ಹಟ್ಟಿ ಚಿನ್ನದ ಗಣಿ : ಕಾರ್ಮಿಕರಿಗೆ ನೀಡಿದ ಅಡುಗೆಯಲ್ಲಿ ಇಲಿ – ಅಧಿಕಾರಿಗಳ ಬೇಜವಾಬ್ದಾರಿತನ.
ಹಟ್ಟಿ ಚಿನ್ನದ ಗಣಿ:ಸತ್ಯಮಿಥ್ಯ (ಆಗಸ್ಟ್ -08)
ಜೀವಂತ ಇಲಿಗಳು ಕಂಡರೆ ಜನರು ಭಯಬೀಳುವ ಸ್ಥಿತಿಯಲ್ಲಿ ಅಡುಗೆಯಲ್ಲಿ ಒಂದು ಇಲಿ ಕಂಡರೆ ಏನಾದಿತು ಬೇಜವಾಬ್ದಾರಿ ಉತ್ತರ ನೀಡಿದ ಅಧಿಕಾರ- ಜಗನ್ ಮೋಹನ್
ಹಟ್ಟಿ ಚಿನ್ನದ ಗಣಿ ಬೆಳಗ್ಗಿನ ಉಪಹಾರ ಅವಲಕ್ಕಿಯಲ್ಲಿ ಇಲಿ ಪತ್ತೆ. ಈ ಘಟನೆ ಉಪಹಾರದ ಉಸ್ತುವಾರಿ ಅಧಿಕಾರಿ ಜಗನ ಮೊಹನ್ ಅವರ ಉಪಸ್ಥಿತಿಯಲ್ಲಿ ನಡೆದದ್ದು ವಿಪರ್ಯಾಸ.
ಹಟ್ಟಿ ಚಿನ್ನದ ಗಣಿ ಕಂಪನಿಯ ಕ್ಯಾಂಟಿನಲ್ಲಿ ಸಾವಿರಾರು ಕಾರ್ಮಿಕರಿಗೆ ಪ್ರತಿ ದಿನವೂ ಅಡುಗೆ ಮಾಡಲಾಗುತ್ತದೆ. ಆದರೆ ಅಡುಗೆ ಮನೆ ಮಾತ್ರ ಇಲಿ ಏಗ್ಗಣದಿಂದ ಕೂಡಿದೆ ಎನ್ನುತ್ತಾರೆ ಇಲ್ಲಿನ ಕಾರ್ಮಿಕರು .
ಈ ಘಟನೆ ಎಂದಿನಂತೆ ಮಂಗಳವಾರವೂ ಸಹ ಬೆಳಿಗ್ಗೆ ಕಾರ್ಮಿಕರಿಗಾಗಿ ಉಪಹಾರ ಮಾಡುವಾಗ ಉಪಹಾರಕ್ಕೆ ಬಳಸುವ ಸಾಮಾಗ್ರಿಗಳನ್ನು ಸರಿಯಾಗಿ ಪರಿಶೀಲಿಸದ ಅಧಿಕಾರಿಗಳ ನಿರ್ಲಕ್ಷ್ಯವೋ, ಅಡುಗೆ ತಯಾರಿಸುವ ಭಟ್ಟರ ಬೇಜಬ್ದಾರಿಯೋ ಅಡುಗೆಯಲ್ಲಿ ಎರಡು ಇಲಿಗಳು ಪ್ರತ್ಯಕ್ಷವಾಗಿವೆ.
ಚಿತ್ರ : ಜಗನ್ ಮೋಹನ್
ಕಾರ್ಮಿಕರು ಮಂಗಳವಾರ ಉಪಹಾರ ಸೇವಿಸುವಾಗ ತಟ್ಟೆಯಲ್ಲಿಯೇ ಒಂದು ಇಲಿ ಪ್ರತ್ಯಕ್ಷವಾಗಿದ್ದು ಇಲಿಯೂಟ ಮಾಡಿದವರು ಹೊಟ್ಟೆತೊಳೆದುಕೊಂಡಿದ್ದಾರೆ ಕೆಲವರಿಗೆ ಇಲಿಯೂಟ ಸೇವಿಸಿರೋದು ಮಾಹಿತಿಯೇ ಇಲ್ಲದಂತ್ತಾಗಿದೆ.ಅಂದರೆ ಪ್ರತಿ ದಿನವೂ ಕಾರ್ಮಿಕರಿಗೆ ನೀಡುವ ಊಟದಲ್ಲಿ ಏನೇನಿದೆ ಎನ್ನುವದು ಇಲ್ಲಿಯವರೆಗೆ ಯಾರು ಅರಿತಂತೆ ಕಾಣುತಿಲ್ಲ. ಇಲಿ ಬಿದ್ದರೆನು ಹೆಂಗಣ ಹೊದರೆನು ಅನ್ನುವಂತೆ ಅಧಿಕಾರಿಗಳು ಕಾರ್ಮಿಕರಿಗೆ ವಿಷದೂಟ ತಿನ್ನಿಸುವಲ್ಲಿ ಮಗ್ನರಾಗಿದ್ದಾರೆ.
ಇನ್ನಾದರೂ ಗಣಿಯ ಮೇಲಾಧಿಕಾರಿಗಳು ಕ್ಯಾಂಟಿನಗೆ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮಕೈಗೊಳ್ಳುತ್ತಾರೋ ಅಥವಾ ಇನ್ನೂ ಕಾರ್ಮಿಕರಿಗೆ ವಿಷದೂಟ ಉಣ್ಣಿಸುತ್ತಾರೋ ಕಾದು ನೋಡಬೇಕಾಗಿದೆ.
ವರದಿ : ಶಿವು ರಾಠೋಡ್.