯಾರೊಬ್ಬರು ತಹಶೀಲ್ದಾರರು ಇಲ್ಲಿವರೆಗೂ ದಾರಿ ಸುಗಮಗೊಳಿಸಿದ ಉದಾಹರಣೆ ಇಲ್ಲ.
ಅನುಭೋಗದ ಹಕ್ಕು1882- 1973 ಅಧಿನಿಯಮ 197ರ ಪ್ರಕಾರ ಅಂದರೆ ಈಜಾಮೆಂಟ್ ಪ್ರಕಾರ(Easement Rights) ರೈತರು ಒಂದು ದಾರಿಯಲ್ಲಿ ಕನಿಷ್ಠ 25 ವರ್ಷದಿಂದ ಬಳಸುತ್ತಿದ್ದಾರೆ ಇದನ್ನು ವಹಿವಾಟ ದಾರಿಯನ್ನು ಕಾಯಂಗೊಳಿಸಬೇಕೆಂದು ಸರ್ಕಾರದ ಸುತ್ತೋಲೆಯಲ್ಲಿ ತಿಳಿಸಿದರು ತಹಶೀಲ್ದಾರರು ಸರ್ಕಾರದ ಸುತ್ತೋಲೆ ಸರಿಯಿಲ್ಲ ಎಂದು ಹೇಳುತ್ತಿದ್ದಾರೆ..
ರಾಜ್ಯದಲ್ಲಿ ರೈತರ ದಾರಿ ಸಮಸ್ಯೆಯಾಗಿಯೇ ಉಳಿದಿದೆ ಆದ್ದರಿಂದ ಈ ದಾರಿ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ದಾರಿ ಸಮಸ್ಯೆ ಇತ್ಯರ್ತಕ್ಕಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು..
ವಿಶೇಷ ಸಚಿವ ಸಂಪುಟ ಸಭೆ ಕರೆದು ದಾರಿ ಸಮಸ್ಯೆ ಇತ್ಯಕ್ಕಾಗಿ ಕಾನೂನು ತಿದ್ದುಪಡಿ ಮಾಡುವುದು ಹಾಗೂ ಗ್ರಾಮ ನಕ್ಷೆಗಳಲ್ಲಿ ದಾರಿ ಗುರುತು ಮಾಡಬೇಕೆಂದು ಮನವಿಯಲ್ಲಿ ಸರ್ಕಾರಕ್ಕೆ ಒತ್ತಾಯಿಸಿದರು ಇದೇ ಸಂದರ್ಭದಲ್ಲಿ ಪ್ರಭುಗೌಡ ಪೋತರೆಡ್ಡಿ ರೈತರ ಮುಖಂಡರು ಹಾಗೂ ಜಯ ಕರ್ನಾಟಕ ಸಂಘಟನೆ ಹುಣಸಗಿ ತಾಲೂಕು ಅಧ್ಯಕ್ಷರು. ಟೋಪಣ್ಣ ಹಳ್ಳಿ ಸಾಗರ್ ಜಯ ಕರ್ನಾಟಕ ಸಂಘಟನೆ ಶಹಾಪುರ. ದಾವಲ್ ಸಾಬ್ ಗೂಗಿ. ಬಾಲಚಂದ್ರ ಚೌಹಾನ್. ಮಹಾಂತೇಶ್ ಪವಾರ್ ಇದ್ದರು.
ವರದಿ : ಶಿವು ರಾಠೋಡ್.