ಗೋರ್ ಸಿಕವಾಡಿ ಸಾಮಾಜಿಕ ಚಳುವಳಿವತಿಯಿಂದ ಭೋಗ್ ಕಾರ್ಯಕ್ರಮ : ಚಂದು ಹರಾವತ.
ಯಾದಗಿರಿ : ಸತ್ಯಮಿಥ್ಯ ( ಆಗಸ್ಟ್ -12).
ಜಿಲ್ಲೆಯ ಹುಣಸಗಿ ತಾಲೂಕಿನ ಬಸವಸಾಗರ ಜಲಾಶಯದ ಸಮೀಪದಲ್ಲಿರುವ ಐ ಬಿ ತಾಂಡದಲ್ಲಿ ಗೋರ ಸಿಕವಾಡಿ ಸಾಮಾಜಿಕ ಚಳುವಳಿವತಿಯಿಂದ ಭೋಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಭೋಗ ಕಾರ್ಯಕ್ರಮ ಪ್ರತಿ ವರ್ಷದಂತೆ ಈ ವರ್ಷವೂ ಶ್ರಾವಣ ಮಾಸದಲ್ಲಿ ಗೋರ್ ಬಂಜಾರ ಸಮುದಾಯದ ಪ್ರತಿಯೊಂದು ತಾಂಡದಲ್ಲಿ ಮನೆಮನೆಗೂ 30 ದಿನದ 30 ಭೋಗ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ಸದ್ಗುರು ಸೇವಾಲಾಲ್ ಮಾಹಾರಾಜ್ ರವರನ್ನು ಮತ್ತು ಶ್ರೀ ಮರಿಯಮ್ಮ ದೇವಿಯ ಹೆಸರಿನಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ..
ಇದರಲ್ಲಿ ಗೋರ್ ಬಂಜಾರ ಸಮಾಜದಲ್ಲಿ ನಡೆಯುತ್ತಿರುವ ಅಂಧಕಾರ – ಮೌಡ್ಯತೆ, ವರದಕ್ಷಣೆ, ಮಕ್ಕಳಿಗೆ ವಿದ್ಯಾಭ್ಯಾಸ ಕೊಡದೆ ಇರುವುದು, ಆರ್ಥಿಕ, ಸಾಮಾಜಿಕ, ಆಡಳಿತಾತ್ಮಕ. ಗೋರ್ ಬಂಜಾರ ಸಮುದಾಯದಲ್ಲಿ ಎಷ್ಟರಮಟ್ಟಿಗೆ ನಾವಿದ್ದೇವೆ ಎಂಬುದರ ಬಗ್ಗೆ ಒಂದು ಸಮಾಲೋಚನೆಯನ್ನು ನಡೆಸಿದರು.
ಭೂಕೇನ ಬಾಟಿ ಖರಾಯೇರೋ,ತರಸೇನ ಪಾಣಿ ಪರಾಯೇರೋ ,ಬೋಲಾಡಿ ಪಡಮೇಲೋಜೆನ ವಾಟ ವತಾಯೇರೋ , ಆಶ್ರೋ ಚೇಯಿಜೇನ ಆಶ್ರೋ ದೇರೋ.
ಅರ್ಥ – ಹಸಿವಿನಲ್ಲಿ ಇರುವವನಿಗೆ ಊಟ ಬಡಿಸಿ, ನೀರು ಧಣಿದು ಬಂದವರಿಗೆ ನೀರು ಕೊಡಿ, ಜೀವನದಲ್ಲಿ ದಾರಿ ತಪ್ಪಿದವರಿಗೆ ಸರಿಯಾದ ಮಾರ್ಗ ತೋರಿಸಿ, ಯಾರು ಕಷ್ಟದಲ್ಲಿ ಇರುತ್ತಾರೋ ಅವರಿಗೆ ಸಹಾಯ ಮಾಡಿ. ಎಂದು ಸದ್ಗುರು ಸೇವಾಲಾಲ್ ಮಾಹಾರಾಜ್ ಹೇಳಿದ್ದಾರೆ ಎಂದು ತಿಳಿಸಿದರು.
ಹಾಗೆ ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಗೋರ್ ಸಮಾಜದ ಯೋಧರ ಬಗ್ಗೆ ನಮ್ಮ ಇತಿಹಾಸ ಪುಟದಲ್ಲಿ ಎಲ್ಲಿಯೂ ಕಾಣದಂತೆ ಮರೆಮಾಚಿಸಿದ್ದಾರೆ. ನೋವಿನ ವಿಷಯವೇನೆಂದರೆ ಬ್ರಿಟಿಷರ ಜೊತೆ ಮೊದಲ ಬಾರಿಗೆ ಗೋರ್ ಸಮಾಜದವತಿಯಿಂದ (ಟ್ಯಾಕ್ಸ್) ತೆರಿಗೆ ವಿಚಾರವಾಗಿ ಧ್ವನಿಯೆತ್ತಿದ ವೀರರ ಹೆಸರು ಎಲ್ಲಿಯೂ ಕಾಣದಂತಾಗಿದೆ.. ಅದೇನಪ್ಪ ಅಂದರೆ ಮೊದಲ ಬಾರಿಗೆ “ಮಾರೋ ತಾಂಡೋ ಮಾರೋ ರಾಜ್ ” ಎಂಬ ಧ್ವನಿಯನ್ನು ಎತ್ತಿದ ಮೊದಲ ನಾಯಕನೇ ಸದ್ಗುರು ಸೇವಾಲಾಲ್ ಮಾಹಾರಾಜ್.
ಅಂದರೆ ನಾವು ಯಾಕೆ ತೆರಿಗೆ ಕಟ್ಟಬೇಕು (ಟ್ಯಾಕ್ಸನ್ನ). ನನ್ನ ಊರು ನನ್ನ ಭೂಮಿ ನಿಮಗೇಕೆ ಕಟ್ಟಬೇಕು ತೆರಿಗೆ (ಟ್ಯಾಕ್ಸ್) ಎಂದು ಧ್ವನಿಯೆತ್ತಿದರು.
ಇಂಥ ವೀರಯೋಧನ ಬಗ್ಗೆ ಇತಿಹಾಸದಲ್ಲಿ ಹೆಸರು ಇಲ್ಲದಂತಾಗಿದೆ . ಹೀಗಿದ್ದಲ್ಲಿ ನಾಳೆ ನಾವು ಇದ್ದರೂ ಸತ್ತಂತಾಗುತ್ತದೆ. ಸಮಾಜದ ಅಳಿವಿನ ಅಂಚಿನಲ್ಲಿದೆ ಎಂದು ಗೋರ್ ಸೇನಾ ಸಂಘಟನೆವತಿಯಿಂದ ತಿಳಿಸಿದರು.
ಕೋರೆ ಗೋರೇನ ಸಾಯಿವೇಸ್ , ಜೀವ ಜನಗಾನಿನ ಸಾಯಿವೇಸ್,ಖುಟ ಮುಂಗರೀನ್ ಸಾಯಿವೇಸ,
ಈ ಭೂಮಿ ಮೇಲಿರುವ ಜನಾಂಗಕ್ಕೆ ಹಾಗೂ ಗೋರ್ ಸಮಾಜದ ಜನಾಂಗದವರಿಗೂ ಲೆಸನ್ನು ಬಯರುವುದು , ಪ್ರಕೃತಿಯಲ್ಲಿ ಇರುವ ಜೀವಿಸುತ್ತಿರುವ ಎಲ್ಲಾ ಜೀವ ರಾಶಿಗಳಿಗೂ ಹಾಗೂ ನಿರ್ಜಿವ ವಸ್ತುವಿಗೂ ಲೆಸನ್ನು ಬಯರುವುದು. ಎಂದು ವಿನಂತಿ ಮಾಡಿಕೊಳ್ಳುತ್ತಾರೆ…
ಅದರ ಜೊತೆಯಲ್ಲಿ ಅರ್ಥಗರ್ಭಿತವಾದ ಒಂದು ಗೋಲಾದ ವೃತ್ತವನ್ನು ( ಚೋಕೋ ) ತೆಗೆದು ಅದರ ಮಧ್ಯದಲ್ಲಿ ನಾಲ್ಕು ದಿಕ್ಕುಗಳಂತೆ ತೋರಿಸಿ, ಮಧ್ಯದಲ್ಲಿ ಒಂದು ಕಳಸ ಅದರಲ್ಲಿ 75ರಷ್ಟು ನೀರಿನ ಪ್ರಮಾಣ ಹಾಕಿ ಅದರ ಕಳಸದ ಒಳಗಡೆ ಬೇವಿನ ಎಲೆಯನ್ನು ಹಾಕುತ್ತಾರೆ.. ಇದರ ಅರ್ಥ 3ಸಾವಿರ – 4 ಸಾವಿರ ವರ್ಷಗಳ ಹಿಂದೆ ನಮ್ಮ ಪೂರ್ವಜರು ನಮಗೆ ತಿಳಿಸಿ ಹೋದರು ಇನ್ನುವರೆಗೂ ಇದರ ಬಗ್ಗೆ ಅರ್ಥವಾಗಿಲ್ಲ ಅದೇನಪ್ಪ ಅಂದರೆ ಭೂಮಿಯು ಗೋಲಾಕಾರವಾಗಿದೆ, ಭೂಮಿಯ ಮೇಲಿನ 75ರಷ್ಟು ನೀರಿನ ಅಂಶವಿದೆ , ಹಾಗೆ ಹಚ್ಚು ಹಸುರು ಪ್ರಕೃತಿ ಸಂಕೇತವನ್ನು ಸುಚಿಸುತ್ತದೆ ಎಂಬ ಅರ್ಥವನ್ನು ನೀಡುತ್ತದೆ. ಹೀಗೆ ನಮ್ಮ ಪೂರ್ವಜರು ಭೂಮಿಯ ಆಕಾರದ ಬಗ್ಗೆ ತಿಳಿಸಿದರು . ಆದರೆ ನಾವುಗಳು ಅದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವೇವಾಗಲಿಲ್ಲ.. ಹೀಗಿರುವಾಗ ನಮ್ಮ ಸಮಾಜವನ್ನು ಯಾವ ರೀತಿ ರಕ್ಷಣೆ ಮಾಡಬೇಕು, ಹಾಗೆ ಯಾವ ರೀತಿ ನಮ್ಮ ಪೂರ್ವಜರು ವೈಜ್ಞಾನಿಕ ವಿಚಾರವನ್ನು ಹೊಂದಿದ್ದರು ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗಿದೆ ಎಂದು ತಿಳಿ ಪಡಿಸಿದರು.
ಇದೇ ಸಂದರ್ಭದಲ್ಲಿ ಗೋರ ಸಿಕವಾಡಿ ಸಾಮಾಜಿಕ ಚಳುವಳಿ, ಗೋರ್ ಸೇನಾ ಸಂಘಟನೆ ವತಿಯಿಂದ ನಾರಾಯಣಪುರ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಜಶೇಖರ್ ರಾಠೋಡ ಅವರಿಗೆ ಸನ್ಮಾನ ಹಮ್ಮಿಕೊಂಡಿದ್ದರು ಮತ್ತು ಅದರ ಜೊತೆಯಲ್ಲಿ ಚಂದು ಹರಾವತ್ ಪೊಲೀಸ್ ಇವರಿಗೂ ಸಹ ಸನ್ಮಾನವನ್ನು ಮಾಡಿದರು. ಇದೇ ಸಂದರ್ಭದಲ್ಲಿ ಗೋರ್ ಸೇನಾ ಸಂಘಟನೆಯ ಕರ್ನಾಟಕ ಜೊತೆ ಹುಣಸಗಿ ತಾಲ್ಲೂಕಿನ ಎಲ್ಲಾ ಪದಾಧಿಕಾರಿಗಳು, ಗುರುಹಿರಿಯರು ಇದ್ದರು.
ವರದಿ : ಶಿವು ರಾಠೋಡ್.