
ರೋಣ/ಲೋಕೋಪಯೋಗಿ ಸಹಾಯಕ ಇಂಜಿನಿಯರ್ ರಾಠೋಡ್ ಲೋಕಾಯುಕ್ತ ಬಲೆಗೆ.
ಗಜೇಂದ್ರಗಡ:ಸತ್ಯಮಿಥ್ಯ(ಅ-08).
ಗುತ್ತಿಗೆದಾರನ ಬಿಲ್ ಪಾವತಿಸಲು ಲಂಚ ಕೇಳಿದ್ದ ರೋಣ ಲೋಕೋಪಯೋಗಿ ಉಪವಿಭಾಗದ ಸಹಾಯಕ ಇಂಜಿನಿಯರ್ ಮಹೇಶ ರಾಠೋಡ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇಂದು ಗುತ್ತಿಗೆದಾರ ಶರಣಪ್ಪ ತಂದೆ ಸಾಬಣ್ಣ ಸಾ: ತಂಗಡಗಿ ತಾ:ಶಹಾಪುರ ಜಿ: ಯಾದಗಿರಿ ಇವರು ಗದಗ ಲೋಕಾಯುಕ್ತ ಪೊಲೀಸ್ ಠಾಣೆಗೆ ಹಾಜರಾಗಿ ನೀಡಿದ ದೂರಿನನ್ವಯ ಈ ದಾಳಿಯಾಗಿದೆ.
ಗುತ್ತಿಗೆದಾರ ಶರಣಪ್ಪ 2ನೇ ದರ್ಜೆ ಗುತ್ತಿಗೆದಾರರಾಗಿದ್ದು, ಇವರು ಆನ್‌ಲೈನ್ ಮೂಲಕ ರೋಣ ತಾಲೂಕಿನ 01 ಕಾಮಗಾರಿ ಗುತ್ತಿಗೆ ಪಡೆದು ಕೆಲಸ ಮಾಡಲು ಅರ್ಜಿಸಲ್ಲಿಸಿದ್ದು, ಆ ಪ್ರಕಾರ ಸದರಿಯವರು 34 ಲಕ್ಷದ ಕೆಲಸ ಮಾಡಿ ಆರು ತಿಂಗಳು ಗತಿಸಿದರು ಸಹ ಸದರಿಯವರಿಗೆ ಬಿಲ್ ಮಾಡಲು ರೋಣ ಲೋಕೋಪಯೋಗಿ ಉಪವಿಭಾಗದ ಸಹಾಯಕ ಇಂಜಿನಿಯರ್ ಆದ ಮಹೇಶ ರಾಠೋಡ ಇವರು 4,60,000/- ರೂಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ದೂರು ದಾಖಲಿಸಿದ್ದಾರೆ.
ಆ ಪ್ರಕಾರ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಅಧಿಕಾರಿಗಳು ಗಜೇಂದ್ರಗಡದ ಬಂಡಿ ಪೆಟ್ರೋಲ್ ಬಂಕ್‌ದ ಸಮೀಪದ ಬಯಲು ಜಾಗೆಯಲ್ಲಿ ದೂರುದಾರರಿಂದ ಮುಂಗಡವಾಗಿ 3,00,000/- ರೂಗಳ ಲಂಚದ ಪಡೆಯುವಾಗ ಟ್ರ್ಯಾಪ್ ಆಗಿ ಈ ದಿನ ದಸ್ತಗೀರ ಮಾಡಿರುತ್ತಾರೆ.
ಈ ಯಶಸ್ವಿ ಕಾರ್ಯಾಚರಣೆಯನ್ನು ಎಸ್.ಟಿ.ಸಿದ್ದಲಿಂಗಪ್ಪ, ಪೊಲೀಸ್ ಅಧೀಕ್ಷಕರು ಕರ್ನಾಟಕ ಲೋಕಾಯುಕ್ತ ಧಾರವಾಡರವರ ಮಾರ್ಗದರ್ಶನದಲ್ಲಿ, ವಿಜಯ ಬಿರಾದಾರ, ಪೊಲೀಸ್ ಉಪಾಧೀಕ್ಷಕರು, ಕರ್ನಾಟಕ ಲೋಕಾಯುಕ್ತ ಗದಗರವರ ನೇತೃತ್ವದಲ್ಲಿ, ತನಿಖಾಧಿಕಾರಿ ಶ್ರೀಮತಿ ಎಸ್.ಎಸ್.ತೇಲಿ ಪಿ.ಐ ಹಾಗೂ ಶ್ರೀ ಪರಮೇಶ್ವರ ಕವಟಗಿ ಪಿ.ಐ ಮತ್ತು ಲೋಕಾಯುಕ್ತ ಸಿಬ್ಬಂದಿಯವರಾದ ಎಮ್.ಎಮ್.ಆಯ್ಯನಗೌಡ್ರ, ಎಮ್.ಬಿ.ಬಾರಡ್ಡಿ, ಎಮ್.ಎಸ್.ದಿಡಗೂರ, ಹೆಚ್.ಐ.ದೇಪುರವಾಲಾ, ಪ್ರಸಾದ ಪಿರಿಮಳ, ಎಸ್.ವಿ.ನೈನಾಪುರ, ಎಮ್.ಆರ್.ಹಿರೇಮಠ, ಇರ್ಫಾನ್ ಸೈಫಣ್ಣವರ ಪಾಲ್ಗೊಂಡಿರುತ್ತಾರೆ.
ವರದಿ :ಸುರೇಶ ಬಂಡಾರಿ.