
ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 1, 3 ಮತ್ತು 5 ನೇ ಸೆಮಿಸ್ಟರನ ಫಲಿತಾಂಶ ಪ್ರಕಟ
ಮುಗಳಖೋಡ/ಬೆಳಗಾವಿ:ಸತ್ಯಮಿಥ್ಯ (ಆಗಸ್ಟ್ -08)
ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ 2023-24 ನೇ ಸಾಲಿನ ಮಾರ್ಚ್/ಏಪ್ರಿಲ್ 2024 ತಿಂಗಳಲ್ಲಿ ನಡೆದ ಸ್ನಾತಕ ಪದವಿಗಳಾದ ಬಿ.ಕಾಂ 1, 3 ಮತ್ತು 5 ನೇ ಸೆಮಿಸ್ಟರನ ರೆಗ್ಯುಲರ್ ಮತ್ತು ರಿಪೀಟರ್ ಯುಯುಸಿಎಂಎಸ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಅ.07 ರಂದು ಮತ್ತು ಬಿ.ಎ 1, 3 ಮತ್ತು 5 ನೇ ಸೆಮಿಸ್ಟರನ ರೆಗ್ಯುಲರ್ ಮತ್ತು ರಿಪೀಟರ್ ಯುಸಿಎಂಎಸ್ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶವನ್ನು ಅ.08 ರಂದು ಪ್ರಕಟಿಸಲಾಗಿದೆ.
ಫಲಿತಾಂಶವನ್ನು ಯುಯುಸಿಎಂಎಸ್
ಸ್ಟೂಡೆಂಟ್ ಪೋರ್ಟಲ್ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಮಹಾವಿದ್ಯಾಲಯಗಳಿಗೆ ಬಿಡುಗಡೆ ಮಾಡಲಾಗಿದೆ ಎಂದು ಮೌಲ್ಯಮಾಪನ ಕುಲಸಚಿವ ಪ್ರೊ. ರವೀಂದ್ರನಾಥ ಕದಮ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ: ಸಂತೋಷ ಮುಗಳಿ