
ಮುದ್ದೇಬಿಹಾಳ – ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ.
ವಿಜಯಪುರ : ಸತ್ಯಮಿಥ್ಯ ( ಜುಲೈ -25)
ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಗಬೇನಾಳ ತಾಂಡಾದಲ್ಲಿ ಶ್ರೀ ಸಂತ ಸೇವಾಲಾಲ್ ಹಾಗೂ ಶ್ರೀ ಮರಿಯಮ್ಮ ದೇವಿಯ ಜಾತ್ರಾ ಮಹೋತ್ಸವ ನಡೆಯಿತು.
ವೀರೇಶ್ ನಗರದಿಂದ ನಾಗಬೇನಾಳ ತಾಂಡಾದವರೆಗೂ ಬಂಜಾರ ಸಮುದಾಯದ ಉಡುಪು ತೊಡಗಿ ಧರಿಸಿಕೊಂಡು ಚಿಕ್ಕ ಮಕ್ಕಳು ಹಾಗೂ ಹಿರಿಯರು ಕಳಸ ಮೆರವಣಿಗೆ ಹಾಗೂ ನೃತ್ಯ ಮೂಲಕ ಶ್ರೀ ಸಂತ ಸೇವಾಲಾಲ್ ದೇವಸ್ಥಾನವರೆಗೂ ಮಾಡಲಾಯಿತು.
ಮರುದಿನ ರಾಯಚೂರು ಜಿಲ್ಲೆಯ ಲಿಂಗಸೂರು ತಾಲೂಕಿನ ಐತಿಹಾಸಿಕ ಸ್ಥಳವಾದ ಜಲದುರ್ಗ ಎಂಬ ಸ್ಥಳಕ್ಕೆ ಹೋಗಿ ಎಲ್ಲಮ್ಮ ದೇವಿ ತಮ್ಮ ಬೇಡಿಕೆಗಳನ್ನು ನೆರವೇರಿಸಿದರು ದರ್ಶನ ಪಡೆದು ಪಾವನಾರಾದರು ಅದರ ಜೊತೆಗೆ ಸಾಯಂಕಾಲ ನಾಗಬೇನಾಳ ತಾಂಡದಲ್ಲಿ ಬಂದು ಬಂಜಾರ ಸಮುದಾಯ ಯಾವ ರೀತಿ ಪ್ರಾರಂಭವಾಯಿತು ಆ ಸಮಾಜ ಉದಯ ಮತ್ತು ಅದರ ನೋವು ನಲಿವಿನ ಬಗ್ಗೆ ಒಂದು ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು
ಆ ಭಜನಾ ಕಾರ್ಯಕ್ರಮವನ್ನು ಶಹಪುರ್ ಶರಣು ಹಾಗೂ ಚಿಂಚೋಳಿ ಸಾವಿತ್ರಿಬಾಯಿ ತಂಡವು ಮನರಂಜನೆ ಜೊತೆಗೆ ಸಮಾಜದ ಅರಿವು ಸಮಾಜದ ಬೆಳವಣಿಗೆ ಮತ್ತು ಸಮಾಜದ ಬಗ್ಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದರು…
ಈ ಕಾರ್ಯಕ್ರಮವು ರಾತ್ರಿ 10 ಬೆಳಗಿನ ಜಾವ 7:00 ವರೆಗೂ ನೆರವೇರಿತು. ಹಾಗೂ ಊರಿನ ಗುರು ಹಿರಿಯರು. ಮಹಿಳೆಯರು ಇಡೀ ರಾತ್ರಿ ಭಜನಾ ಕಾರ್ಯಕ್ರಮದಲ್ಲಿ ಇದ್ದರು..
ಕೃಷ್ಣಪ್ಪ ನಾಯಕ. ಆನಂದ ನಾಯಕ್. ಮಂಜುನಾಥ ನಾಯಕ್ ರಘು ಪವಾರ್. ನಾಗಬೇನಾಳ ಯುವಕರ ತಂಡ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು .
ವರದಿ : ಶಿವು ರಾಠೋಡ